

ರಾಣೆಬೆನ್ನೂರ: ನಾಡ ನುಡಿಯ ವಿಚಾರ ಬಂದಾಗ ಪ್ರತಿಯೊಬ್ಬ ಕನ್ನಡಿಗರು ಸ್ವಾಭಿಮಾನದಿಂದ ಹೋರಾಟ ಮಾಡಬೇಕು. ನೆರೆಯ ರಾಜ್ಯಗಳ ಗಡಿಯಲ್ಲಿರುವ ಕನ್ನಡಿಗರು ಆತಂಕದಲ್ಲಿದ್ದಾರೆ. ಅವರಿಗೆ ಧೈರ್ಯ ತುಂಬುವ ಕೆಲಸವನ್ನು ಸರ್ಕಾರ ಮಾಡಬೇಕು ಎಂದು ವೈದ್ಯ ಸಂತೋಷ ಮೋಟಗಿ ಹೇಳಿದರು.
ನಗರದ ಕರವೇ ತಾಲೂಕು ಟಕದ ವತಿಯಿಂದ ನಗರದಲ್ಲಿ ಮಂಗಳವಾರ ಏರ್ಪಡಿಸಿದ್ದ ವೀರ ವನಿತೆ ಒನಕೆ ಓಬ್ಬವ್ವ ಜಯಂತೋತ್ಸವ ಕಾರ್ಯಕ್ರಮ ಹಾಗೂ ಕರವೇ ಕಾರ್ಯಾಲಯ ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲಾಧ್ಯಕ್ಷ ರಾಮು ತಳವಾರ ತಾಲೂಕು ಸಮಿತಿಗೆ ನೂತನ ಅಧ್ಯಕ್ಷರನ್ನಾಗಿ ನಾಗರಾಜ ಯರಬಾಳ ಅವರನ್ನು ನೇಮಕ ಮಾಡಿದರು.
ಉಪಾಧ್ಯಕ್ಷ ಸುರೇಶ ಅಡ್ಡಂಗಡಿ, ಪ್ರಮುಖರಾದ ರಾಮನಗೌಡ ಸಿದ್ದಪ್ಪಳವರ, ಸುನಂದಾ ಹುಲಿಕಟ್ಟಿ, ಲಲಿತ ಬ್ಯಾಡಗಿ, ನಿಂಗಪ್ಪ ವಾಸನದ, ಸುಮಾ ಪುರದ, ಗೌರಮ್ಮ ಕುಲಕಣಿರ್, ಶಿವಪ್ಪ ಬಳಲ್ಕೊಪ್ಪ ಮತ್ತಿತರರಿದ್ದರು.