ಬೆಂಗಳೂರು: ಕಾಂತಾರದ ಖ್ಯಾತಿಯ ನಂತರ ಜಗತ್ತಿನೆಲ್ಲೆಡೆ ಮನ್ನಣೆ ಪಡೆದಿರುವ ರಿಷಭ್ ಶೆಟ್ಟಿ ಇತ್ತೀಚೆಗಷ್ಟೇ ಜಿನೀವಾ ತಲುಪಿದ್ದರು. ಇಂದು ಅಲ್ಲಿ ಕಾಂತಾರ ಚಿತ್ರದ ವಿಶೇಷ ಪ್ರದರ್ಶನ ನಡೆದಿದೆ.
ರಿಷಭ್ ಶೆಟ್ಟಿ ಜಿನೀವಾದಲ್ಲಿ ದಿಗ್ಗಜರೊಂದಿಗೆ ಕಾಣಿಸಿಕೊಂಡದ್ದು, ಆ ವಿಶಿಷ್ಟ ಕ್ಷಣದ ಝಲಕ್ ನೋಡಲು ಈ ಕೆಳಗಿನ ವಿಡಿಯೋ ನೋಡಿ:
ನಿರ್ದೇಶಕ ನಟರಾಗಿರುವ ರಿಷಭ್ ಶೆಟ್ಟಿ, ಮಾನವ ಹಕ್ಕು ಕೌನ್ಸಿಲ್ನಲ್ಲಿ ಪ್ರಕೃತಿಯ ಮಹತ್ವದ ಬಗ್ಗೆ ಭಾಷಣ ಮಾಡಿ ಜಾಗೃತಿ ಮೂಡಿಸಿದ್ದರು. ತಮ್ಮ ಭಾಷಣದಲ್ಲಿ, ಅವರು ನಟ ಮತ್ತು ಚಲನಚಿತ್ರ ನಿರ್ಮಾಪಕರಾಗಿ, ನೈಜ ಪ್ರಪಂಚದ ಬದಲಾವಣೆಗಳನ್ನು ತರಲು ಕಲೆಯನ್ನು ಬಳಸಲು ಬಯಸುತ್ತಾರೆ ಎಂದು ಹೇಳಿದರು.

"ಪರಿಸರದ ಸುಸ್ಥಿರತೆ ಇಂದಿನ ಅಗತ್ಯವಾಗಿದೆ. ನಟ-ನಿರ್ದೇಶಕನಾಗಿ ತಳಮಟ್ಟದಲ್ಲಿ ಪ್ರಭಾವ ಬೀರುವುದು ನನ್ನ ಗುರಿಯಾಗಿದೆ. ಜಾಗತಿಕ ಸಂಸ್ಥೆಗಳು ಮತ್ತು ಸರ್ಕಾರಿ ಸಂಸ್ಥೆಗಳು ಪರಿಸರ ಸುಸ್ಥಿರತೆಗಾಗಿ ಅನ್ವೇಷಣೆ ಮಾಡುವುದರಲ್ಲಿ ಮುಂಚೂಣಿಯಲ್ಲಿವೆ" ಎಂದು ಅವರು ಹೇಳಿದರು.
ಇದಾದ ಮೇಲೆ ಇಂದು ರಿಷಭ್ ಶೆಟ್ಟಿ ಜಿನೀವಾದಲ್ಲಿ ನಡೆದ ಕಾಂತಾರ ಚಿತ್ರದ ವಿಶೇಷ ಪ್ರದರ್ಶನದ ಕ್ಷಣಗಳನ್ನು ಹಂಚಿಕೊಂಡಿದ್ದಾರೆ. ಈ ಬಗ್ಗೆ ಒಟ್ಟು ಮೂರು ಪೋಸ್ಟ್ಗಳನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಒಂದು ಪೋಸ್ಟ್ನಲ್ಲಿ ಅವರು ಭಾರತ 75ನೇ ಸಂಭ್ರಮಾಚರಣೆಯ ಅಂಗವಾಗಿ ಅಲ್ಲಿದ್ದ ಫ್ಲೆಕ್ಸ್ನೊಂದಿಗೆ ತೆಗೆಸಿಕೊಂಡಿದ್ದ ಫೋಟೊ ಶೇರ್ ಮಾಡಿದ್ದು, ಕ್ಯಾಪ್ಶನ್ ಆಗಿ ''ಜಿನೆವಾದಲ್ಲಿ ನಮ್ಮ ಕಾಂತಾರ ಸಿನಿಮಾದ ವಿಶೇಷ ಪ್ರದರ್ಶನ. ಪ್ರಪಂಚದಾದ್ಯಂತ ಇರುವ ಗಣ್ಯಾತಿ ಗಣ್ಯರು ನಮ್ಮ ಕಾಂತರ ಸಿನಿಮಾ ನೋಡಿ ಅದರ ಸಂದೇಶವನ್ನು ಗ್ರಹಿಸಿ ಪ್ರಶಂಸಿದ ಪರಿ ಶ್ಲಾಘನೀಯ, ಇದಕ್ಕೆ ಕಾರಣರಾದ ಹೆಮ್ಮೆಯ ಕನ್ನಡಿಗರಿಗೆ ಅಭಿನಂದನೆಗಳು'' ಎಂದು ಬರೆದುಕೊಂಡಿದ್ದಾರೆ.
ತಮ್ಮ ಕೊನೆಯ ಪೋಸ್ಟ್ನಲ್ಲಿ ಗಣ್ಯರು ಥಿಯೇಟರ್ ಪ್ರವೇಶಿಸುತ್ತಿರುವ ಫೋಟೊಗಳು, ಅವರೊಂದಿಗಿನ ಕ್ಷಣಗಳು, ಕಾಂತಾರ ಚಿತ್ರದ ಒಂದು ಕ್ಷಣ, ಹೀಗೆ ಅನೇಕ ಫೋಟೋಗಳನ್ನು ಸೇರಿಸಿ ಒಂದು ವಿಡಿಯೋ ಮಾಡಿ ಹಂಚಿಕೊಂಡಿದ್ದಾರೆ.