

ಬೆಂಗಳೂರು: ಶಕ್ತಿ ಯೋಜನೆ ಇನ್ನೂ 10 ವರ್ಷ ಇರುತ್ತದೆ. ಏಕೆಂದರೆ ಐದು ವರ್ಷವಾದ ಬಳಿಕ ನಾವೇ ಮತ್ತೆ ಅಧಿಕಾರಕ್ಕೆ ಬರುತ್ತೇವೆ. ಮುಂದೆ ಬಿಜೆಪಿಯವರು 35 ಕ್ಕೆ ಇಳಿಯುತ್ತಾರೆ ಎಂದು ಸಚಿವ ರಾಮಲಿಂಗಾರೆಡ್ಡಿ ಹೇಳಿದರು. ಲೋಕಸಭಾ ಚುನಾವಣೆ ಬಳಿಕ ಶಕ್ತಿ ಯೋಜನೆ ನಿಂತು ಹೋಗುತ್ತೆ ಎಂದು ವಿಪಕ್ಷಗಳು ಮಾತನಾಡುತ್ತಿರುವ ವಿಚಾರಕ್ಕೆ ಈ ರೀತಿಯಾಗಿ ಪ್ರತಿಕ್ರಿಯಿಸಿದರು.
ಡಿಸೆಂಬರ್ಗೆ ಬಿಬಿಎಂಪಿ ಚುನಾವಣೆ ಫಿಕ್ಸ್. ಶಾಸಕರಿಗೆ ಇಷ್ಟ ಇದ್ಯೋ ಇಲ್ವೋ ಡಿಸೆಂಬರ್ಗೆ ಚುನಾವಣೆ. ಎಲ್ಲಾ ರೀತಿಯ ತಯಾರಿ ನಡೆಯುತ್ತಿದೆ. ಚುನಾವಣೆ ಬಗ್ಗೆ ಸಿಎಂ, ಡಿಸಿಎಂ ಮಾತಾಡಿದ್ದಾರೆ ಎಂದು ಇದೇ ಸಂದರ್ಭದಲ್ಲಿ ರಾಮಲಿಂಗಾರೆಡ್ಡಿ ತಿಳಿಸಿದರು.
ರಾಜ್ಯಪಾಲರಿಗೆ ಕೋಟಾ ಶ್ರೀನಿವಾಸ ಪೂಜಾರಿ ಪತ್ರ ಬರೆದಿರುವ ವಿಚಾರವಾಗಿ ಮಾತನಾಡಿದ ರಾಮಲಿಂಗಾರೆಡ್ಡಿ ಅವರು, ಅತಿ ಹೆಚ್ಚು ಕೋಮು ಸಂಘರ್ಷ ಆಗಿರೋದು ಬಿಜೆಪಿಯವರ ಆಡಳಿತದಲ್ಲಿ. ನಮಗೆ ಅವರು ಇವರು ಅಂತೇನಿಲ್ಲ, ಆರೂವರೆ ಕೋಟಿ ಜನಾನೂ ನಮ್ಮವರೇ. ಎರಡು ತಿಂಗಳ ಹಿಂದೆ ಇವರದ್ದೇ ಸರ್ಕಾರ ಇತ್ತು ಏನು ಮಾಡಿದ್ರು, ನಮ್ಮ ಅವಧಿಯಲ್ಲಿ ಯಾವುದೇ ಅಸಮತೋಲನ ಆಗಿಲ್ಲ, ಆಗಲ್ಲ ಎಂದರು.