ಕರ್ನಾಟಕ ಕ್ಷತ್ರಿಯ ಒಕ್ಕೂಟ ಸಮಾವೇಶ 19ಕ್ಕೆ

17LNG02
ಸತ್ಯನಾರಾಯಣಸಿಂಗ್
Published on

ಲಿಂಗಸುಗೂರು: ಕರ್ನಾಟಕ ಕ್ಷತ್ರಿಯ ಒಕ್ಕೂಟ ತಾಲೂಕು ಘಟಕದ ಪದಾಧಿಕಾರಿಗಳ ಪದಗ್ರಹಣ ಹಾಗೂ ಬೃಹತ್ ಸಮಾವೇಶವನ್ನು ಮಾ.19 ರಂದು ಬೆಳಗ್ಗೆ 10ಕ್ಕೆ ಪಟ್ಟಣದ ರಜಪೂತ್ ಸಮಾಜದ ಸಾಂಸ್ಕೃತಿಕ ಭವನದಲ್ಲಿ ಆಯೋಜಿಸಲಾಗಿದೆ ಎಂದು ತಾಲೂಕು ಅಧ್ಯಕ್ಷ ಸತ್ಯನಾರಾಯಣ ಸಿಂಗ್ ಹೇಳಿದರು.


ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದರು. ಸಿದ್ಧಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ಒಕ್ಕೂಟದ ರಾಜ್ಯಾಧ್ಯಕ್ಷ ಉದಯಸಿಂಗ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಸಂಸದ ರಾಜಾ ಅಮರೇಶ್ವರ ನಾಯಕ, ಎಂಎಲ್‌ಸಿ ಶರಣಗೌಡ ಬಯ್ಯಪುರ, ಶಾಸಕ ಡಿ.ಎಸ್.ಹೂಲಗೇರಿ, ಮಾಜಿ ಶಾಸಕ ಮಾನಪ್ಪ ವಜ್ಜಲ್, ಜೆಡಿಎಸ್ ಮುಖಂಡ ಸಿದ್ದು ವೈ.ಬಂಡಿ, ಎಸಿ ಅವಿನಾಶ ಶಿಂಧೆ, ನಯೋಪ್ರಾ ಅಧ್ಯಕ್ಷ ಡಾ.ಶಿವಬಸಪ್ಪ ಹೆಸರೂರು, ಪುರಸಭೆ ಅಧ್ಯಕ್ಷೆ ಸುನೀತಾ ಕೆಂಭಾವಿ, ಜಿಲ್ಲಾ ಸಂಚಾಲಕ ಜಯಂತರಾವ್ ಪತಂಗೆ, ದಶರಥಸಿಂಗ್ ಭಾಗವಹಿಸಲಿದ್ದಾರೆಂದು ತಿಳಿಸಿದರು. ಪ್ರಮುಖರಾದ ವಿಜಯಕುಮಾರ, ವಾಸು ಸುಗಂದಿ, ರವಿಕುಮಾರ ಸುಗಂದಿ, ಚಂದ್ರಪ್ಪ ಕಟ್ಟಿಮನಿ, ದುರ್ಗಾಸಿಂಗ್ ರಾಠೋಡ್, ಸತ್ಯನಾರಾಯಣ ಸಿಂಗ್, ಶೋಭಾ ಕಾಟವಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net