

ಬೆಂಗಳೂರು: ಕೇಂದ್ರ ಲೋಕಸೇವಾ ಆಯೋಗವು ಭಾರತೀಯ ಅರಣ್ಯ ಸೇವೆಯ (ಐಎಫ್ಎಸ್) ಹುದ್ದೆಗಳ ನೇಮಕಾತಿಗೆ ನಡೆಸಿದ್ದ ಪರೀಕ್ಷೆಯಲ್ಲಿ ಐವರು ಕನ್ನಡಿಗರು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. ಸಿ.ಕೆ. ಯೋಗೀಶ್ 14ನೇ ರ್ಯಾಂಕ್ ಗಳಿಸಿದ್ದರೆ, ಸಚಿನ್ ಹನುಮಪ್ಪ ನಡಗಡ್ಡಿ-17ನೇ ರ್ಯಾಂಕ್, ಮನು ಅಶೋಕ್ ಭಟ್-26, ಕೆ.ಬಿ. ಅಮಿತ-43, ದಿಗಂತ್ ನಾಯಕ್ 55ನೇ ರ್ಯಾಂಕ್ ಪಡೆದಿದ್ದಾರೆ.
ಈ ಹುದ್ದೆಗಳ ನೇಮಕಾತಿಗಾಗಿ 2019ರ ಡಿಸೆಂಬರ್ನಲ್ಲಿ ಮುಖ್ಯ ಪರೀಕ್ಷೆ ನಡೆಸಲಾಗಿತ್ತು. ಕಳೆದ ಫೆಬ್ರವರಿಯಲ್ಲಿ ಸಂದರ್ಶನ ನಡೆಸಲಾಗಿತ್ತು. ಖಾಲಿಯಿದ್ದ 90 ಸ್ಥಾನಗಳ ಪೈಕಿ 88 ಜನರ ನೇಮಕಾತಿಗೆ ಶಿಫಾರಸು ಮಾಡಲಾಗಿದೆ. ಇದಲ್ಲದೇ, ಇನ್ನು 20 ಜನರ ಆಯ್ಕೆಯನ್ನು ಪ್ರಾತಿನಿಧಿಕ ಪಟ್ಟಿಯಲ್ಲಿ ಹೆಸರಿಸಲಾಗಿದೆ ಎಂದು ಯುಪಿಎಸ್ಸಿ ತಿಳಿಸಿದೆ. ವಿವರಗಳಿಗೆ ಡಿಡಿಡಿ.ಟಠ್ಚ.ಜಟಡ.ಜ್ಞಿ ಸಂರ್ಪಸಬಹುದು.
ತಹಸೀಲ್ದಾರ್ ಹುದ್ದೆಗೆ ತಣಿಯಲಿಲ್ಲ
ಐಎಎಸ್ ಎಂದರೆ ಎಲ್ಲೆಡೆ ಗೌರವ ಜಾಸ್ತಿ. ಡಿಸಿಗೆ ಇರುವ ಗೌರವ ನೋಡಿ ಬಾಲ್ಯದಲ್ಲೇ ನಾನೂ ಉನ್ನತ ಹುದ್ದೆಗೇರಬೇಕೆಂಬ ಆಸೆ ಚಿಗುರೊಡೆದಿತ್ತು. ಐಎಫ್ಎಸ್ ಸಿಕ್ಕಿರುವುದಕ್ಕೆ ಖುಷಿ ಇದೆ. ನಮ್ಮ ರಾಜ್ಯದಲ್ಲೇ ಹುದ್ದೆ ಸಿಗುವ ಅವಕಾಶ ಇದೆ. ಅರಣ್ಯ ರಕ್ಷಣೆ, ವನ್ಯಜೀವಿ ರಕ್ಷಣೆ, ಕೃಷಿ ಅರಣ್ಯ ರಕ್ಷಣೆ. ರೈತರ, ಬಡವರ ಅಭಿವೃದ್ಧಿ ನನ್ನ ಪ್ರಮುಖ ಆದ್ಯತೆ. | ಸಿ.ಕೆ. ಯೋಗೀಶ್
ಛಲಕ್ಕೆ ಮಣಿದ ಫಲಿತಾಂಶ
ಬುಡಕಟ್ಟು ಜನಾಂಗದವರ ಸಮಸ್ಯೆಗಳನ್ನು ನೋಡಿದ್ದೇನೆ. ಅವರಲ್ಲಿನ್ನೂ ಪ್ರಗತಿಯಾಗಬೇಕಾದುದು ಸಾಕಷ್ಟಿದೆ. ನೈಸರ್ಗಿಕ ವಿಕೋಪ ಸಂಭವಿಸಿದಾಗ ಅವುಗಳನ್ನು ನಿಭಾಯಿಸುವ ನಿಟ್ಟಿನಲ್ಲಿ ಅಭಿವೃದ್ಧಿ ಕಾರ್ಯ ಯೋಜನೆ, ಹೊಸ ಪರಿಕಲ್ಪನೆ, ನನ್ನದೇ ಆದ ಯೋಜನೆಗಳನ್ನು ರೂಪಿಸಬೇಕೆಂಬ ಗುರಿ ಇದೆ. | ಕೆ.ಬಿ. ಅಮಿತಾ
ಪಶ್ಚಿಮ ಘಟ್ಟಗಳ ಸಾಂಗತ್ಯವೇ ಸ್ಪೂರ್ತಿ
ಎರಡನೇ ಪ್ರಯತ್ನಕ್ಕೆ ಗೆಲುವು
ಫಾರೆಸ್ಟ್ ಸರ್ವೀಸ್ನಲ್ಲಿ ತುಂಬಾ ಮುಖ್ಯವಾದ ಅಂಶವೆಂದರೆ ಐಚ್ಛಿಕ ವಿಷಯ. ಕಳೆದ ಬಾರಿ ಕೇವಲ ನೋಟ್ಸ್ ರೆಫರ್ ಮಾಡಿದೆ. ಈ ಸಲ ಆ ತಪು್ಪ ಮಾಡದೆ ನೋಟ್ಸ್ ಜತೆಜತೆಗೆ ಅಧ್ಯಯನ ಸಾಮಗ್ರಿ, ಪುಸ್ತಕಗಳನ್ನು ಸಂಗ್ರಹಿಸಿ ಓದಿದೆ. ಒಂದು ಪ್ರಯತ್ನದಿಂದ ಮತ್ತೊಂದು ಪ್ರಯತ್ನಕ್ಕೆ ಸುಧಾರಣೆ ಹೆಜ್ಜೆ ಇಟ್ಟೆ. ಅಂತಿಮವಾಗಿ ಯಶಸ್ಸು ಕಂಡೆ. ಬುಡಕಟ್ಟು ಜನಾಂಗದವರ, ಹಿಂದುಳಿದ ವರ್ಗದ ಅಭಿವೃದ್ಧಿ ನನ್ನ ಕನಸು. | ದಿಗಂತ್ ನಾಯಕ್
ಶಿವಲೀಲಾ ಎಸ್. ಪೂಜಾರ್