ಕನ್ನಡಿಗರ ಮೇಲೆ ಹಲ್ಲೆ ಖಂಡಿಸಿ ಪ್ರತಿಭಟನೆ

24-RNR-09
Published on

ರಾಣೆಬೆನ್ನೂರ: ಬೆಳಗಾವಿಯ ಕೆಎಸ್​ಆರ್​ಟಿಸಿಬಸ್​ ನಿರ್ವಾಹಕ ಮೇಲಿನ ಹಲ್ಲೆ ಮಾಡಿರುವುದನ್ನು ಖಂಡಿಸಿ ಹಾಗೂ ಎಂಇಎಸ್​ ಸಂಘಟನೆ ನಿಷೇಧಿಸಲು ಆಗ್ರಹಿಸಿ ಇಲ್ಲಿಯ ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಟಕದ ವತಿಯಿಂದ ನಗರದ ಮಿನಿ ವಿಧಾನಸೌಧ ಎದುರು ಉಪ ತಹಸೀಲ್ದಾರ್​ ಶ್ಯಾಮಸುಂದರ ಗೊರವರ ಮೂಲಕ ಸೋಮವಾರ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಸಂಟನೆಯ ತಾಲೂಕು ಅಧ್ಯಕ್ಷ ಚಂದ್ರಪ್ಪ ಬಣಕಾರ ಮಾತನಾಡಿ, ಕಳೆದ ಎರಡು ದಿನಗಳ ಹಿಂದೆ ಕೆಎಸ್​ಆರ್​ಟಿಸಿ ಬಸ್​ ನಿರ್ವಾಹಕ ಮಹದೇವ ಅವರಿಗೆ ಬೆಳಗಾವಿಯಲ್ಲಿ ಕನ್ನಡದಲ್ಲಿ ಮಾತನಾಡಿ ಎಂದು ಹೇಳಿದಕ್ಕೆ ಕೆಲ ಮಾರಾಠಿ ಯುವಕರು ಸೇರಿ ಹಲ್ಲೆ ನಡೆಸಿದ್ದಲ್ಲದೆ ಲೈಂಗಿಕ ಕಿರುಕುಳ ಆರೋಪದಡಿ ಪೋಕ್ಸೋ ಕಾಯ್ದೆಯಲ್ಲಿ ಪ್ರಕರಣ ದಾಖಲು ಮಾಡಿ ದೌರ್ಜನ್ಯ ಎಸಗಿದ್ದಾರೆ.

ಇದಲ್ಲದೆ ಗಡಿನಾಡ ಬಸ್​ಗಳ ಮೇಲೆ ಕೇಸರಿ ಧ್ವಜ ಹಾರಿಸಿ ಎಂಇಎಸ್​ ಎಂದು ಬರೆದು ಅಟ್ಟಹಾಸ ಮೆರೆದಿದ್ದಾರೆ. ಆದ್ದರಿಂದ ರಾಜ್ಯ ಸರ್ಕಾರ ರಾಜ್ಯದಲ್ಲಿ ಎಂಇಎಸ್​ ಘಟನೆಯನ್ನು ಸಂರ್ಪೂಣ ನಿಷೇಧಿಸಬೇಕು. ನಿರ್ವಾಹಕನ ಮೇಲೆ ಹಲ್ಲೆ ಮಾಡಿರುವ ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಪ್ರಮುಖರಾದ ಮಲ್ಲಿಕಾರ್ಜುನ ಸಾವಕ್ಕಳವರ, ಶ್ರೀಧರ ಚಲವಾದಿ, ಪರಶುರಾಮ ಕುರುವತ್ತಿ, ರಿಯಾಜ್​ ದೊಡ್ಡಮನಿ, ಸಿದ್ದಪ್ಪ ಕೊಡೇರ, ಬಸವರಾಜ ರೊಡ್ಡನವರ, ಸಿದ್ದಪ್ಪ ದೊಡ್ಡಸಿದ್ದಪ್ಪನವರ, ಗಣೇಶ ಅಂಗಡಿ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net