ನಾಳೆ ಸಚಿವ ಸಂಪುಟ ಸಭೆ; ಹೊಸ ಖಾತೆಗಳೊಂದಿಗೆ ಬರಲಿದ್ದಾರೆ ನೂತನ ಸಚಿವರು

sachiva
Published on

ಬೆಂಗಳೂರು: ಶುಕ್ರವಾರ ರಾಜ್ಯ ಸಚಿವ ಸಂಪುಟ ಸಭೆ ನಡೆಯಲಿದೆ. ಸಂಜೆ ನಾಲ್ಕು ಗಂಟೆಗೆ ನಡೆಯಲಿರುವ ಸಭೆಗೆ ನೂತನ ಸಚಿವರು ಹೊಸ ಖಾತೆಗಳೊಂದಿಗೆ ಆಗಮಿಸಲಿದ್ದಾರೆ.

ಏಳು ಸಚಿವರು ಹೊಸದಾಗಿ ಪ್ರಮಾಣ ವಚನ ಸ್ವೀಕರಿಸಿದ್ದು, ಯಾರ್ಯಾರಿಗೆ ಯಾವ ಯಾವ ಖಾತೆ ಹಂಚಿಕೆ ಮಾಡಲಾಗುವುದು ಎನ್ನುವುದರ ಬಗ್ಗೆ ಚರ್ಚೆ ನಡೆಯುತ್ತಿದೆ. ಸದ್ಯದ ಮಟ್ಟಿಗೆ ನಡೆಯುತ್ತಿರುವ ಚರ್ಚೆಯ ಪ್ರಕಾರ ಅರವಿಂದ ಲಿಂಬಾವಳಿಗೆ ಉನ್ನತ ಶಿಕ್ಷಣಸ ಸಚಿವಾಲಯ, ಉಮೇಶ್ ಕತ್ತಿಗೆ ಸಣ್ಣ ನೀರಾವರಿ ಅಥವಾ ತೋಟಗಾರಿಕೆ ಸಚಿವಾಲಯ, ಯೋಗೇಶ್ವರ್​ಗೆ ಪ್ರವಾಸೊದ್ಯಮ, ರೇಷ್ಮೆ ಸಚಿವಾಲಯ, ಎಂಟಿಬಿ ನಾಗರಾಜ್​ಗೆ ಅಬಕಾರಿ ಇಲಾಖೆ, ಮುರಗೇಶ್ ನಿರಾಣಿಗೆ ಇಂಧನ ಅಥವಾ ಸಣ್ಣ ಕೈಗಾರಿಕೆ, ಅಂಗಾರಗೆ ಒಳನಾಡು, ಬಂದರು, ಮೀನುಗಾರಿಕೆ ಹಾಗೂ ಆರ್,‌ಶಂಕರ್​ಗೆ ಕನ್ನಡ ಮತ್ತು ಸಂಸ್ಕೃತಿ, ಯುವಜನಸೇವಾ ಇಲಾಖೆಯ ಜವಾಬ್ದಾರಿ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ. ಒಂದು ವೇಳೆ ಆರ್‌.ಶಂಕರ್ ಇದಕ್ಕೆ ಒಪ್ಪಲಿಲ್ಲ ಅಂದರೆ ಸಣ್ಣ ಕೈಗಾರಿಕೆ ಇಲಾಖೆಯ ಜವಾಬ್ದಾರಿಯನ್ನು ನೀಡುವ ಸಾಧ್ಯತೆಯಿದೆ.

ಇಂದು ರಾತ್ರಿ ಸಚಿವರ ಜತೆ ಮುಖ್ಯಮಂತ್ರಿ ಯಡಿಯೂರಪ್ಪ ಮಾತನಾಡಲಿದ್ದಾರೆ. ನಾಳೆ ಬೆಳಿಗ್ಗೆ ಸಚಿವರ ಖಾತೆಗಳ ಪಟ್ಟಿ ಪ್ರಕಟ ಮಾಡಲಾಗುವುದು ಎನ್ನಲಾಗಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net