ಕಾರ್ಗಿಲ್‌ನಲ್ಲಿ ಕಂಪ್ಲಿ ವಕೀಲ ಮ್ಯಾರಥಾನ್ ಓಟ

Kampli Lawyer
Published on

ಕಂಪ್ಲಿ: ಪಟ್ಟಣದ ನಿವಾಸಿ, ಬೆಂಗಳೂರಿನ ಹೈಕೋರ್ಟ್ ಕೇಂದ್ರ ಸರ್ಕಾರಿ ವಕೀಲ ಮೋಹನ್ ಕುಮಾರ್ ದಾನಪ್ಪ ಅವರು ಹುತಾತ್ಮ ಯೋಧರು-ಹೋರಾಟಗಾರರಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಆ.15ರಂದು ಕಾರ್ಗಿಲ್‌ನಲ್ಲಿ ಮ್ಯಾರಥಾನ್ ಓಟ ಹಮ್ಮಿಕೊಂಡಿದ್ದಾರೆ.

ದೇಶದ 77ನೇ ಸ್ವಾತಂತ್ರ್ಯ ದಿನಾಚರಣೆ ಮತ್ತು 24ನೇ ಕಾರ್ಗಿಲ್ ವಿಜಯ ದಿವಸ ಅಂಗವಾಗಿ ಕಾಶ್ಮೀರದ ಕಾರ್ಗಿಲ್‌ನಲ್ಲಿ, ಸಲಾಂ ಸೊಲ್ಜರ್ಸ್ ಶೀರ್ಷಿಕೆಯಡಿ ಯುವಕರೇ ದೇಶ ಸೇವೆಗೆ ಒಂದಾಗಿ, ಸೇನೆ ಸೇರಲು ಮುಂದಾಗಿ ಎನ್ನುವ ವಾಕ್ಯದಡಿ ಕಾರ್ಗಿಲ್ ನಗರದಿಂದ ಕಾರ್ಗಿಲ್ ಯುದ್ಧ ಸ್ಮಾರಕದವರೆಗೂ 5 ಗಂಟೆಗಳ ಕಾಲ ರಾಷ್ಟ್ರಧ್ವಜ ಹಿಡಿದು ಮ್ಯಾರಥಾನ್ ಓಟ ಹಮ್ಮಿಕೊಳ್ಳಲಾಗಿದೆ. ಈ ಮ್ಯಾರಾಥಾನ್ ಓಟದ ಭಿತ್ತಿಪತ್ರವನ್ನು ರಾಜ್ಯಪಾಲರು ಬಿಡುಗಡೆಗೊಳಿಸಿದ್ದು ಗೌರವ ತಂದಿದೆ ಎಂದು ಮೋಹನ್ ಕುಮಾರ್ ದಾನಪ್ಪ ತಿಳಿಸಿದರು.
20ಕೆಎಂಪಿ02
ಮೋಹನ್‌ಕುಮಾರ್ ದಾನಪ್ಪ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net