50ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಮಲೈಕಾ ; ಜೀವದ ಗೆಳತಿ ಕರೀನಾ ಕಪೂರ್​ ಸೇರಿದಂತೆ ಹಲವಾರು ಮಂದಿಯ ವಿಶಸ್

malaika arora
Published on

Malaika Arora 50th birthday: ಬಾಲಿವುಡ್ ಮುನ್ನಿ ಮಲೈಕಾ ಅರೋರಾ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 50 ನೇ ವಸಂತಕ್ಕೆ ಕಾಲಿಟ್ಟಿರುವ ನಟಿಗೆ ಜೀವದ ಗೆಳತಿ ಕರೀನಾ ಕಪೂರ್​ ಸೇರಿದಂತೆ ಹಲವಾರು ಮಂದಿ ಶುಭ ಕೋರುತ್ತಿದ್ದಾರೆ.


ಮಲೈಕಾ ಅರೋರಾ ಜತೆಗೆ ವಿಶೇಷ ಬಾಂಧವ್ಯ ಹೊಂದಿರುವ ನಟಿ ಕರೀನಾ ಕಪೂರ್​​, ಇಬ್ಬರ ಜತೆಗಿರುವ ಫೋಟೋವೊಂದನ್ನ ಹಂಚಿಕೊಂಡಿದ್ದಾರೆ.

ಮಲೈಕಾ ತಂಗಿ ಅಮೃತಾ ಅರೋರಾ ಕೂಡಾ ಮಲೈಕಾ ಜತೆಗಿನ ಬಾಲ್ಯದ ಫೊಟೋವೊಂದನ್ನ ಹಂಚಿಕೊಂಡಿದ್ದಾರೆ.

ಕರೀನಾ ಕಪೂರ್ ಖಾನ್, ಅಮೃತಾ ಅರೋರಾ ಮತ್ತು ಮಲೈಕಾ ಅರೋರಾ ಬಾಲಿವುಡ್​​​ನಲ್ಲಿ ಬೆಸ್ಟ್​​ ಫ್ರೆಂಡ್ಸ್​​​ ಅಂತಲೇ ಫೇಮಸ್​​​​.
ಮಲೈಕಾಗೆ ವಿಶ್ ಮಾಡಲು ಕರೀನಾ ಕಪೂರ್​​ ಮೂರು ಫೋಟೋಗಳನ್ನ ಹಂಚಿಕೊಂಡಿದ್ದಾರೆ.

ಈ ಮೂರು ಚಿತ್ರಗಳು ನಮ್ಮ ಇಷ್ಟು ವರ್ಷಗಳ ಪ್ರೀತಿಯ ಸಂಕೇತ ಲವ್ ಯು ಮಲ್ಲ, ಜನ್ಮದಿನದ ಶುಭಾಶಯಗಳು ಎಂದು ಕರೀನಾ ಪೋಟೋ ಮೇಲೆ ಬರೆದಿದ್ದಾರೆ.


ಬಾಲಿವುಡ್​​​ ಮುನ್ನಿ ಇಂದು ತನ್ನ ಜೀವನದ ಮತ್ತೊಂದು ವರ್ಷಕ್ಕೆ ಕಾಲಿಡುತ್ತಿದ್ದು, ಹುಟ್ಟುಹಬ್ಬದ ಶುಭಾಶಯಗಳು ಮಾಮ್", ಮತ್ತು "ಹ್ಯಾಪಿ ಹ್ಯಾಪಿ ಬರ್ತ್‌ಡೇ!" ಎಂದು ಬರೆದು ಅಭಿಮಾನಿಗಳು ಮಲೈಕಾಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net