ರಾಜ್ಯದಲ್ಲಿ ಒಂದೇ ದಿನ 299 ಕರೊನಾ ಪ್ರಕರಣ! ರಾಯಚೂರು, ಬೀದರ್​ನಲ್ಲಿ ಇಬ್ಬರ ಬಲಿ

Covid-19 29 may 20
Published on

ಬೆಂಗಳೂರು: ರಾಜ್ಯದಲ್ಲಿ ಕರೊನಾ ತನ್ನ ಭೀಕರ ಸ್ವರೂಪವನ್ನು ತೋರಿಸುತ್ತಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ 299 ಪ್ರಕರಣಗಳು ವರದಿಯಾಗಿವೆ. ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 3221ಕ್ಕೆ ಏರಿದೆ. ಇವರ ಪೈಕಿ 255 ಮಂದಿ ಹೊರರಾಜ್ಯಗಳ ಪ್ರಯಾಣಿಕರಾದರೆ 7 ಮಂದಿ ವಿದೇಶಗಳಿಂದ ವಾಪಸಾದವರು.

1218 ಮಂದಿ ಇದಾಗಲೇ ಸೋಂಕಿನಿಂದ ಗುಣಮುಖರಾಗಿ ವಾಪಸ್​ ಆಗಿದ್ದು, 1950 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. 15 ಮಂದಿ ಐಸಿಯುವೆ ದಾಖಲು ಮಾಡಲಾಗಿದೆ.

ಮುಂಬೈನಿಂದ ವಾಪಸ್​ ಬಂದಿದ್ದ ರಾಯಚೂರಿನ 50 ವರ್ಷದ ವ್ಯಕ್ತಿ ಹಾಗೂ ಕಂಟೈನ್​ಮೆಂಟ್​ ಝೋನ್​ನಲ್ಲಿದ್ದ ಬೀದರ್​ನ 75 ವರ್ಷದ ವ್ಯಕ್ತಿ ಇಂದು ಸೋಂಕಿನಿಂದ ಮೃತಪಟ್ಟಿದ್ದಾರೆ. ಈ ಮೂಲಕ ಕರೊನಾಕ್ಕೆ ಬಲಿಯಾದವರ ಸಂಖ್ಯೆ ರಾಜ್ಯದಲ್ಲಿ 51ಕ್ಕೆ ಏರಿದೆ.

ನಿನ್ನೆ ಸಂಜೆಯಿಂದ ಇಲ್ಲಿಯವರೆಗೆ 221 ಮಂದಿಯನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.

ಹೊಸದಾಗಿ ಸೋಂಕಿಗೆ ಒಳಗಾದವರ ವಿವರ ಈ ರೀತಿ ಇದೆ:

ರಾಯಚೂರು 83; ಕಲಬುರಗಿ 28; ಯಾದಗಿರಿ 44; ಬೀದರ್​ 33; ವಿಜಯಪುರ 26; ಬೆಂಗಳೂರು ನಗರ 21; ದಕ್ಷಿಣ ಕನ್ನಡ 14; ಮಂಡ್ಯ 13; ಬೆಳಗಾವಿ 13; ಉಡುಪಿ 10; ದಾವಣಗೆರೆ 6; ಉತ್ತರ ಕನ್ನಡ 5; ಬಳ್ಳಾರಿ 1; ಶಿವಮೊಗ್ಗ 1; ಕೋಲಾರ 1.

ಮೈಸೂರು, ಬಾಗಲಕೋಟೆ, ಧಾರವಾಡ, ಚಿತ್ರದುರ್ಗ, ಗದಗ, ತುಮಕೂರು, ಚಿಕ್ಕಮಗಳೂರು, ಬೆಂಗಳೂರು ಗ್ರಾಮಾಂತರ, ಹಾವೇರಿ, ಕೊಪ್ಪಳ, ಕೊಡಗು, ರಾಮನಗರ, ಹಾಸನ, ಚಿಕ್ಕಬಳ್ಳಾಪುರದಲ್ಲಿ ಒಂದೂ ಹೊಸ ಸೋಂಕು ಪತ್ತೆಯಾಗಿಲ್ಲ. ಚಾಮರಾಜನರ ಹಸಿರುವಲಯವಾಗಿಯೇ ಉಳಿದಿದೆ.

ಹೆಚ್ಚಿನ ವಿವರ ಇಲ್ಲಿದೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net