ಶಿವಮೊಗ್ಗ ಐಎಂಎಯಿಂದ ಕನ್ನಡ ರಾಜ್ಯೋತ್ಸವ

ima
ಶಿವಮೊಗ್ಗ ಐಎಂಎ ವತಿಯಿಂದ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವವನ್ನು ಡಾ.ಧನಂಜಯ ಸರ್ಜಿ ಉದ್ಘಾಟಿಸಿದರು. ಡಾ.ಶ್ರೀಧರ್, ಡಾ.ಜಿ.ಎಸ್.ನಟೇಶ್, ಡಾ.ವಿನಯಾ ಶ್ರೀನಿವಾಸ್ ಮುಂತಾದವರಿದ್ದರು.
Published on

ಶಿವಮೊಗ್ಗ : ಭಾರತೀಯ ವೈದ್ಯಕೀಯ ಸಂಘ ಶಿವಮೊಗ್ಗ ಶಾಖೆ ವತಿಯಿಂದ ನಗರದ ಐಎಂಎ ಸಭಾಂಗಣದಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು. ಇದೇ ಸಂದರ್ಭದಲ್ಲಿ ಐಎಂಎ ಶಾಖೆಯ ಅಮೃತ ಮಹೋತ್ಸವದ ಲಾಂಛನ ಬಿಡುಗಡೆಗೊಳಿಸಲಾಯಿತು.

ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ ರಾಜ್ಯೋತ್ಸವ ಉದ್ಘಾಟಿಸಿ ಮಾತನಾಡಿದರು. ಉಪನ್ಯಾಸಕ ಡಾ.ಜಿ.ಎಸ್.ನಟೇಶ್ ಡಿವಿಜಿಯವರ ಮಂಕುತಿಮ್ಮನ ಕಗ್ಗ ಕುರಿತು ಉಪನ್ಯಾಸ ನೀಡಿದರು. ಐಎಂಎ ಶಿವಮೊಗ್ಗ ಶಾಖೆ ಅಧ್ಯಕ್ಷ ಡಾ.ಶ್ರೀಧರ್, ಖಂಜಾಂಚಿ ಡಾ.ರಾಜಾರಾಮ್, ಪ್ರಮುಖರಾದ ಡಾ. ಆರ್.ಬಿ.ಪುರುಷೋತ್ತಮ, ಡಾ.ಚಿಕ್ಕಸ್ವಾಮಿ, ಡಾ.ವಿನಯಾ ಶ್ರೀನಿವಾಸ್, ಡಾ.ವೆಂಕಟೇಶ್ ಮುಂತಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net