ರಾಜ್ಯದಲ್ಲಿ 606ಕ್ಕೇರಿದ ಸೋಂಕಿತರ ಸಂಖ್ಯೆ: 5 ಹೊಸ ಪ್ರಕರಣ

corona sanje
Published on

ಬೆಂಗಳೂರು: ಕರೊನಾ ಸೋಂಕಿನ ಪ್ರಮಾಣದ ರಾಜ್ಯದಲ್ಲಿ ಕಣ್ಣುಮುಚ್ಚಾಲೆ ಆಡುತ್ತಿದ್ದು, ಒಂದು ದಿನ ಅತಿ ಹೆಚ್ಚು ಹಾಗೂ ಒಂದು ದಿನ ಅತಿ ಕಡಿಮೆ ಪ್ರಮಾಣದಲ್ಲಿ ಹೊಸ ಸೋಂಕಿತರನ್ನು ಸೃಷ್ಟಿಸುತ್ತಿದೆ. ನಿನ್ನೆ ಸಂಜೆ 5 ಗಂಟೆಯಿಂದ ಇಲ್ಲಿಯವರೆಗೆ ಕೇವಲ 5 ಹೊಸ ಪ್ರಕರಣಗಳು ದಾಖಲಾಗಿವೆ.

ಈ ಮೂಲಕ ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆ 606ಕ್ಕೆ ಏರಿದೆ. 25 ಮಂದಿ ಇಲ್ಲಿಯವರೆಗೆ ಜೀವ ಕಳೆದುಕೊಂಡಿದ್ದು, 282 ಮಂದಿ ಆಸ್ಪತ್ರೆಯಿಂದ ಬಿಡುಗಡೆ ಆಗಿರುತ್ತಾರೆ.

ಹೊಸ ಸೋಂಕು ಪ್ರಕರಣ ಕಂಡು ಬಂದಿರುವುದು ಕಲಬುರಗಿ ಮತ್ತು ಬಾಗಲಕೋಟೆ ಜಿಲ್ಲೆಯ ಮುಧೋಳದಲ್ಲಿ. ಕಲಬುರಗಿಯಲ್ಲಿ 13 ವರ್ಷದ ಬಾಲಕಿ ಸೇರಿದಂತೆ 41 ಮತ್ತು 54 ವರ್ಷದ ಪುರುಷರು ಹಾಗೂ ಮುಧೋಳದಲ್ಲಿ 68 ವರ್ಷದ ಪುರುಷ ಮತ್ತು 60 ವರ್ಷದ ಮಹಿಳೆಯಲ್ಲಿ ಸೋಂಕು ಕಾಣಿಸಿಕೊಂಡಿದೆ.

ನಿಜಾಮುದ್ದೀನ್‌ ಮರ್ಕಜ್‌ ಮಸೀದಿಯಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿರುವ ಪ್ರತಿಯೊಬ್ಬರೂ ಉಚಿತ ಆರೋಗ್ಯ ಸಹಾಯವಾಣಿ 080-29711171 ಸಂಪರ್ಕಿಸುವಂತೆ ಸರ್ಕಾರ ಸೂಚಿಸಿದೆ.

ಸೋಂಕಿತರ ಪ್ರಯಾಣದ ಮಾಹಿತಿ ಬೇಕಿದ್ದರೆ www.karnataka.gov.in. ಮೊಬೈಲ್‌ ಅಪ್ಲಿಕೇಷ್‌ ಡೌನ್‌ಲೋಡ್‌ ಮಾಡಿಕೊಳ್ಳುವಂತೆ ಸರ್ಕಾರದ ಪ್ರಕಟಣೆ ತಿಳಿಸಿದೆ. ಕರೊನಾ ವೈರಸ್‌ ಉಚಿತ ಆರೋಗ್ಯ ಸಹಾಯವಾಣಿ ಸಂಖ್ಯೆ: 104/ 9745697456.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net