ಪ್ರಜ್ವಲ್ ದೇವರಾಜ್, ರಾಜ್ ಬಿ. ಶೆಟ್ಟಿ, ಸಂಪದಾ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ "ಅಂಬಿ ನಿಂಗ್ ವಯಸ್ಸಾಯ್ತೋ' ಖ್ಯಾತಿಯ ಗುರುದತ್ ಗಾಣಿಗ ಆ್ಯಕ್ಷನ್&ಕಟ್ ಹೇಳಿರುವ ಸಿನಿಮಾ "ಕರಾವಳಿ'. ಈಗಾಗಲೇ ಟೀಸರ್ ಮತ್ತು ಲುಕ್ಗಳ ಮೂಲಕ ಗಮನ ಸೆಳೆದಿದ್ದು, ಇತ್ತೀಚೆಗಷ್ಟೇ ಶೀರ್ಷಿಕೆ ಗೀತೆ"ಸೋಲ್ ಆ್ ಕರಾವಳಿ' ಬಿಡುಗಡೆ ಮಾಡಲಾಯಿತು. "ಕಡಲಿಂದ ನಾಡು, ಕಡಲಿಂದ ಕಾಡು, ಕಡಲಿಂದ ತಾನೆ ಒಡಲಾಗೂಡು...' ಎಂದು ಸಾಗುವ ಈ ಹಾಡನ್ನು ಕಟಪಾಡಿ ಕಂಬಳ ಟ್ರ್ಯಾಕ್ನಲ್ಲಿ ಚಿತ್ರೀಕರಿಸಿರುವುದು ವಿಶೇಷ. ಕಟಪಾಡಿಯಲ್ಲಿ ನಡೆಯುವ ಕಂಬಳಕ್ಕೆ ಸುಮಾರು 700 ವರ್ಷಗಳ ಇತಿಹಾಸವಿದೆ. ಏಳು ಶತಮಾನಗಳಿಂದಲೂ ಒಂದೇ ಕುಟುಂಬದ ತಲೆಮಾರುಗಳು ಈ ಕಂಬಳ ನಡೆಸಿಕೊಂಡು ಬರುತ್ತಿರುವುದು ಮತ್ತೊಂದು ವಿಶೇಷ. ಸಾಂಪ್ರದಾಯಿಕ ಕರಾವಳಿ ಕಂಬಳಗಳಲ್ಲಿ ಅತಿ ಹೆಚ್ಚು ಪ್ರಾಮುಖ್ಯವಿರುವ ಹೆಗ್ಗಳಿಕೆ ಕಟಪಾಡಿ ಕಂಬಳಕ್ಕೆ ಸಲ್ಲುತ್ತದೆ. ಇಂತಹ ಐತಿಹಾಸಿಕ ಕಂಬಳ ಟ್ರ್ಯಾಕ್ನಲ್ಲಿ ಮೊದಲ ಬಾರಿ ಚಿತ್ರೀಕರಣಗೊಂಡ ಸಿನಿಮಾ ಎಂಬ ಹೆಗ್ಗಳಿಕೆ "ಕರಾವಳಿ'ಗೆ ಸಲ್ಲುತ್ತದೆ. ಪ್ರಮೋದ್ ಮರವಂತೆ ಸಾಹಿತ್ಯ, ಸಚಿನ್ ಬಸ್ರೂರ್ ಸಂಗೀತದಲ್ಲಿ ಮೂಡಿಬಂದಿರುವ "ಸೋಲ್ ಆ್ ಕರಾವಳಿ'ಗೆ ಸಾಯಿ ಜ್ಞಾನೇಶ್ ಧ್ವನಿಯಾಗಿದ್ದಾರೆ. ಪ್ರಜ್ವಲ್, ರಾಜ್, ಸಂಪದಾ ಜತೆ ಮಿತ್ರ, ರಮೇಶ್ ಇಂದಿರ, ಶ್ರೀಧರ್ ಪ್ರಮುಖ ತಾರಾಗಣದಲ್ಲಿದ್ದಾರೆ. ಇದೇ ಜು. 3ರಂದು "ಕರಾವಳಿ' ರಾಜ್ಯಾದ್ಯಂತ ತೆರೆಗೆ ಬರಲಿದ್ದು, ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ವಿತರಣೆಯ ಜವಾಬ್ದಾರಿ ಹೊತ್ತಿದೆ.