

ಬೆಂಗಳೂರು: ಕರೊನಾ ಮಣಿಸಲು ಕೇರಳವೇ ಮಾದರಿ ಎಂದು ಅಲ್ಲಿನ ಸರ್ಕಾರ ಬಿಂಬಿಸಿಕೊಂಡಿತ್ತ್ತು. ಆದರೆ, ಸದ್ದಿಲ್ಲದೇ ತನ್ನ ಪಾಡಿಗೆ ತಾನಿದ್ದ ಕರ್ನಾಟಕ ಈಗ ದೇಶದ ಗಮನಸೆಳೆಯುತ್ತಿದೆ.
ಈ ಬೆಳವಣಿಗೆ ಬಗ್ಗೆ ಹೇಳಿಕೊಂಡಿರುವ ವೈದ್ಯಶಿಕ್ಷಣ ಸಚಿವ ಡಾ.ಕೆ. ಸುಧಾಕರ್, ನಮ್ಮದು ‘3ಟಿ’ ತಂತ್ರಗಾರಿಕೆ. ಟ್ರೇಸಿಂಗ್, ಟೆಸ್ಟಿಂಗ್ ಮತ್ತು ಟ್ರೀಟ್ವೆುಂಟ್ ವಿಧಾನಗಳನ್ನು ಅನುಸರಿಸುತ್ತಿದ್ದೇವೆ. ಸಾವಿರಾರು ವೈದ್ಯರ ಪರಿಶ್ರಮ, ನಿಖರ ಯೋಜನೆಯಿಂದ ಪರಿಸ್ಥಿತಿ ನಿಯಂತ್ರಿಸಲು ಸಾಧ್ಯವಾಗಿದೆ ಎಂದಿದ್ದಾರೆ.
ಕರ್ನಾಟಕದ ಪ್ರಯತ್ನವನ್ನು ಕೇಂದ್ರ ಸರ್ಕಾರದ ಆರೋಗ್ಯ ಇಲಾಖೆ ಉಲ್ಲೇಖಿಸಿದ್ದನ್ನು ಸಚಿವರು ಪ್ರಸ್ತಾಪಿಸಿದ್ದಾರೆ. ಇಡೀ ರಾಜ್ಯದಲ್ಲಿ ಕರೊನಾ ಸೋಂಕು ಹರಡದಂತೆ ತಡೆಯುವುದು ಸರ್ಕಾರದ ಮುಖ್ಯ ಆದ್ಯತೆಯಾಗಿದೆ. ಅತಿಹೆಚ್ಚು ಪ್ರಕರಣಗಳು ದಾಖಲಾಗಿರುವ ಬೆಂಗಳೂರು ನಗರ ಮತ್ತು ತುಮಕೂರು ನಗರಗಳಲ್ಲಿ ತಂತ್ರಜ್ಞಾನ ಪರಿಣಾಮಕಾರಿಯಾಗಿ ಬಳಸಿಕೊಂಡು ಕೈಗೊಂಡಿರುವ ಕ್ವಾರಂಟೈನ್ ನಿಗಾ, ನಿಯಂತ್ರಣ ಕ್ರಮಗಳು ಮಾದರಿಯಾಗಿವೆ ಎಂದು ತಿಳಿಸಿದ್ದಾರೆ.
ಆಶಾ ಕಾರ್ಯಕರ್ತೆಯರು, ಆರೋಗ್ಯ ಶಿಕ್ಷಣಾಧಿಕಾರಿ ಗಳು, ಆರೋಗ್ಯ ಇಲಾಖೆ ಸಿಬ್ಬಂದಿ ಮೂಲಕ ಸೋಂಕಿನ ವ್ಯಕ್ತಿಗಳನ್ನು ಪತ್ತೆಹಚ್ಚುವಿಕೆಯಲ್ಲಿ ಹೆಚ್ಚಿನ ಪರಿಶ್ರಮ ಹಾಕುವುದು, ಬಳಿಕ ಪರೀಕ್ಷೆಗೊಳಪಡಿಸುವುದು ಮತ್ತು ಚಿಕಿತ್ಸೆ ವಿಧಾನದಿಂದ ಕೋವಿಡ್ 19 ನಿಯಂತ್ರಣದಲ್ಲಿಡಲು ಆದ್ಯತೆ ನೀಡುತ್ತಿರುವುದು ವಿಶೇಷವಾಗಿದೆ ಎಂದು ತಿಳಿಸಿದ್ದಾರೆ.
ಕಡಿಮೆ ಪರೀಕ್ಷೆ ನಡೆದಿದ್ದರಿಂದ ಕರ್ನಾಟಕದಲ್ಲಿ ಕಡಿಮೆ ಪ್ರಕರಣಗಳಿವೆ ಎಂಬ ವಾದ ಸರಿಯಲ್ಲ. ಪ್ರತಿದಿನ 3 ಸಾವಿರ ಪರೀಕ್ಷೆ ನಡೆಸುವಷ್ಟು ಸಾಮರ್ಥ್ಯ ಇದ್ದು, ಅದನ್ನು ಹೆಚ್ಚಿಸುವಂತೆ ಸೂಚನೆ ಕೊಡಲಾಗಿದೆ. ಕರೊನಾ ಸಂಬಂಧಿಸಿ ಮೊದಲಿಗೆ ಕರ್ನಾಟಕವು ದೇಶದಲ್ಲಿ 3ನೇ ಸ್ಥಾನದಲ್ಲಿತ್ತು. ಪ್ರಸ್ತುತ 13ನೇ ಸ್ಥಾನದಲ್ಲಿದೆ. | ಎಲ್.ಕೆ. ಅತೀಕ್ ಐಎಎಸ್ ಅಧಿಕಾರಿ https://www.vijayavani.net/vehicle-pass-problem-minister-bommai-personally-took-care/