VIDEO| ನಂದಿ ಬೆಟ್ಟದ ಸೌಂದರ್ಯ ಸವಿದ ಕಪಿಲ್ ಶರ್ಮಾ

Kapil Sharmas early morning trek to Nandi Hills is all about serene beauty Archana Puran Singh REACTS
Published on

ಬೆಂಗಳೂರು: ಸೆಲೆಬ್ರೆಟಿಗಳು ತಮ್ಮ ಬಿಡುವಿಲ್ಲದ ಕೆಲಸಗಳಿಂದ ಆಗಾಗ ವಿರಾಮ ತೆಗೆದುಕೊಂಡು ದೂರದ ದೇಶಗಳಿಗೆ ಹೋಗುವುದು ಸಾಮಾನ್ಯ. ಆದರೆ ಬಾಲಿವುಡ್ ನಟ ಮತ್ತು ಹಾಸ್ಯ ಕಲಾವಿದ ಕಪಿಲ್ ಶರ್ಮಾ ತಮ್ಮ ಸ್ನೇಹಿತರ ಜತೆ ಬೆಂಗಳೂರಿಗೆ ಬಂದಿದ್ದು, ನಂದಿ ಬೆಟ್ಟದಲ್ಲಿ ವಿಹರಿಸಿರುವ ಫೋಟೋ ಹಾಗೂ ವಿಡಿಯೋಗಳು ವೈರಲ್ ಆಗಿದೆ.

ಬೆಳಗಿನ ಜಾವ ನಂದಿ ಬೆಟ್ಟದಲ್ಲಿ ಚಾರಣ ನಡೆಸಿರುವ ಕಪಿಲ್, ಬೆಟ್ಟದ ಮೇಲಿನ ವಿಹಂಗಮ ನೋಟವನ್ನು ತೋರುವ ವಿಡಿಯೋವನ್ನು ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ. ಕಪ್ಪು ಶರ್ಟ್​, ಬೂದು ಬಣ್ಣದ ಶಾರ್ಟ್​ ಪ್ಯಾಂಟ್ ಮತ್ತು ಮಾಸ್ಕ್ ಧರಿಸಿ ಕಪಿಲ್ ಶರ್ಮಾ ಧ್ಯಾನಸ್ಥರಾದಂತೆ ಫೋಟೋಗೆ ಫೋಸ್ ಕೂಡಾ ಕೊಟ್ಟಿದ್ದಾರೆ.

15 ದಿನಗಳ ಕಾಲ ಕಪಿಲ್ ಶರ್ಮಾ ಬೆಂಗಳೂರಿನಲ್ಲಿಯೇ ಇರಲಿದ್ದಾರೆ. ನಿತ್ಯವೂ ಹಲವು ಪೋಸ್ಟ್​ಗಳನ್ನು ಹಂಚಿಕೊಳ್ಳುತ್ತಿದ್ದಾರಂತೆ. ಇವರ ಜತೆ ಖ್ಯಾತ ನಟಿ ಅರ್ಚನಾ ಪುರಾಣ್ ಸಿಂಗ್ ಮತ್ತು ಇತರ ಗೆಳೆಯರೂ ಬೆಂಗಳೂರಿಗೆ ಬಂದಿದ್ದಾರೆ.

ಹಿಂದಿ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ದಿ ಕಪಿಲ್ ಶರ್ಮಾ ಶೋ ಮೂಲಕ ಖ್ಯಾತಿಗಳಿಸಿರುವ ಕಪಿಲ್, ತಮ್ಮ ಹಾಸ್ಯದ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಸದ್ಯ ನಿತ್ಯದ ಜಂಜಾಟವನ್ನು ಮರೆತು ವಿರಾಮ ತೆಗೆದುಕೊಳ್ಳುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net