VIDEO| ಗಮನ ಸೆಳೆಯುತ್ತಿದೆ ಗಾಯಕ ವಿಜಯಪ್ರಕಾಶ್​ ಧ್ವನಿಯಲ್ಲಿ ಕಾಣದಂತೆ ಮಾಯವಾದನು ಚಿತ್ರದ ಹಾಡು...

SINDHU
Published on

ಬೆಂಗಳೂರು: ವಿಕಾಸ್ ಮತ್ತು ಸಿಂಧು ಲೋಕನಾಥ್ ಜತೆಯಾಗಿ ನಟಿಸಿರುವ ‘ಕಾಣದಂತೆ ಮಾಯವಾದನು’ ಚಿತ್ರದ ಗೀತೆಯೊಂದು ಯೂಟ್ಯೂಬ್​ನಲ್ಲಿ ಸದ್ದು ಮಾಡುತ್ತಿದೆ.

ಕೊನೆ ಇರದಂಥ ಪ್ರೀತಿಗೆ... ಕೊನೆಯನು ಕಾಣೊ ಕಣ್ಣಿಗೆ... ಕಣ್ಣ ಹನಿಯೇ ಕೊಡುಗೆ.. ಎಂಬ ಸಾಲುಗಳ ಗೀತೆ ವಿಜಯಪ್ರಕಾಶ್​ ಅವರ ಧ್ವನಿಯಲ್ಲಿ ಮೂಡಿಬಂದಿದೆ.

ರಾಜ್ ಪತ್ತಿಪಾಟಿ ಅವರ ನಿರ್ದೇಶನದಲ್ಲಿ ಈ ಚಿತ್ರ ಮೂಡಿಬಂದಿದೆ. ಸಿನಿಮಾದ ಶೀರ್ಷಿಕೆಯೇ ಆಕರ್ಷಕವಾಗಿದ್ದು. ಇದಕ್ಕೊಂದು ಟ್ಯಾಗ್​ಲೈನ್ ಇದ್ದರೆ ಸೂಕ್ತ ಎಂದುಕೊಂಡ ನಿರ್ದೇಶಕರು, ಸಿನಿಮಾಸಕ್ತರಿಗೆ ಟ್ಯಾಗ್​ಲೈನ್ ರಚಿಸುವ ಅವಕಾಶ ನೀಡಿದ್ದರು. ಕುಂದಾಪುರ ಮೂಲದ ನರೇಂದ್ರ ಎಸ್. ಗಂಗೊಳ್ಳಿ ಬರೆದ ‘ಗೋರಿ ಆದ್ಮೇಲ್ ಹುಟ್ಟಿದ್ ಸ್ಟೋರಿ’ ಎಂಬುದನ್ನು ಅತ್ಯುತ್ತಮ ಟ್ಯಾಗ್​ಲೈನ್ ಎಂದು ಆಯ್ಕೆ ಮಾಡಲಾಗಿತ್ತು.

ನಾಲ್ಕು ವರ್ಷಗಳ ಹಿಂದೆಯೇ ಸೆಟ್ಟೇರಿದ್ದ ಈ ಚಿತ್ರದ ಬಿಡುಗಡೆ ತಡವಾಗುತ್ತಲೇ ಬಂದಿತ್ತು. ಆದರೆ ಈಗ ಆದಷ್ಟು ಬೇಗ ರಿಲೀಸ್ ಮಾಡಬೇಕು ಎಂದು ಚಿತ್ರತಂಡ ನಿರ್ಧರಿಸಿದೆ.

ಕಾಣದಂತೆ ಮಾಯವಾದನು ಕಥಾಹಂದರ ಏನು? ಎಂಬ ಪ್ರಶ್ನೆಗೆ ‘ಇದು ದೆವ್ವದ ದ್ವೇಷವೂ ಹೌದು, ಅದೇ ದೆವ್ವದ ಪ್ರೇಮಕತೆಯೂ ಹೌದು’ ಎನ್ನುವ ಮೂಲಕ ಕುತೂಹಲ ಕೆರಳಿಸುತ್ತಾರೆ ನಿರ್ದೇಶಕ ರಾಜ್ ಪತ್ತಿಪಾಟಿ.

ವಿಜಯಪ್ರಕಾಶ್​ ಅವರ ಧ್ವನಿಯಲ್ಲಿ ಮೂಡಿ ಬಂದಿರುವ ಗೀತೆಯನ್ನು ಬಿಡುಗಡೆ ಮಾಡಿದೆ ಚಿತ್ರ ತಂಡ. ಈ ಗೀತೆಯ ಸಾಲುಗಳು ಕೇಳುಗರನ್ನು ಸೆಳೆಯುತ್ತಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net