

ಬೆಂಗಳೂರು: ಕರೊನಾ ವೈರಸ್ ಮೂಲಕ ಹರಡುವ Covid19 ಸೋಂಕು ಹರಡದಂತೆ ತಡೆಯಲು ಒಂಭತ್ತು ಜಿಲ್ಲೆಗಳಿಗೆ ಘೋಷಿಸಿದ್ದ ಲಾಕ್ಡೌನ್ ಆದೇಶವನ್ನು ಇಡೀ ರಾಜ್ಯಕ್ಕೆ ಅನ್ವಯಿಸುವಂತೆ ವಿಸ್ತರಿಸಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಘೋಷಿಸಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿದ ಅವರು, ಅಪಾಯಕಾರಿ ಮಟ್ಟದಲ್ಲಿ ಹರಡುತ್ತಿರುವ #ಕೋವಿಡ್_19 ಸೋಂಕನ್ನು ನಿಯಂತ್ರಿಸುವ ದೃಷ್ಟಿಯಿಂದ 9 ಜಿಲ್ಲೆಗಳಿಗೆ ಅನ್ವಯಿಸಿ 24 /03 /2020 ರಿಂದ 31 /03/2020 ರವರೆಗೆ ಹೊರಡಿಸಿದ್ದ ಸಂಪೂರ್ಣ ಲಾಕ್ ಡೌನ್ ಆದೇಶವನ್ನು ರಾಜ್ಯಾದ್ಯಂತ ವಿಸ್ತರಿಸಲಾಗಿದೆ. ಸರ್ಕಾರದ ಈ ನಿರ್ಧಾರವನ್ನು ಎಲ್ಲರೂ ಕಟ್ಟುನಿಟ್ಟಾಗಿ ಪಾಲಿಸಲು ಕೋರಲಾಗಿದೆ ಎಂದು ರಾಜ್ಯದ ಜನತೆಯನ್ನು ಕೋರಿದ್ದಾರೆ.