ಹಿಂದಿಯಲ್ಲಿ ಸಂವಹನ ನಡೆಸಿ ಎಂಬ ಅಮಿತ್ ಷಾ ಹೇಳಿಕೆಗೆ ಕನ್ನಡಿಗರು ಹೇಳಿದ್ದೇನು?

Amit Shah
Published on

ಬೆಂಗಳೂರು: ಭಾರತದ ವಿವಿಧ ರಾಜ್ಯಗಳ ಜನರು ಇಂಗ್ಲಿಷ್ ಬದಲು ಹಿಂದಿಯಲ್ಲಿ ಸಂವಹನ ನಡೆಸಬೇಕು ಎಂಬ ಕೇಂದ್ರ ಗೃಹ ಸಚಿವ ಅಮಿತ್ ಷಾ ಹೇಳಿಕೆಗೆ ಕೂ ಮೈಕ್ರೋ ಬ್ಲಾಗಿಂಗ್‌ನಲ್ಲಿ ಕನ್ನಡಿಗರಿಂದ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗಿದೆ.

#ಸ್ಥಳೀಯಭಾಷೆಗೆಆದ್ಯತೆಕೊಡಿ ಎಂಬ ಹ್ಯಾಷ್‌ಟ್ಯಾಗ್‌ನಡಿ ಹಲವರು ಕನ್ನಡ ಪರವಾದಂತಹ ಕೂಗಳನ್ನು ಮಾಡಿದ್ದಾರೆ. ಅಲ್ಲದೆ, ಕನ್ನಡದ ಅಗತ್ಯ ಮತ್ತು ಸಂವಹನಕ್ಕೆ ಇಂಗ್ಲಿಷ್‌ನ ಅಗತ್ಯ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

#ಸ್ಥಳೀಯಭಾಷೆಗೆಆದ್ಯತೆಕೊಡಿ ಪರಕೀಯ ಭಾಷೆಗಳಿಗಲ್ಲ! ದೇಶೀಯ ಭಾಷೆಗಳನ್ನು ಬೆಂಬಲಿಸೋಣ, ಪರಕೀಯ ಭಾಷೆಗಳಿಗೆ ದೇಶೀಯ ಭಾಷೆಗಳು ಪರ್ಯಾಯವಾಗಿ ನಿಲ್ಲಲಿ, ನಮ್ಮ ನಮ್ಮ ರಾಜ್ಯಗಳಲ್ಲಿ ನಮ್ಮ ಭಾಷೆಗೇ ಮೊದಲ ಆದ್ಯತೆ ಎಂಬುದು ನೆನಪಿರಲಿ ಎಂದು ಪ್ರೀತಮ್ ಎಂಬುವರು ಕೂ ಮಾಡಿದ್ದಾರೆ.

Koo App
#ಸ್ಥಳೀಯಭಾಷೆಗೆಆದ್ಯತೆಕೊಡಿ ಪರಕೀಯ ಭಾಷೆಗಳಿಗಲ್ಲ! ದೇಶೀಯ ಭಾಷೆಗಳನ್ನು ಬೆಂಬಲಿಸೋಣ ಪರಕೀಯ ಭಾಷೆಗಳಿಗೆ ದೇಶೀಯ ಭಾಷೆಗಳು ಪರ್ಯಾಯವಾಗಿ ನಿಲ್ಲಲಿ, ನಮ್ಮ ನಮ್ಮ ರಾಜ್ಯಗಳಲ್ಲಿ ನಮ್ಮ ಭಾಷೆಗೇ ಮೊದಲ ಆದ್ಯತೆ ಎಂಬುದು ನೆನಪಿರಲಿ.-Preetam (@Preetu129)8 Apr 2022

ಸನ್ಮಾನ್ಯ ಕೇಂದ್ರದ ಗೃಹಮಂತ್ರಿಗಳಾದ ಅಮಿತ್ ಷಾ ಅವರ ಹಿಂದಿ ಪ್ರೇಮ ಅವರ ಮಾತುಗಳಲ್ಲಿ ಎದ್ದು ಕಾಣುತ್ತಿದೆ. ತಮಿಳುನಾಡಿಗೆ ಹೋಗಿ ಒಮ್ಮೆಯಾದರೂ ಹಿಂದಿಯ ಒಂದು ಅಕ್ಷರ ಮಾತನಾಡಿಸಲಿ. ಆಗ ಒಪ್ಪೋಣ. ಆದರೆ ಅದು ಅಸಾಧ್ಯದ ಮಾತು. ಇಂಗ್ಲಿಷ್ ಬದಲು ಹಿಂದಿಯನ್ನೇ ಬಳಸಿ ಎಂಬುದು ಈಗ ಧೋರಣೆಯಂತೆ ಮಾರ್ಪಟ್ಟಿದೆ ಎಂದು ಶ್ರೀರಂಗ ಕೂ ಮಾಡಿದ್ದಾರೆ.

Koo App
ಸನ್ಮಾನ್ಯ ಕೇಂದ್ರದ ಗೃಹಮಂತ್ರಿಗಳಾದ ಅಮಿತ್ ಶಾ ಅವರ ಹಿಂದಿ ಪ್ರೇಮ ಅವರ ಮಾತುಗಳಲ್ಲಿ ಎದ್ದು ಕಾಣುತ್ತಿದೆ. ತಮಿಳು ನಾಡಿಗೆ ಹೋಗಿ ಒಮ್ಮೆಯಾದರೂ ಹಿಂದಿಯ ಒಂದು ಅಕ್ಷರ ಮಾತನಾಡಿಸಲಿ. ಆಗ ಒಪ್ಪೋಣ. ಆದರೆ ಅದು ಅಸಾಧ್ಯದ ಮಾತು. ಇಂಗ್ಲಿಷ್ ಬದಲು ಹಿಂದಿಯನ್ನೇ ಬಳಸಿ ಎಂಬುದು ಈಗ ಧೋರಣೆಯಂತೆ ಮಾರ್ಪಟ್ಟಿದೆ. #ಸ್ಥಳೀಯಭಾಷೆಗೆಆದ್ಯತೆಕೊಡಿ-ಶ್ರೀರಂಗ (@sri.ranga)8 Apr 2022

ಅಮಿತ್ ಷಾ ಅವರ ಇಂಗ್ಲಿಷ್ ಬದಲು ಹಿಂದಿ ಬಳಸಿ ಹೇಳಿಕೆ ಈಗ ಚರ್ಚೆಗೆ ಗ್ರಾಸವಾಗಿದೆ. ವಿರೋಧ ಪಕ್ಷ ಹಾಗೂ ಇತರ ಪಕ್ಷಗಳ ಮುಖಂಡರು ಕನ್ನಡಕ್ಕೆ ಮಾಡುತ್ತಿರುವ ಅವಮಾನ, ಹಿಂದಿ ಹೇರಿಕೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಸ್ಥಳೀಯ ಭಾಷೆಯಲ್ಲಿ ಮಾತನಾಡಲು ಅವಕಾಶ ನೀಡಲು ಆಗ್ರಹಿಸುತ್ತಿದ್ದಾರೆ. ರಾಜಕೀಯ ಪಕ್ಷಗಳಿಗೆ ಈಗ ಉಕ್ಕಿ ಬರುವ ಕನ್ನಡ ಪ್ರೇಮ ಯಾವಾಗಲೂ ಇದ್ದರೆ ಒಳ್ಳೆಯದಲ್ಲವೇ? ಎಂದು ಶ್ರೀಕರ ಅಭಿಪ್ರಾಯಪಟ್ಟಿದ್ದಾರೆ.

Koo App
ಅಮಿತ್ ಶಾ ಅವರ ಇಂಗ್ಲಿಷ್ ಬದಲು ಹಿಂದಿ ಬಳಸಿ ಹೇಳಿಕೆ ಈಗ ಚರ್ಚೆಗೆ ಗ್ರಾಸವಾಗಿದೆ. ವಿರೋಧ ಪಕ್ಷ ಹಾಗೂ ಇತರೆ ಪಕ್ಷಗಳ ಮುಖಂಡರು ಕನ್ನಡಕ್ಕೆ ಮಾಡುತ್ತಿರುವ ಅವಮಾನ, ಹಿಂದಿ ಹೇರಿಕೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಸ್ಥಳೀಯ ಭಾಷೆಯಲ್ಲಿ ಮಾತನಾಡಲು ಅವಕಾಶ ನೀಡಲು ಆಗ್ರಹಿಸುತ್ತಿದ್ದಾರೆ. ರಾಜಕೀಯ ಪಕ್ಷಗಳಿಗೆ ಈಗ ಉಕ್ಕಿ ಬರುವ ಕನ್ನಡ ಪ್ರೇಮ ಯಾವಾಗಲೂ ಇದ್ದರೆ ಒಳ್ಳೆಯದಲ್ಲವೇ? #ಸ್ಥಳೀಯಭಾಷೆಗೆಆದ್ಯತೆಕೊಡಿ-ಶ್ರೀಕರ (@ಶ್ರೀಕರ)8 Apr 2022

ಕನ್ನಡ, ತಮಿಳು, ಸಂಸ್ಕೃತ ಭಾಷೆಗಳು ಸಾವಿರಾರು ವರ್ಷಗಳ ಇತಿಹಾಸ ಹೊಂದಿದ್ದು ಜನರ ಜೀವನದ ಅವಿಭಾಜ್ಯ ಅಂಗವಾಗಿದೆ ಹೀಗಿರುವಾಗ ದೇಶದಲ್ಲಿ ಹಿಂದಿ ಭಾಷೆಯನ್ನು ರಾಷ್ಟ್ರ ಭಾಷೆಯಂತೆ ಪರಿಗಣಿಸಿದರೆ, ಜನರು ಖಂಡಿತ ಒಪ್ಪುವುದಿಲ್ಲ ಎಂದು ಚಂದನಾ ಗೌಡ ಎಂಬುವರು ಕೂ ಮಾಡಿದ್ದಾರೆ.

Koo App
#ಸ್ಥಳೀಯಭಾಷೆಗೆಆದ್ಯತೆಕೊಡಿ #ಹಿಂದಿಹೇರಿಕೆನಿಲ್ಲಿಸಿ #ಭಾರತಹಿಂದಿದೇಶವಲ್ಲ ಕನ್ನಡ, ತಮಿಳು, ಸಂಸ್ಕೃತ ಭಾಷೆಗಳು ಸಾವಿರಾರು ವರ್ಷಗಳ ಇತಿಹಾಸಹೊಂದಿದು ಜನರ ಜೀವನದ ಅವಿಭಾಜ್ಯ ಅಂಗವಾಗಿದೆ ಹೀಗಿರುವಾಗ ದೇಶದಲ್ಲಿ ಹಿಂದಿ ಭಾಷೆಯನ್ನು ರಾಷ್ಟ್ರ ಭಾಷೆಯಂತೆ ಪರಿಗಣಿಸಿದರೆ, ಜನರು ಖಂಡಿತ ಒಪ್ಪುವುದಿಲ್ಲ.-Chandana Gowda (@chandana_somashekar)8 Apr 2022

ಅಮಿತ್ ಷಾ ಇಂಗ್ಲಿಷ್ ಭಾಷೆಗೆ ಪರ್ಯಾಯವಾಗಿ ಹಿಂದಿ ಬಳಸಿ ಎಂದಿದ್ದೇ ತಡ, ರಾಜಕೀಯ ವ್ಯಕ್ತಿಗಳು ಕನ್ನಡಕ್ಕೆ ಆಗುತ್ತಿರುವ ದ್ರೋಹ ಅಂತ ಶುರು ಮಾಡಿವೆ. ಎಲ್ಲಾ ರಾಜಕೀಯ ಪಕ್ಷಗಳಿಗೂ ಒಂದು ಪ್ರಶ್ನೆ, ನೀವು ಕನ್ನಡಕ್ಕಾಗಿ ಏನ್ ಮಾಡಿದ್ದೀರಿ ಹೇಳಿ, ತಪ್ ತಪ್ಪು ಭಾಷಣ ಮಾಡಿ ಹದಗೆಡಿಸಿದ್ದೀರಿ ಎಂದು ಎನ್‌ಜಿ ಸುನೀಲ್ ಕೂ ಮಾಡಿದ್ದಾರೆ.

Koo App
ಅಮಿತ್ ಷಾ ಇಂಗ್ಲಿಷ್ ಭಾಷೆಗೆ ಪರ್ಯಾಯವಾಗಿ ಹಿಂದಿ ಬಳಸಿ ಎಂದಿದ್ದೆ ತಡ, ರಾಜಕೀಯ ವ್ಯಕ್ತಿಗಳು ಕನ್ನಡಕ್ಕೆ ಆಗುತ್ತಿರುವ ದ್ರೋಹ ಅಂತ ಶುರು ಮಾಡಿವೆ. ಎಲ್ಲಾ ರಾಜಕೀಯ ಪಕ್ಷಗಳಿಗೂ ಒಂದು ಪ್ರಶ್ನೆ, ನೀವು ಕನ್ನಡಕ್ಕಾಗಿ ಎನ್ ಮಾಡಿದ್ದೀರಿ ಹೇಳಿ, ತಪ್ ತಪ್ಪು ಭಾಷಣ ಮಾಡಿ ಹದಗೆಡಿಸಿದ್ದೀರಿ. #ಸ್ಥಳೀಯಭಾಷೆಗೆಆದ್ಯತೆಕೊಡಿ-Sunil NG (@Sunil_NG)8 Apr 2022
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net