ಹಳ್ಳಿಗರಿಂದಲೇ ಇಂದಿಗೂ ಉಳಿದಿದೆ ಕನ್ನಡ

nes
ಎಚ್.ಎಸ್.ರುದ್ರಪ್ಪ ರಾಷ್ಟ್ರೀಯ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಸಾಂಸ್ಕೃತಿಕ ವೇದಿಕೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ದೊಡ್ಡಣ್ಣ, ಎಸ್.ಎನ್.ನಾಗರಾಜ್, ಎಸ್.ಚನ್ನಪ್ಪ, ಸುಮಾ ಸಂದೀಪ್, ಡಾ.ಸಂತೋಷ್ ಮುಂತಾದವರಿದ್ದರು.
Published on

ಶಿವಮೊಗ್ಗ: ವಿದ್ಯಾರ್ಥಿಗಳು ಅಧ್ಯಯನಶೀಲರಾಗಬೇಕು. ಯಾರ ಮನಸ್ಸನ್ನೂ ನೋಯಿಸಬಾರದು, ತಂದೆ-ತಾಯಿ, ಗುರುಹಿರಿಯರಿಗೆ ಗೌರವ ಕೊಡಬೇಕು. ತಾಯಿಯೇ ಮೊದಲ ಗುರು. ಕೋಟಿ ದೇವರನ್ನು ಪೂಜಿಸಿ ತಾಯಿಯನ್ನು ಕಡೆಗಣಿಸಿದರೆ ಏನು ಪ್ರಯೋಜನವಿಲ್ಲ ಎಂದು ಚಿತ್ರನಟ ದೊಡ್ಡಣ್ಣ ಹೇಳಿದರು.

ರಾಷ್ಟ್ರೀಯ ಶಿಕ್ಷಣ ಸಮಿತಿಯ ಎಚ್.ಎಸ್.ರುದ್ರಪ್ಪ ರಾಷ್ಟ್ರೀಯ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಸಾಂಸ್ಕೃತಿಕ ವೇದಿಕೆ, ಕ್ರೀಡಾ ವೇದಿಕೆ, ಎನ್‌ಎಸ್‌ಎಸ್ ಸೇವಾ ಘಟಕಗಳನ್ನು ಶನಿವಾರ ಉದ್ಘಾಟಿಸಿ ಮಾತನಾಡಿದ ಅವರು, ತಾಯಿಯ ನಂತರದ ಸ್ಥಾನ ತಂದೆಯದ್ದು. ಒಂದಕ್ಷರ ಕಲಿಸಿದವನೂ ಗುರುವೇ. ಆತ ಜ್ಞಾನದಾತ ಎಂದು ತಿಳಿಸಿದರು.
ಕನ್ನಡ ಭಾಷೆಗೆ ಆದ್ಯತೆ ಕೊಡಬೇಕು. ಜಗತ್ತಿನ ಮೂರು ಪ್ರಮುಖ ಭಾಷೆಗಳಲ್ಲಿ ಕನ್ನಡವೂ ಒಂದು. ಕನ್ನಡ ಭಾಷೆಗೆ ವಿಶಿಷ್ಟವಾದ ಲಕ್ಷಣಗಳಿವೆ. ಮಾತನಾಡುವ ಎಲ್ಲ ಪದಗಳನ್ನೂ ಅದೇ ರೀತಿ ಬರೆಯಬಹುದು. ಬರೆದ ರೂಪದಲ್ಲೇ ಮಾತನಾಡಬಹುದು. ಲಿಪಿಗಳ ರಾಣಿ ಕನ್ನಡ. ಕನ್ನಡಕ್ಕಾಗಿ ದುಡಿದವರನ್ನು ಸ್ಮರಿಸಿಕೊಳ್ಳಿ. ಹಳ್ಳಿಗರು ಕನ್ನಡವನ್ನು ಉಳಿಸಿದ್ದಾರೆ ಎಂದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ, ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಹಾಗೂ ನಿವೃತ್ತ ಅಧ್ಯಾಪಕರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಪ್ರಾಚಾರ್ಯ ಎಸ್.ಚನ್ನಪ್ಪ, ಅಧ್ಯಕ್ಷತೆ ವಹಿಸಿದ್ದರು. ಎನ್‌ಇಎಸ್ ಕಾರ್ಯದರ್ಶಿ ಎಸ್.ಎನ್.ನಾಗರಾಜ್, ಹೈಕೋರ್ಟ್ ನ್ಯಾಯಾಧೀಶೆ ಸುಮಾ ಸಂದೀಪ್, ಪ್ರಮುಖರಾದ ಡಾ.ಸಂತೋಷ್, ಪಿ.ಶರತ್, ಉಷಾದೇವಿ, ಎಸ್.ರವಿ, ಚೈತ್ರಾ ಮುಂತಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net