

Kantara Chapter 1: ಜಾಗತಿಕವಾಗಿ ತೆರೆಕಂಡ ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿದ ‘ಕಾಂತಾರ ಚಾಪ್ಟರ್ 1’ ಚಿತ್ರಕ್ಕೆ ಇದೀಗ ಎಲ್ಲೆಡೆಯಿಂದ ವಿಶೇಷ ಮನ್ನಣೆ ಲಭಿಸುತ್ತಿದೆ. ಸಿನಿಪ್ರೇಕ್ಷಕರಿಗೆ ರೋಮಾಂಚನಕಾರಿ ಅನುಭವವನ್ನು ನೀಡಿರುವ ರಿಷಬ್, ನಮ್ಮ ನಾಡಿನ ಮಣ್ಣಿನ ಕಥೆಯನ್ನು ವಿಶ್ವಕ್ಕೆ ಪಸರಿಸಿರುವುದು ಚಿತ್ರದ ಗೆಲುವಿಗೆ ದೊಡ್ಡ ಸಾಕ್ಷಿಯಾಗಿ ನಿಂತಿದೆ. ಬ್ಲಾಕ್ಬಸ್ಟರ್ನತ್ತ ಸಾಗುತ್ತಿರುವ ಕಾಂತಾರ ಈಗ ಬಾಕ್ಸ್ ಆಫೀಸ್ನಲ್ಲಿ ಕೇವಲ 4 ದಿನಕ್ಕೆ 226.92 ಕೋಟಿ ರೂ. ಗಳಿಸಿದೆ.
ಈ ಹಿಂದೆ ಡಿವೈನ್ ಬ್ಲಾಕ್ಬಸ್ಟರ್ ಆಗಿ ಹೊರಹೊಮ್ಮಿದ್ದ ಕಾಂತಾರ, ಈಗ ಚಾಪ್ಟರ್ 1 ಮೂಲಕ ಮತ್ತೊಮ್ಮೆ ಆ ಪಟ್ಟವನ್ನು ಅಲಂಕರಿಸಿದೆ. ರಿಷಬ್ ಶೆಟ್ಟಿ ಚಿತ್ರವನ್ನು ನಿರ್ಮಿಸುವ ಮುಖೇನ ಹೊಂಬಾಳೆ ಫಿಲ್ಮ್ಸ್ ಎರಡನೇ ಬಾರಿ ಸಖತ್ ಜಾಕ್ಪಾಟ್ ಹೊಡೆದಿದೆ. ವಾರಾಂತ್ಯದ ಮೇಲೆ ನಿರೀಕ್ಷೆಗಳು ಮೂಡಿತ್ತು. ಅಂತೆಯೇ, ಶನಿವಾರ ಮತ್ತು ಭಾನುವಾರ ಚಿತ್ರಮಂದಿರಗಳನ್ನು ತುಂಬಿದ್ದ ಸಿನಿಪ್ರಿಯರು, ಚಿತ್ರದ ಗಳಿಕೆಯನ್ನು ಇದೀಗ 220 ಕೋಟಿ ರೂ.ಗೆ ಕೊಂಡೊಯ್ದಿದ್ದಾರೆ.
ದಿನ 1: 61.85 ಕೋಟಿ ರೂ.
ದಿನ 2: 45.4 ಕೋಟಿ ರೂ.
ದಿನ 3: 55 ಕೋಟಿ ರೂ.
ದಿನ 4: 61.5 ಕೋಟಿ ರೂ.
ದಿನ 5: 3.17 ಕೋಟಿ ರೂ. (ಮಧ್ಯಾಹ್ನ 1 ಗಂಟೆಯವರೆಗೆ)
ಇಲ್ಲಿಯವರೆಗೆ ಒಟ್ಟು 226.92 ಕೋಟಿ ರೂ., (ಏಜೆನ್ಸೀಸ್).
‘ಕಾಂತಾರ ಚಾಪ್ಟರ್ 1’ ಚಿತ್ರದಲ್ಲಿ ರಿಷಬ್ ಶೆಟ್ಟಿ, ರುಕ್ಮಿಣಿ ವಸಂತ್, ಗುಲ್ಶನ್ ದೇವಯ್ಯ, ಜಯರಾಮ್, ಕಿಶೋರ್, ರಾಕೇಶ್ ಪೂಜಾರಿ, ಪ್ರಮೋದ್ ಶೆಟ್ಟಿ, ಅಚ್ಯುತ್ ಕುಮಾರ್ ಸೇರಿದಂತೆ ಮುಂತಾದವರು ನಟಿಸಿದ್ದಾರೆ. ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದು, ಹೊಂಬಾಳೆ ಫಿಲ್ಮ್ಸ್ ಬ್ಯಾನರ್ನಡಿ ವಿಜಯ್ ಕಿರಂಗದೂರು ನಿರ್ಮಾಣ ಮಾಡಿದ್ದಾರೆ,(ಏಜೆನ್ಸೀಸ್).