

ಮುಂಬೈ: ಕರೀನಾ ಕಪೂರ್(Kareena Kapoor) ಬಾಲಿವುಡ್ ಟಾಪ್ ನಟಿಯರಲ್ಲಿ ಒಬ್ಬರು. ತನ್ನ 25 ವರ್ಷಗಳ ಸಿನಿಮಾ ವೃತ್ತಿಜೀವನದಲ್ಲಿ ಅವರು ಅನೇಕ ಉತ್ತಮ ಸಿನಿಮಾಗಳನ್ನು ನೀಡಿದ್ದಾರೆ. ಆದರೆ ಯಾವುದೇ ಚಿತ್ರದಲ್ಲಿ ಅವರು ಇಂಟಿಮೇಟ್ ದೃಶ್ಯಗಳನ್ನು ಮಾಡಿಲ್ಲ. ಇತ್ತೀಚೆಗಿನ ಸಂದರ್ಶನವೊಂದರಲ್ಲಿ ಕಾರಣವನ್ನು ಸ್ವತಃ ಕರೀನಾ ಅವರೇ ಬಹಿರಂಗಪಡಿಸಿದ್ದಾರೆ.
ನನ್ನ ವೃತ್ತಿಜೀವನದಲ್ಲಿ ಚಲನಚಿತ್ರಗಳನ್ನು ಬಹಳ ಎಚ್ಚರಿಕೆಯಿಂದ ಆಯ್ಕೆ ಮಾಡಿಕೊಂಡಿದ್ದೇನೆ. ಕಥೆಯನ್ನು ಮುಂದಕ್ಕೆ ಸಾಗಿಸಲು ಸಿನಿಮಾದಲ್ಲಿ ಲೈಂಗಿಕ ದೃಶ್ಯಗಳ ಅಗತ್ಯವಿಲ್ಲ ಎಂದು ಹೇಳಿದರು. ಲೈಂಗಿಕ ದೃಶ್ಯಗಳಲ್ಲಿ ನಟಿಸುವುದು ನನಗೆ ಆರಾಮದಾಯಕವಲ್ಲ ಎಂದು ತಿಳಿಸಿದರು.
ಕರೀನಾ ಕಪೂರ್ ಇತ್ತೀಚೆಗೆ ಗಿಲಿಯನ್ ಆಂಡರ್ಸನ್ ಅವರೊಂದಿಗಿನ ಸಂಭಾಷಣೆಯಲ್ಲಿ ಸಿನಿಮಾಗಳಲ್ಲಿನ ಇಂಟಿಮೇಟ್ ದೃಶ್ಯಗಳ ಕುರಿತು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು. ಅಂತಹ ದೃಶ್ಯಗಳು ನಮಗೆ ಎಂದಿಗೂ ಆರಾಮದಾಯಕವಲ್ಲ. ನಾನು ಇಡೀ ಕಲ್ಪನೆಯನ್ನು ಆ ರೀತಿ ನೋಡುವುದಿಲ್ಲ. ನಾವು ಲೈಂಗಿಕತೆಯನ್ನು ಅನುಭವಕ್ಕಾಗಿ ನೋಡುವುದಿಲ್ಲ, ನಾವು ಅದನ್ನ ಗೌರವಿಸುತ್ತೇವೆ ಎಂದು ಹೇಳಿದರು.
ನಾವು ಆನ್ಸ್ಕ್ರೀನ್ ಬರುವ ಮೊದಲು ನಾವು ಅದನ್ನು ಆ ರೀತಿ ನೋಡಬೇಕು ಮತ್ತು ಗೌರವಿಸಬೇಕು ಎಂದಿದ್ದಾರೆ. ಅಲ್ಲದೆ ಕರೀನಾರಿಗೆ ಸಿನಿಮಾಗಳಲ್ಲಿ ಇಂಟೀಮೆಟ್ ಸೀನ್ಗಳನ್ನು ಏಕೆ ಮಾಡಲಿಲ್ಲ ಎಂದು ಕೇಳಲಾಯಿತು. ಅದಕ್ಕೆ ಉತ್ತರಿಸಿದ ನಟಿ ಕಥೆಗೆ ಅದನ್ನು ಸೇರಿಸುವ ಅಗತ್ಯವಿಲ್ಲ ಎಂದು ನಾನು ವೈಯಕ್ತಿಕವಾಗಿ ಭಾವಿಸುತ್ತೇನೆ. ಇದು ನಾನು ನಂಬುವ ವಿಷಯವಲ್ಲ, ಇದನ್ನು ಮಾಡುವುದರಿಂದ ನಾನು ಎಂದಿಗೂ ಆರಾಮಾಗಿರುವುದಿಲ್ಲ ಎಂದು ನನಗೆ ತಿಳಿದಿದೆ. ನಾನು ಇದನ್ನು ಎಂದಿಗೂ ಮಾಡಿಲ್ಲ ಎಂದು ಹೇಳಿದರು.
ಸಮಾಜದಲ್ಲಿ ಮಹಿಳೆಯ ಆಸೆಗಳು ಮತ್ತು ಲೈಂಗಿಕತೆ ಇನ್ನೂ ಸಾಮಾನ್ಯ ವಿಷಯವಾಗಿಲ್ಲ. ನಾನು ಎಲ್ಲಿಂದ ಬಂದಿದ್ದರೂ ಕಥೆಯನ್ನು ಮುಕ್ತವಾಗಿ ಅನುಭವಿಸುವ ರೀತಿಯಲ್ಲಿ ಹೇಳಲು ನಾವು ಇನ್ನೂ ಮುಕ್ತವಾಗಿಲ್ಲ ಎಂದು ಹೇಳೀದರು. (ಏಜೆನ್ಸೀಸ್)