

ಬೆಂಗಳೂರು: ಬಿಜೆಪಿ ಕಾಲದ ಪಠ್ಯ ಪುಸ್ತಕ ಪರಿಷ್ಕರಿಸುವಂತೆ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರ ಆದೇಶ ಹೊರಡಿಸಿದೆ. ಅದರಂತೆ 6 ರಿಂದ 10ನೇ ತರಗತಿ ಪಠ್ಯಗಳಲ್ಲಿನ ಕೆಲ ವಿಷಯಗಳಿಗೆ ಸಂಬಂಧಿಸಿದಂತೆ ಮಾರ್ಪಾಡು ಆಗಲಿದೆ.
2023-24ನೇ ಸಾಲಿನಲ್ಲಿ ಜಾರಿಯಲ್ಲಿರುವ ಪಠ್ಯ ಪುಸ್ತಕದ ಕೆಲವು ಅಧ್ಯಾಯಗಳನ್ನು ಬದಲಿಸುತ್ತೇವೆ ಯಾವ ಪಠ್ಯ ಸೇರಿಸಬೇಕು ಅಥವಾ ಯಾವುದನ್ನು ಸೇರಿಸಬಾರದು ಎಂಬ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಪ್ರಾಥಮಿಕ ಮತ್ತು ಫ್ರೌಡ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದರು.
6 ರಿಂದ 10ನೇ ತರಗತಿಯಲ್ಲಿನ ಪ್ರತಮ, ದ್ವಿತೀಯ ಭಾಷೆ, ಸಮಾಜ ವಿಜ್ಞಾನದಲ್ಲಿನ ಕೆಲವು ಪಾಠಗಳನ್ನು ಬದಲಾವಣೆ ಮಾಡಲಾಗಿದೆ. ವಿದ್ಯಾರ್ಥಿಗಳಿಗೆ ಯಾವುದೇ ಹೆಚ್ಚುರವಿ ಹೊರೆಯಾಗದಂತೆ ಹೊಸ ಪಠ್ಯಕ್ರಮವನ್ನು ರೂಪಿಸಲಾಗುತ್ತಿದೆ ಎಂದು ಸರ್ಕಾರ ತಿಳಿಸಿತ್ತು.