Karnataka Budget: 16ನೇ ಬಜೆಟ್​ನಲ್ಲಿ ರಾಜ್ಯ ರಾಜಧಾನಿಗೆ ಬಂಪರ್ ಕೊಡುಗೆ​; ಅನುದಾನ ಹೆಚ್ಚಿಸಿದ ಸಿದ್ದರಾಮಯ್ಯ

ವಿಜಯವಾಣಿ - 2025-03-07T105304.634
Published on

Karnataka Budget: ಇಂದು (ಮಾ.07) ಬಹುನಿರೀಕ್ಷಿತ ರಾಜ್ಯ ಬಜೆಟ್​ (2025-26) ಆಯವ್ಯಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ್ದಾರೆ. ಈ ಮೂಲಕ 16ನೇ ಬಜೆಟ್ ಮಂಡಿಸಿದ ದಾಖಲೆಯನ್ನೂ ಬರೆದಿದ್ದಾರೆ. ಕಳೆದ ಬಾರಿಗಿಂತ ಈ ಬಾರಿಯ ಬಜೆಟ್ ಗಾತ್ರ ಶೇ.10ರಷ್ಟು ವೃದ್ಧಿಯೊಂದಿಗೆ 4.08 ಲಕ್ಷ ಕೋಟಿ ರೂ. ದಾಟುವ ಸಾಧ್ಯತೆಯಿದೆ.

ಕುವೆಂಪು ಅವರ ಕವಿತೆ ಮೂಲಕ ಬಜೆಟ್ ಆರಂಭಿಸಿದ ಸಿಎಂ, ಮೊದಲಿಗೆ ರಾಜ್ಯ ರಾಜಧಾನಿ ಬೆಂಗಳೂರಿಗೆ ಬಂಪರ್ ಕೊಡುಗೆ ಘೋಷಿಸಿದರು. ರಾಜ್ಯಕ್ಕೆ ಬರೋಬ್ಬರಿ 7 ಕೋಟಿ ರೂ. ಅನುದಾನವನ್ನು ಈ ಬಾರಿಯ ಬಜೆಟ್​ನಲ್ಲಿ ಹೆಚ್ಚಿಸಿದ್ದಾರೆ.

ಬೆಂಗಳೂರು ಮೂಲ ಸೌಕರ್ಯ ಅಭಿವೃದ್ಧಿಗೆ 7 ಸಾವಿರ ಕೋಟಿ ಅನುದಾನ ಏರಿಕೆ ಮಾಡಿರುವ ಸರ್ಕಾರ, ನಮ್ಮ ಮೆಟ್ರೋ 3ನೇ ಹಂತದ ಯೋಜನೆಯೊಂದಿಗೆ 8,916 ಕೋಟಿ ವೆಚ್ಚ ವ್ಯಯಿಸಲು ಸಿದ್ಧವಾಗಿದೆ.  40.50 ಕಿ.ಮೀ. ಉದ್ದದ ಡಬಲ್ ಡೆಕ್ಕರ್ ಫ್ಲೈಓವರ್ ನಿರ್ಮಾಣ, ಉ-ದ, ಪೂ-ಪ ಟನಲ್ ಕಾರಿಡಾರ್​ಗೆ 19 ಸಾವಿರ ಕೋಟಿ ರೂ. ಮೀಸಲು ಮತ್ತು ಬಿಬಿಎಂಪಿ ವ್ಯಾಪ್ತಿಯ 460 ಕಿ.ಮೀ. ಆರ್ಟೀರಿಯಲ್ ರಸ್ತೆ ಜಾಲವನ್ನು 660 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದು ಘೋಷಿಸಿದರು.

120 ಕಿ.ಮೀ. ಉದ್ದದ ಫ್ಲೈಓವರ್, ಗ್ರೇಡರ್ ಸಪರೇಟರ್ ನಿರ್ಮಾಣ ಹಾಗೂ ಬ್ರ್ಯಾಂಡ್ ಬೆಂಗಳೂರು ಯೋಜನೆಯಡಿ 1800 ಕೋಟಿ ರೂ. ವೆಚ್ಚದಲ್ಲಿ 21 ಯೋಜನೆ, 413 ಕೋಟಿ ವೆಚ್ಚದಲ್ಲಿ ಸಮಗ್ರ ಆರೋಗ್ಯ ಯೋಜನೆ ಮತ್ತು ಬೆಂಗಳೂರಿನಿಂದ ದೇವನಹಳ್ಳಿಯವರೆಗೆ ಮೆಟ್ರೋ ಜಾಲ ವಿಸ್ತರಣೆ ಯೋಜನೆಯನ್ನು ಇಂದಿನ ಬಜೆಟ್​ನಲ್ಲಿ ಸಿಎಂ ಘೋಷಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net