ಕಲಿಕೆಯಲ್ಲಿ ಹಿಂದುಳಿದ ಮಕ್ಕಳು ಮುನ್ನೆಲೆಗೆ ಬರಲಿ: ಡಿಡಿಪಿಐ ಎಂ.ಎ.ರೆಡ್ಡೇರ್ ಸಲಹೆ

21 KARATAGI 2
Published on

ಕಾರಟಗಿ; ಕಲಿಕೆಯಲ್ಲಿ ಹಿಂದುಳಿದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳನ್ನು ಮುನ್ನೆಲೆಗೆ ತರಬೇಕು ಎಂದು ಡಿಡಿಪಿಐ ಎಂ.ಎ.ರೆಡ್ಡೇರ್ ಹೇಳಿದರು.

ಇಲ್ಲಿನ ಶ್ರೀಶರಣಬಸವೇಶ್ವರ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆಯಲ್ಲಿ ಎಸ್ಸೆಸ್ಸಲ್ಸಿ ವಿದ್ಯಾರ್ಥಿಗಳಿಗೆ ಶನಿವಾರ ಏರ್ಪಡಿಸಿದ್ದ ಪ್ರೇರಣಾ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು. ಶಿಕ್ಷಣದಿಂದ ಮಾತ್ರ ಸರ್ವತೋಮುಖ ಅಭಿವೃದ್ಧಿ ಸಾಧ್ಯವಿದ್ದು, ಪ್ರತಿಯೊಬ್ಬರೂ ಮಕ್ಕಳ ಶಿಕ್ಷಣಕ್ಕಾಗಿ ಶ್ರಮಿಸಬೇಕು ಎಂದರು.

ಗಂಗಾವತಿ ಬಿಇಒ ೋಮಶೇಖರಗೌಡ ಪಾಟೀಲ್ ಮಾತನಾಡಿ, ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಗುರುತಿಸಿ ಅವರಿಗೆ ಕೌಶಲಭರಿತ ಹಾಗೂ ಸರಳ ಕಲಿಕೆಯ ವಿಧಾನ ಹೇಳಿಕೊಡುವ ಮೂಲಕ ಸಂಪನ್ಮೂಲ ಶಿಕ್ಷಕರು ಕಲಿಕೆಗೆ ಪ್ರೇರೇಪಿಸಬೇಕು ಎಂದರು. ತಾಲೂಕಿನ 9 ಶಾಲೆಯ 172 ಮಕ್ಕಳಿಗೆ ಸರಳ ಕಲಿಕೆಯ ವಿಧಾನಗಳನ್ನು ತಿಳಿಸಿಕೊಡಲಾಯಿತು. ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಚನ್ನಬಸಪ್ಪ ಸುಂಕದ, ಮುಖ್ಯಶಿಕ್ಷಕ ಶರಣಪ್ಪ, ವೀರೇಶ ಮ್ಯಾಗೇರಿ, ವಿಷಯ ಸಂಪನ್ಮೂಲ ಶಿಕ್ಷಕರಾದ ರಾಘವೇಂದ್ರ ಕಂಠಿ, ಹೇಮಂತ, ಗುರಪಯ್ಯ, ಗುರುಶಾಂತ ಮೂರ್ತಿ, ಶೈಲಜಾ ನಾಯಕ, ಶರಣಪ್ಪ ಕುಂಬಾರ, ವಿರೂಪಾಕ್ಷಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net