

ದೋಹಾ: ಕತಾರ್ನ ಕರ್ನಾಟಕ ಸಂಘ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಇಲ್ಲಿನ ಸಂಸ್ಕೃತಿಕ ಕೇಂದ್ರದ ಮುಂಬೈ ಸಭಾಂಗಣದಲ್ಲಿ ಕರ್ನಾಟಕದ ಪ್ರಸಿದ್ಧ ಕಲಾವಿದರನ್ನು ಆತ್ಮೀಯವಾಗಿ ಗೌರವಿಸಿದರು.
ಕನ್ನಡದ ಯೋಗಿ ಎಂದೇ ಚಿರಪರಿಚಿತರಾಗಿರುವ ಗಿರೀಶ್ ರಾವ್ ಜೋಗಿ, ಎದೆ ತುಂಬಿ ಹಾಡುವೆನು ಖ್ಯಾತಿಯ ಶ್ರೀನಿಧಿ ಶಾಸ್ತ್ರಿ, ಶಾಸ್ತ್ರೀಯ ಸಂಗೀತ ಹಾಗೂ ಚಲನಚಿತ್ರ ಗೀತೆಗಳನ್ನು ಹಾಡುವ ಮಧುರ ಕಂಠದ ಕು.ಭೂಮಿಕಾ ಮಧುಸೂದನ್ ಹಾಗೂ ರಾಷ್ಟ್ರಮಟ್ಟದ ನಿರೂಪಕಿ ಸವಿಪ್ರಕಾಶ್ ಅವರನ್ನು ಭಾರತೀಯ ಸಾಂಸ್ಕೃತಿಕ ಕೇಂದ್ರದ ಅಧ್ಯಕ್ಷ ಎ.ಪಿ.ಮಣಿಕಂಠನ್ ಅವರ ನೇತೃತ್ವದಲ್ಲಿ ಐಸಿಸಿ ಉಪಾಧ್ಯಕ್ಷ ಸುಬ್ರಮಣ್ಯ ಹೆಬ್ಬಾಗಿಲು ಸತ್ಕರಿಸಿದರು. ಪ್ರಧಾನ ಕಾರ್ಯದರ್ಶಿ ಮೋಹನ್ ಕುಮಾರ್, ಕತಾರ್ ಕರ್ನಾಟಕ ಸಂಘ ಅಧ್ಯಕ್ಷ ಮಹೇಶ್ ಗೌಡ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮ ಸರಳವಾಗಿ ನೆರವೇರಿದ್ದು, ಕನ್ನಡ ಅಭಿಮಾನಿಗಳು, ಕತಾರ್ನ ಭಾರತೀಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.