ಕರ್ನಾಟಕ ಸಂದಿಂದ ನಾಡಹಬ್ಬ ದಸರಾಗೆ ಚಾಲನೆ ಅ. 3ರಿಂದ

je721538035802367-abc
Published on

ರಾಣೆಬೆನ್ನೂರ: ಇಲ್ಲಿಯ ಕರ್ನಾಟಕ ಸಂದ ವತಿಯಿಂದ ನಾಡಹಬ್ಬ ದಸರಾಗೆ ಅ. 3ರಂದು ಸಂಜೆ 6.30ಕ್ಕೆ ಇಲ್ಲಿಯ ಆಲೂರ ವೆಂಕಟರಾವ್​ ರಂಗಮಂದಿರದ ಕಾಳಿದಾಸ ನಾಯ್ಕ ವೇದಿಕೆಯಲ್ಲಿ ಚಾಲನೆ ನೀಡಲಾಗುವುದು.
ಬೆಂಗಳೂರಿನ ಸಾಹಿತಿ ಕೆ.ಪಿ. ಪುತ್ತೂರಾಯರು ಸಮಾರಂಭ ಉದ್ಘಾಟಿಸುವರು ಹಾಗೂ ಆಧುನಿಕ ಜೀವನದಲ್ಲಿ ದಾಸ-ವಚನ ಸಾಹಿತ್ಯಗಳ ಪ್ರಭಾವ ಕುರಿತು ಉಪನ್ಯಾಸ ನೀಡುವರು. ಸಂದ ಅಧ್ಯಕ್ಷ ಸಂಜೀವ ಶಿರಹಟ್ಟಿ ಅಧ್ಯಕ್ಷತೆ ವಹಿಸುವರು. ಕೆವಿಜಿ ಬ್ಯಾಂಕ್​ನ ಪ್ರಬಂಧಕ ಶಂಕರಬಾಬು ಬಿಲ್ಲೂರ ಮತ್ತಿತರರು ಪಾಲ್ಗೊಳ್ಳುವರು.
ಅ. 3ರಿಂದ 11ರ ವರೆಗೆ ವಿವಿಧ ಕಲಾತಂಡಗಳಿಂದ ಸಾಂಸತಿಕ ಕಾರ್ಯಕ್ರಮ, ಸಂಗೀತ ಸೇರಿ ವಿವಿಧ ಕಾರ್ಯಕ್ರಮ ಜರುಗಲಿವೆ ಎಂದು ಸಂದ ಅಧ್ಯಕ್ಷ ಸಂಜೀವ ಶಿರಹಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net