ಮಂಗಳೂರು: ಬ್ಯಾಂಕ್ಗಳ ತವರೂರು ಕರಾವಳಿಯಲ್ಲಿ ಜನ್ಮ ತಳೆದು ದೇಶಾದ್ಯಂತ ಪ್ರಬಲ ಬ್ಯಾಂಕರ್ ಆಗಿ ರೂಪುಗೊಂಡಿರುವ ಕರ್ಣಾಟಕ ಬ್ಯಾಂಕ್ಗೆ ಇನ್ನು ಮೂರು ವರ್ಷಗಳಲ್ಲಿ 100ರ ಸಂಭ್ರಮ. 2024ರಲ್ಲಿ ಶತಮಾನೋತ್ಸವ ಆಚರಿಸುತ್ತಿರುವ ಬ್ಯಾಂಕ್ ಎರಡನೇ ಶತಮಾನದಲ್ಲಿ ‘ಭವಿಷ್ಯದ ಡಿಜಿಟಲ್ ಬ್ಯಾಂಕ್’ ಆಗಿ ರೂಪುಗೊಳ್ಳುವುದೂ ಸೇರಿ ಹತ್ತು ಹಲವು ಯೋಜನೆಗಳಿಗೆ ಮುನ್ನುಡಿ ಬರೆದಿದೆ. ಕೋವಿಡ್ ಕರಿನೆರಳಿನಲ್ಲೂ ಸತತ ಎರಡು ತ್ರೈಮಾಸಿಕಗಳಲ್ಲಿ ಅತ್ಯುತ್ತಮ ಪ್ರಗತಿಯೊಂದಿಗೆ ನಿವ್ವಳ ಲಾಭ ಏರಿಕೆಯ ದಾಖಲೆ ಹೊಂದಿರುವ ಬ್ಯಾಂಕ್ನ ನೇತೃತ್ವ ವಹಿಸಿರುವ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹಾಬಲೇಶ್ವರ ಎಂ.ಎಸ್. ‘ವಿಜಯವಾಣಿ’ಯೊಂದಿಗೆ ಮುಂದಿನ ಯೋಜನೆಗಳನ್ನು ತೆರೆದಿಟ್ಟಿದ್ದಾರೆ.