VIDEO| ಟ್ರೈನಿ ವೈದ್ಯೆ ಹತ್ಯೆ ಕೇಸ್​; ಸುಪ್ರೀಂ ವಿಚಾರಣೆ ವೇಳೆ ನಕ್ಕ ಕಪಿಲ್ ಸಿಬಲ್

Kapil Sibal
Published on

ನವದೆಹಲಿ: ದೇಶಾದ್ಯಂತ ತೀವ್ರ ಖಂಡನೆಗೆ ಗುರಿಯಾಗಿರುವ ಆರ್.​ಜಿ. ಕರ್​ ಮೆಡಿಕಲ್​ ಕಾಲೇಜಿನ ಟ್ರೈನಿ ವೈದ್ಯೆ ಹತ್ಯೆ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ದೇಶಾದ್ಯಂತ ಪ್ರತಿಭಟನೆಗಳು ಮುಂದುವರೆದಿವೆ. ಇತ್ತ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಸ್ವಯಂ ಪ್ರೇರಿತವಾಗಿ​ ವಿಚಾರಣೆ ನಡೆಸುತ್ತಿದ್ದು, ವಿಚಾರಣೆಯ ಸಂದರ್ಭದಲ್ಲಿ ಹಿರಿಯ ವಕೀಲ ಕಪಿಲ್​ ಸಿಬಲ್​ ನಕ್ಕಿರುವುದು ಎಲ್ಲರ ಅಸಮಾಧಾನಕ್ಕೆ ಕಾರಣವಾಗಿದೆ.

ಟ್ರೈನಿ ವೈದ್ಯೆ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್​ ನಡೆಸುತ್ತಿರುವ ವಿಚಾರಣಗೆ ಸಂಬಂಧಿಸಿದಂತೆ ಕಪಿಲ್​ ಸಿಬಲ್​ ಪಶ್ಚಿಮ ಬಂಗಾಳ ಸರ್ಕಾರವನ್ನು ಪ್ರತಿನಿಧಿಸುತ್ತಿದ್ದು, ಸಾಲಿಸಿಟರ್​ ಜನರಲ್​ ತುಷಾರ್​ ಮೆಹ್ತಾ ಅವರು ಸಿಬಿಐ ಪರವಾಗಿ ವಾದಿಸುತ್ತಿದ್ದಾರೆ.

ಸುಪ್ರೀಂಕೋರ್ಟ್ ಬಾರ್ ಅಸೋಸಿಯೇಷನ್ (SCBA) ಅಧ್ಯಕ್ಷ ಕಪಿಲ್​ ಸಿಬಲ್ ಮತ್ತು ತುಷಾರ್​ ಮೆಹ್ತಾ ನಡುವೆ ವಾದ ನಡೆಯುತ್ತಿರುವ ವೇಳೆ ಹಿರಿಯ ವಕೀಲರು ನಕ್ಕ ಘಟನೆ ನಡೆದಿದೆ. ಸರ್ಕಾರಿ ವಕೀಲರು ಪೊಲೀಸರಿಂದ ಎಫ್‌ಐಆರ್‌ನ ದಾಖಲಾತಿಯಲ್ಲಿನ ಅಂತರದ ಬಗ್ಗೆ ನ್ಯಾಯಾಲಯಕ್ಕೆ ವಿವರಿಸುತ್ತಿದ್ದರು. ಈ ವೇಳೆ ಕಪಿಲ್​ ಸಿಬಲ್​ ನಕ್ಕಿದ್ದಾರೆ.

ಕಪಿಲ್​ ಸಿಬಲ್​ ನಕ್ಕಿದ್ದರಿಂದ ಕುಪಿತಗೊಂಡ ತುಷಾರ್ ಮೆಹ್ತಾ ಒಂದು ಹುಡುಗಿ ತನ್ನ ಪ್ರಾಣವನ್ನು ಅತ್ಯಂತ ಅಮಾನವೀಯ ರೀತಿಯಲ್ಲಿ ಕಳೆದುಕೊಂಡಿದ್ದಾಳೆ. ಇಲ್ಲಿ ವ್ಯಕ್ತಿ ಸತ್ತಿದ್ದಾರೆ ನಗಬೇಡಿ ಎಂದು ಹೇಳಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ಇತ್ತ ಈ ವಿಡಿಯೋವನ್ನು ಪೋಸ್ಟ್​ ಮಾಡಿ ಕಿಡಿಕಾರಿರುವ ಬಿಜೆಪಿ ನಾಯಕ ಅಮಿತ್​ ಮಾಳವೀಯ, ಮಾಜಿ ಕಾಂಗ್ರೆಸ್ಸಿಗ ಕಪಿಲ್ ಸಿಬಲ್ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವನ್ನು ಪ್ರತಿನಿಧಿಸುವ ಕಾನೂನು ತಂಡ ಮಮತಾ ಬ್ಯಾನರ್ಜಿ ಅವರಂತೆಯೇ ಇದೆ. ವೈದ್ಯೆಯನ್ನು ಎರಡು ಬಾರಿ ಕೊಂದಿದ್ದಕ್ಕಾಗಿ ಯಾವುದೇ ಪಶ್ಚಾತ್ತಾಪವನ್ನು ತೋರಿಸಲಿಲ್ಲ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಕಪಿಲ್ ಸಿಬಲ್ ಅವರಲ್ಲಿ ನಗಬೇಡಿ ಎಂದು ನೆನಪಿಸಬೇಕಾಗಿ ಬಂತು ಎಂದು ಟ್ವೀಟ್​ ಮಾಡಿ ಕಿಡಿಕಾರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net