"ಆರಗ ಜ್ಞಾನೇಂದ್ರ ಮನೆಗೇ ಮುತ್ತಿಗೆ ಹಾಕಿದ್ರು, ಇದನ್ನ ಬಿಡ್ತಾರಾ..?"; ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ ಸಚಿವ ಪ್ರಿಯಾಂಕ ಖರ್ಗೆ

Priyank Kharge
Published on

ಬೆಂಗಳೂರು: "ಈ ಎಬಿವಿಪಿಯವರು ಅವರ ಗೃಹ ಸಚಿವರಿಗೆ ಬಿಟ್ಟಿಲ್ಲ, ಆರಗ ಜ್ಞಾನೇಂದ್ರ ಮನೆಗೆ ಮುತ್ತಿಗೆ ಹಾಕಿದ್ರು, ಇದನ್ನ ಬಿಡ್ತಾರಾ..?" ಎಂದು ಬಿಜೆಪಿ ನಾಯಕರಿಗೆ ಸಚಿವ ಪ್ರಿಯಾಂಕ ಖರ್ಗೆ ತಿರುಗೇಟು ನೀಡಿದ್ದಾರೆ.

ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಖುಷ್ಬು ಅವರೇ ಬಂದು ಪರಿಶೀಲನೆ ಮಾಡಿ ಅಲ್ಲಿ ಏನು ಇಲ್ಲ ಎಂದು ಹೇಳಿದ್ದಾರೆ. ಅವರ ಪಕ್ಷದವರೇ ಬಂದು ಹಿಡನ್ ಕ್ಯಾಮೆರ ಇಲ್ಲ ಎಂದು ಹೇಳಿದ್ದಾರೆ. ಈಗ ಬಿಜೆಪಿಯ ಮಹಾನ್ ನಾಯಕರು ಏನು ಹೇಳುತ್ತಾರೆ. ಕರಾವಳಿಯ ಭಾಗದ ಶಾಸಕರು ಎಲ್ಲಿ ಹೋದರು?, ಇದಕ್ಕೆ ಉತ್ತರ ಕೊಡಲಿ ಎಂದರು.

ನಿನ್ನೆ ಅಶ್ವಥ್ ನಾರಾಯಣ ಅವರು ಕಪ್ಪು ಪಟ್ಟಿ ಧರಿಸಿ ಕ್ರಾಂತಿಕಾರಿ ರೀತಿ ಪ್ರತಿಭಟನೆ ಮಾಡಿದರಲ್ಲ, ಎಲ್ಲಿ ಹೋದರೂ ಎಲ್ಲರು, ಖುಷ್ಬು ಏನು ಹೇಳಿದ್ರು ಎಂದು ಅವರನ್ನ ಕೇಳಿ ಎಂದು ಪ್ರಿಯಾಂಕ ಖರ್ಗೆ ತಿಳಿಸಿದರು.

ಹಿರಿಯ ನಾಯಕರ ಸಭೆ
ಆಗಸ್ಟ್ 2 ರಂದು ದೆಹಲಿಯಲ್ಲಿ ಹಿರಿಯ ನಾಯಕರ ಸಭೆ ಇದೆ. ನಂತರ ಸಚಿವರ ಸಭೆ ಇರುತ್ತದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ನೇತೃತ್ವದಲ್ಲಿ ಸಭೆ ನಡೆಯಲಿದೆ ಎಂದು ಇದೇ ಸಂದರ್ಭದಲ್ಲಿ ಪ್ರಿಯಾಂಕ ಖರ್ಗೆ ತಿಳಿಸಿದರು.

ವಿದೇಶ ಪ್ರವಾಸ
ಕುಮಾರಸ್ವಾಮಿ ಅವರ ಪ್ರವಾಸ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಪ್ರಿಯಾಂಕ ಖರ್ಗೆ, ಪಾಪ ಕುಮಾರಸ್ವಾಮಿ, ಯಡಿಯೂರಪ್ಪನವರಿಗೆ ಏನು ಕೆಲಸ ಇಲ್ಲ ವಿದೇಶ ಪ್ರವಾಸ ಮಾಡಲಿ ಬಿಡಿ. 5 ವರ್ಷ ಇನ್ನೇನು ಮಾಡ್ತಾರೆ ಅವರು ಪ್ರವಾಸ ಮಾಡಲಿ ಬಿಡಿ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net