11 ಐಪಿಎಸ್ ಅಧಿಕಾರಿಗಳ ವರ್ಗಾವಣೆಗೊಳಿಸಿದ ರಾಜ್ಯ ಸರ್ಕಾರ; ರವಿ ಡಿ ಚೆನ್ನಣ್ಣನವರ್ ಗೆ ಯಾವ ಸ್ಥಾನ ಗೊತ್ತಾ?

vs
Published on

ಬೆಂಗಳೂರು: ಇದೀಗ ರಾಜ್ಯಸರ್ಕಾರ 11 ಮಂದಿ ಐಪಿಎಸ್​ ಅಧಿಕಾರಿಗಳನ್ನು ಬೇರೆ ಬೇರೆ ಸ್ಥಾನಗಳಿಗೆ ವರ್ಗಾವಣೆ ಮಾಡಿದ್ದು ಅವರಲ್ಲಿ ಇತ್ತೀಚೆಗೆ ಭ್ರಷ್ಟಾಚಾರದ ಆರೋಪಕ್ಕೆ ತುತ್ತಾಗಿದ್ದ ಅಧಿಕಾರಿ ರವಿ ಡಿ ಚೆನ್ನಣ್ಣನವರ್​ ಕೂಡ ಇದ್ದಾರೆ. ರಾಜ್ಯ ಸರ್ಕಾರ ವರ್ಗಾವಣೆಗೊಂಡ ಅಧಿಕಾರಿಗಳ ಪಟ್ಟಿ ಬಿಡುಗಡೆ ಮಾಡಿದ್ದು ಚೆನ್ನಣ್ಣನವರ್​ರನ್ನು ಕಿಯೋನಿಕ್ಸ್​ ಸಂಸ್ಥೆಯ ನಿರ್ದೇಶಕನಾಗಿ ವರ್ಗಾವಣೆ ಮಾಡಲಾಗಿದೆ.

ಇದೇ ಮೊದಲ ಬಾರಿಗೆ ಬೆಂಗಳೂರಿಗೆ ಸ್ಪೆಷಲ್​ ಟ್ರಾಫಿಕ್​ ಕಮಿಷನರ್​ಅನ್ನು ನೇಮಕ ಮಾಡಲಾಗಿದ್ದು ಐಪಿಎಸ್​ ಅಬ್ದುಲ್​ ಸಲೀಂಗೆ ಈ ಸ್ಥಾನವನ್ನು ನೀಡಲಾಗಿದೆ. ಅದಲ್ಲದೇ ಈ ಬಾರಿ Additional Director General and Special Commissioner (Traffic) ಪದವಿಯನ್ನು ADGP ದರ್ಜೆಗೆ ಸಮಾನವೆಂದು ಸರ್ಕಾರ ಆದೇಶ ಹೊರಡಿಸಿದೆ.

ಯಾವ ಅಧಿಕಾರಿಗಳನ್ನು ಯಾವ ಸ್ಥಾನಕ್ಕೆ ವರ್ಗಾವಣೆ ಮಾಡಲಾಗಿದೆ? ಮಾಹಿತಿ ಇಲ್ಲಿದೆ:

ಅಬ್ದುಲ್ ಸಲೀಂ - ಸಂಚಾರ ವಿಭಾಗ ಮುಖ್ಯಸ್ಥರಾಗಿ ವರ್ಗಾವಣೆ

ಉಮೇಶ್ ಕುಮಾರ್ - ಆಡಳಿತ ವಿಭಾಗ ಎಡಿಜಿಪಿ ವರ್ಗಾವಣೆ

ದಿವ್ಯಾಜ್ಯೋತಿರಾಯ್- ಮಾನವಹಕ್ಕಗಳ ಆಯೋಗ

ರವಿಕಾಂತೇಗೌಡ - ಸಿಐಡಿ ವರ್ಗಾವಣೆ

ಲೋಕೇಶ್ ಕುಮಾರ್ - ಬಳ್ಳಾರಿ ಐಜಿ ವರ್ಗಾವಣೆ

ರಮಣ್ ಗುಪ್ತಾ- ಬೆಂಗಳೂರು ಇಂಟಲಿಜೆನ್ಸ್ ವರ್ಗಾವಣೆ

ಚಂದ್ರಗುಪ್ತ - ಮಂಗಳೂರು ಐಜಿಯಾಗಿ ವರ್ಗಾವಣೆ

ಶರಣಪ್ಪ - ಜಂಟಿ ಪೊಲೀಸ್ ಆಯುಕ್ತ ಸಿಸಿಬಿ ವರ್ಗಾವಣೆ

ಅನುಚೇತ್ - ಜಂಟಿ ಪೊಲೀಸ್ ಆಯುಕ್ತ ಸಂಚಾರ ವಿಭಾಗ

ರವಿ ಡಿ ಚೆನ್ನಣ್ಣದಣವರ್ - ಕಿಯೋನಿಕ್ಸ್ ನಿರ್ದೇಶಕರಾಗಿ ವರ್ಗಾವಣೆ

ರಮೇಶ್ - ಮೈಸೂರು ಸಿಟಿ ಕಮಿಷನರ್ ಆಗಿ ವರ್ಗಾವಣೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net