390ಕ್ಕೇರಿತ ಸೋಂಕಿತರ ಸಂಖ್ಯೆ- 111 ಮಂದಿ ಬಿಡುಗಡೆ: 16 ಸಾವು: ನಿಮ್ಮ ಜಿಲ್ಲೆಯ ಅಂಕಿ ಅಂಶ ಎಷ್ಟು?

corona- karnataka
Published on

ಬೆಂಗಳೂರು: ಇಂದು ಸಂಜೆಯವರೆಗೆ ಒಟ್ಟು 390 ಮಂದಿ ರಾಜ್ಯದಲ್ಲಿ ಕರೊನಾ ಸೋಂಕಿಗೆ ಒಳಗಾಗಿದ್ದು, ಈ ಪೈಕಿ ಒಟ್ಟು 111 ಮಂದಿ ಬಿಡುಗಡೆ ಹೊಂದಿರುತ್ತಾರೆ.
ಇಂದು ಬೆಂಗಳೂರಿನ ಒಬ್ಬ 65 ವರ್ಷದ ಮಹಿಳೆ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ 50 ವರ್ಷದ ಮಹಿಳೆ ಸೋಂಕಿನಿಂದ ಮೃತಪಟ್ಟಿದ್ದು, ಈ ಮೂಲಕ ರಾಜ್ಯದಲ್ಲಿ ಮೃತರ ಸಂಖ್ಯೆ 16ಕ್ಕೆ ಏರಿದೆ. 111 ಮಂದಿ ಬಿಡುಗಡೆ ಹೊಂದಿದ್ದಾರೆ. ಸೋಂಕು ಪೀಡಿತರಾಗಿ ಚಿಕಿತ್ಸೆ ಪಡೆಯುತ್ತಿರುವ 263 ಮಂದಿಯ ಪೈಕಿ ಓರ್ವ ಗರ್ಭಿಣಿ ಸೇರಿದಂತೆ 260 ಪ್ರತ್ಯೇಕ ವಾರ್ಡ್‌ಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಮೂವರನ್ನು ಐಸಿಯುನಲ್ಲಿ ಇಡಲಾಗಿದೆ.

ನಿನ್ನೆ ಸಂಜೆ 5 ಗಂಟೆಯಿಂದ ಇಲ್ಲಿಯವರೆಗೆ ಒಟ್ಟು ಆರು ಹೊಸ ಸೋಂಕು ಪ್ರಕರಣ ಪತ್ತೆಯಾಗಿದ್ದು, ಹಿಂದಿನ ದಿನಗಳಿಗೆ ಹೋಲಿಸಿದರೆ ಇದರ ಪ್ರಮಾಣ ಅತ್ಯಲ್ಪ ಆಗಿದೆ. ಮೈಸೂರು ಮತ್ತು ನಂಜನಗೂಡಿನಲ್ಲಿ ತಲಾ ಎರಡು ಹೊಸ ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಉಳಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಮತ್ತು ಬಂಟ್ವಾಳದಲ್ಲಿ ಒಂದೊಂದು ಪ್ರಕರಣಗಳು ಪತ್ತೆಯಾಗಿವೆ.

ಯಾವ ಜಿಲ್ಲೆಯಲ್ಲಿ ಎಷ್ಟು ಸೋಂಕಿತರು ಎಂಬ ಮಾಹಿತಿ ಇಲ್ಲಿದೆ, ಉಳಿದ ಜಿಲ್ಲೆಗಳು ಸೋಂಕು ಮುಕ್ತವಾಗಿವೆ.

ಬೆಂಗಳೂರು: 89 ಮಂದಿಗೆ ಸೋಂಕು ತಗುಲಿದ್ದು, 44 ಮಂದಿ ಬಿಡುಗಡೆಯಾಗಿದ್ದಾರೆ. ಇದುವರೆಗೆ ನಾಲ್ವರು ಮೃತಪಟ್ಟಿದ್ದಾರೆ.
ಮೈಸೂರು: 84 ಮಂದಿ ಸೋಂಕಿತರಾಗಿದ್ದು 24 ಮಂದಿ ಬಿಡುಗಡೆಯಾಗಿದ್ದಾರೆ.
ಬೆಳಗಾವಿ: 42 ಮಂದಿ ಸೋಂಕಿತರಾಗಿದ್ದು ಒಬ್ಬರು ಮೃತಪಟ್ಟಿದ್ದಾರೆ.
ಕಲಬುರಗಿ: 22 ಮಂದಿ ಸೋಂಕಿತರಾಗಿದ್ದು ಮೂವರು ಬಿಡುಗಡೆ ಹೊಂದಿದ್ದು ಮೂರು ಮಂದಿ ಮೃತಪಟ್ಟಿದ್ದಾರೆ.
ಬಾಗಲಕೋಟೆ: 21 ಸೋಂಕು ಪ್ರಕರಣವಿದ್ದು, ಓರ್ವ ವ್ಯಕ್ತಿ ಮೃತಪಟ್ಟಿದ್ದಾರೆ.
ಚಿಕ್ಕಬಳ್ಳಾಪುರ: 16 ಮಂದಿ ಸೋಂಕು ಪೀಡಿತರಾಗಿದ್ದು ಎಂಟು ಮಂದಿ ಬಿಡುಗಡೆಯಾಗಿದ್ದರೆ ಇಬ್ಬರು ಮೃತಪಟ್ಟಿದ್ದಾರೆ.
ಉತ್ತರ ಕನ್ನಡ: 11 ಮಂದಿಗೆ ಸೋಂಕು ತಗುಲಿದ್ದು 9 ಮಂದಿ ಬಿಡುಗಡೆಯಾಗಿದ್ದಾರೆ.
ವಿಜಯಪುರ: 21 ಮಂದಿ ಸೋಂಕುಪೀಡಿತರಾಗಿದ್ದು, ಇಬ್ಬರು ಮೃತಪಟ್ಟಿದ್ದಾರೆ. 19 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಧಾರವಾಡ: 7 ಮಂದಿಗೆ ಸೋಂಕು ತಗುಲಿದ್ದು ಒಬ್ಬರು ಬಿಡುಗಡೆಯಾಗಿದ್ದಾರೆ.
ಉಡುಪಿ: ಮೂವರಿಗೆ ಸೋಂಕು ತಗುಲಿದ್ದು ಎಲ್ಲರೂ ಬಿಡುಗಡೆಯಾಗಿದ್ದಾರೆ.
ಬಳ್ಳಾರಿ: 13 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು ಎಲ್ಲರೂ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೆಂಗಳೂರು ಗ್ರಾಮಾಂತರ: 12 ಪ್ರಕರಣಗಳು ದಾಖಲಾಗಿದ್ದು 3 ಮಂದಿ ಬಿಡುಗಡೆಗೊಂಡಿದ್ದಾರೆ
ದಾವಣಗೆರೆ: ಇಬ್ಬರಲ್ಲಿ ಸೋಂಕು ಕಂಡುಬಂದಿದ್ದು ಇಬ್ಬರೂ ಬಿಡುಗಡೆಯಾಗಿದ್ದಾರೆ.
ತುಮಕೂರು: ಇಬ್ಬರಿಗೆ ಸೋಂಕು ತಗುಲಿದ್ದು ಒಬ್ಬರು ಮೃತಪಟ್ಟಿದ್ದು ಇನ್ನೊಬ್ಬರು ಬಿಡುಗಡೆಯಾಗಿದ್ದಾರೆ.
ಬೀದರ್‌: 14 ಸೋಂಕು ಪ್ರಕರಣ ಪತ್ತೆಯಾಗಿದ್ದು, ಎಲ್ಲರೂ ಚಿಕಿತ್ಸೆ ಪಡೆಯುತ್ತಿದ್ದಾರೆ.
ಚಿತ್ರದುರ್ಗ: ಒಬ್ಬರಲ್ಲಿ ಸೋಂಕು ಪತ್ತೆಯಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ದಕ್ಷಿಣ ಕನ್ನಡ: 14 ಮಂದಿ ಸೋಂಕು ಪೀಡಿತರಾಗಿದ್ದು, 11 ಮಂದಿ ಬಿಡುಗಡೆಯಾಗಿದ್ದಾರೆ.
ಗದಗ: 3 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು ಒಬ್ಬರು ಮೃತಪಟ್ಟಿದ್ದಾರೆ.
ಮಂಡ್ಯ: 12 ಪ್ರಕರಣಗಳು ಪತ್ತೆಯಾಗಿದ್ದು ಎಲ್ಲರೂ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕರೊನಾ ಸೋಂಕು ತಡೆಗಟ್ಟಲು ಮಸೀದಿಯಲ್ಲಿ ಯಾವುದೇ ಸಭೆ, ಪ್ರಾರ್ಥನೆ ನಡೆಸದಂತೆ ಹಾಗೂ ಮೃತ ವ್ಯಕ್ತಿಗಳನ್ನು ದಫನ್‌ ಮಾಡಲು ಅನುಮತಿ ನೀಡದಂತೆ ಕರ್ನಾಟಕ ರಾಜ್ಯ ವಕ್ಫ್‌ ಮಂಡಳಿಯು ರಾಜ್ಯದ ಎಲ್ಲ ವ್ಯವಸ್ಥಾಪಕರಿಗೆ ನಿರ್ದೇಶನ ನೀಡಿರುತ್ತದೆ.

ಸೋಂಕಿತರ ಪ್ರಯಾಣದ ಮಾಹಿತಿ ಬೇಕಿದ್ದರೆ www.karnataka.gov.in. ಮೊಬೈಲ್‌ ಅಪ್ಲಿಕೇಷ್‌ ಡೌನ್‌ಲೋಡ್‌ ಮಾಡಿಕೊಳ್ಳುವಂತೆ ಸರ್ಕಾರದ ಪ್ರಕಟಣೆ ತಿಳಿಸಿದೆ. ಕರೊನಾ ವೈರಸ್‌ ಉಚಿತ ಆರೋಗ್ಯ ಸಹಾಯವಾಣಿ ಸಂಖ್ಯೆ: 104/ 9745697456.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net