ಕೋವಿಡ್-19: ರಾಜ್ಯ ಸರ್ಕಾರದ ಹೊಸ ಪರೀಕ್ಷಾ ನೀತಿ ಏನು?

Test JPG
Published on

ಬೆಂಗಳೂರು: ಕೋವಿಡ್ 19 ಹೆಚ್ಚಾಗಿರುವ ಆರು ರಾಜ್ಯಗಳಿಂದ ವಾಪಸಾಗುವವರು ಕಡ್ಡಾಯವಾಗಿ 5 ರಿಂದ 7 ದಿನಗಳ ಮಧ್ಯೆ ಕೋವಿಡ್- 19 ಪರೀಕ್ಷೆಗೊಳಪಡಬೇಕೆಂದು ರಾಜ್ಯ ಸರ್ಕಾರ ಗುರುವಾರ ಆದೇಶಿಸಿದೆ.

ಮೇ 21 ರಂದು ಹೊರಡಿಸಿದ ರಾಜ್ಯದ ಹೊಸ ಪರೀಕ್ಷಾ ನೀತಿಯ ಒಂದು ಭಾಗ ಇದಾಗಿದೆ.

ಮಹಾರಾಷ್ಟ್ರ, ತಮಿಳುನಾಡು, ಗುಜರಾತ್, ರಾಜಸ್ಥಾನ, ದೆಹಲಿ ಮತ್ತು ಮಧ್ಯ ಪ್ರದೇಶದಿಂದ ವಾಪಸಾಗುವವರು ರೋಗ ಲಕ್ಷಣಗಳಿಲ್ಲದಿದ್ದರೂ ಪರೀಕ್ಷೆಗೊಳಪಡಬೇಕು ಎಂದು ಸರ್ಕಾರ ಆದೇಶಿಸಿದೆ.

ಈ ಆರು ರಾಜ್ಯಗಳ ಪೈಕಿ ಮೂರು ರಾಜ್ಯಗಳು ಅಂದರೆ, ಮಹಾರಾಷ್ಟ್ರ, ತಮಿಳುನಾಡು ಮತ್ತು ಗುಜರಾತ್ ನಿಂದ ಹಿಂದಿರುಗಿದ ಬಹಳಷ್ಟು ಜನರನ್ನು ಪರೀಕ್ಷಿಸಿದಾಗ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಸಿಎಂ ಬಿ ಎಸ್ ಯಡಿಯೂರಪ್ಪ ಮೇ 18 ರಂದು ಮಹಾರಾಷ್ಟ್ರ, ತಮಿಳುನಾಡು ಮತ್ತು ಗುಜರಾತ್ - ಈ ಮೂರು ರಾಜ್ಯಗಳ ಜನರ ಪ್ರವೇಶವನ್ನು ನಿರ್ಬಂಧಿಸಿದ್ದರು. ಈ ನಿರ್ಧಾರದಿಂದಾಗಿ ಕರ್ನಾಟಕಕ್ಕೆ ಪ್ರವೇಶಿಸಲು ಈ ರಾಜ್ಯಗಳಲ್ಲಿ ಸದ್ಯ ಇರುವ ಜನರ 21,607 ವಿನಂತಿಗಳನ್ನು ಸ್ಥಗಿತಗೊಳಿಸಲಾಗಿದೆ.

ಪ್ರಸ್ತುತ ಪರೀಕ್ಷಾ ನೀತಿಯಡಿ, ಇತರ ರಾಜ್ಯಗಳಿಂದ ಕರ್ನಾಟಕಕ್ಕೆ ಮರಳುವ ಎಲ್ಲರನ್ನು ರೋಗಲಕ್ಷಣಗಳಿಗಾಗಿ ಪರೀಕ್ಷಿಸಲಾಗುತ್ತದೆ ಮತ್ತು ಅನಾರೋಗ್ಯದಿಂದ ಬಳಲುತ್ತಿರುವವರಿಗೆ COVID-19 ಪರೀಕ್ಷಿಸಲಾಗುತ್ತದೆ ಮತ್ತು ಆಸ್ಪತ್ರೆಯ ಕ್ವಾರಂಟೈನ್​​ಗೆ ಕಳುಹಿಸಲಾಗುತ್ತದೆ. ರೋಗಲಕ್ಷಣವಿಲ್ಲದವರನ್ನು 14 ದಿನಗಳವರೆಗೆ ಸಾಂಸ್ಥಿಕ ಕ್ವಾರಂಟೈನ್​​ಗೆ ಕಳುಹಿಸಲಾಗುತ್ತದೆ ಮತ್ತು ಬಿಡುಗಡೆಯ ಮೊದಲು ಪರೀಕ್ಷಿಸಲಾಗುತ್ತದೆ.

ರೋಗಲಕ್ಷಣವಿಲ್ಲದವರು ಕೋವಿಡ್ ಪ್ರಕರಣಗಳು ಹೆಚ್ಚಿರುವ ರಾಜ್ಯಗಳಿಂದ ಆಗಮಿಸಿದ 5 ಮತ್ತು 7 ನೇ ದಿನದ ನಡುವೆ ಒಮ್ಮೆ ಪರೀಕ್ಷೆಗೊಳಪಡಬೇಕೆಂದು ಗುರುವಾರದ ಆದೇಶದಲ್ಲಿ ಸರ್ಕಾರ ಸೂಚಿಸಿದೆ.

ಗುಜರಾತ್, ಮಹಾರಾಷ್ಟ್ರ, ತಮಿಳುನಾಡಿನ ಜನರಿಗೆ ಮೇ 31 ರವರೆಗೆ ಪ್ರವೇಶಕ್ಕೆ ಅನುಮತಿಸದಿರಲು ನಿರ್ಧರಿಸಿದ್ದು, ಅವರಿಗೆ ಹಂತ ಹಂತವಾಗಿ ಅವಕಾಶ ನೀಡಲಾಗುವುದು ಎಂದು ಸಿಎಂ ಸೋಮವಾರ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net