Lekha Chandra - ಲೇಖಾ ಚಂದ್ರ "ಲೈಫ್​ ಟುಡೇ'

ಲೈಫ್​ ಟುಡೇ
ಲೈಫ್​ ಟುಡೇ
Published on
Lekha Chandra -
"ಅಬ್ಬರ', "ಫೈಟರ್​', "ನಮೋ ಭೂತಾತ್ಮ 2' ಸೇರಿ ಹಲವು ಚಿತ್ರಗಳಲ್ಲಿ ನಟಿಸಿರುವ ಲೇಖಾ ಚಂದ್ರ, ಸದ್ಯ "ಲೈಫ್ ಟುಡೇ' ಮತ್ತು "ಕಿಲ್​' ಸಿನಿಮಾಗಳ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ಕಳೆದ ಅಕ್ಟೋಬರ್​ನಲ್ಲಿ ನಿರ್ಮಾಪಕ ಶ್ರೇಯಸ್​ ಜತೆ ಸಪ್ತಪದಿ ತುಳಿದ ಲೇಖಾ, ಸದ್ಯ ನಟನೆಯ ಜತೆಜತೆಗೆ ಪತಿಯ ಜತೆ ಸಿನಿಮಾ ನಿರ್ಮಾಣದಲ್ಲೂ ಗಮನ ಹರಿಸುತ್ತಿದ್ದು, ನಿರ್ದೇಶನಕ್ಕೂ ಪ್ಲಾನ್​ ಮಾಡುತ್ತಿದ್ದಾರೆ. ಇತ್ತಿಚೆಗಷ್ಟೆ ವಿಜಯವಾಣಿ ಜತೆ ಮಾತಿಗೆ ಸಿಕ್ಕಿದ್ದ ಅವರು, ""ಲೈಫ್ ಟುಡೇ' ಜುಲೈನಲ್ಲಿ ಬಿಡುಗಡೆಯಾಗಲಿದೆ. ಆದಿತ್ಯ ಸಿಂಗ್​ ಅವರ ಜತೆ ನಟಿಸಿರುವ "ಕಿಲ್​' ಚಿತ್ರದ ಶೂಟಿಂಗ್​ ಪೂರ್ಣಗೊಂಡಿದ್ದು, ಇನ್ನು ಒಂದು ಹಾಡಷ್ಟೇ ಬಾಕಿಯಿದೆ. ಮದುವೆಗೂ ಮುನ್ನ ಈ ಎರಡು ಚಿತ್ರಗಳನ್ನು ಒಪ್ಪಿದ್ದು. ಮದುವೆಯ ಬಳಿಕ ನನಗೆ ಬೇರೆ ರೀತಿಯ ಕಥೆಗಳು ಬರುತ್ತಿವೆ. ಇಷ್ಟವಾಗದ ಕಾರಣ ನಾನು ಒಪ್ಪಿಕೊಂಡಿಲ್ಲ. ಇನ್ನಾದರೂ ಕಮರ್ಷಿಯಲ್​ ಸಿನಿಮಾಗಳಿಂದ ಹೊರಬಂದು ಗಟ್ಟಿ ಕಥೆ, ಪವರ್​ುಲ್​ ಪಾತ್ರ ಮಾಡಬೇಕು ಅಂತ ಅಂದುಕೊಂಡಿದ್ದೇನೆ. ಹಾಗಂತ ಕಮರ್ಷಿಯಲ್​ ಸಿನಿಮಾ ಮಾಡೋದೇ ಇಲ್ಲ ಅಂತಲ್ಲ. ಈಗ "ಪೆದ್ದಿ' ಚಿತ್ರದ ಜಾಹ್ನವಿ ಪಾತ್ರವನ್ನೇ ನೋಡಿ. ದೊಡ್ಡ ಸಿನಿಮಾಗಳಲ್ಲಿ ದೊಡ್ಡ ಮಿಸ್ಟೇಕ್​ಗಳಾಗುತ್ತಿವೆ. ನಾಯಕರನ್ನು ಹೈಲೈಟ್​ ಮಾಡುವ ಭರದಲ್ಲಿ ನಾಯಕಿಯರನ್ನು ಕಡೆಗಣಿಸಲಾಗುತ್ತಿದೆ. ಡಿ&ಗ್ಲಾಮರ್​ ಪಾತ್ರಕ್ಕೆ ಅಷ್ಟೊಂದು ಗ್ಲಾಮರ್​ ಬೇಕಾ? ಎಂಬ ಪ್ರಶ್ನೆ ಮೂಡುತ್ತದೆ. ಅವಶ್ಯಕತೆ ಇದ್ದರೆ ಮಾಡಬಹುದು. ಅವಶ್ಯಕತೆ ಇಲ್ಲದೇ, ಅಂತಹ ಸನ್ನಿವೇಶಗಳನ್ನು ತುರುಕುವುದು ಬೇಕಿಲ್ಲ ಅಂತನ್ನಿಸುತ್ತದೆ. ಇನ್ನು ಕೆಲ ತಿಂಗಳ ಹಿಂದೆ ತಮಿಳು ವೆಬ್​ಸರಣಿಯಲ್ಲೂ ಅವಕಾಶ ಬಂದಿತ್ತು. ಹೆಸರಾಂತ ನಿರ್ಮಾಣ ಸಂಸ್ಥೆ ಲೈಕಾ ಪ್ರೊಡಕ್ಷನ್ಸ್​ ಆರ್​ ಮಾಡಿದ್ದರು. ಆದರೆ, ನನಗೆ ಬೇರೆ ಭಾಷೆಗೆ, ರಾಜ್ಯಕ್ಕೆ ಹೋಗುವ ಧೈರ್ಯ ಇರಲಿಲ್ಲ. ಈಗ ಪತಿಯೇ ಧೈರ್ಯ ಹೇಳುತ್ತಿರುತ್ತಾರೆ. ಮುಂದೆ ಹಾಗೆ ಅವಕಾಶ ಬಂದರೆ, ಖಂಡಿತ ಮಾಡುತ್ತೇನೆ' ಎಂದು ಮಾಹಿತಿ ನೀಡುತ್ತಾರೆ ಲೇಖಾಚಂದ್ರ.

ಆ್ಯಕ್ಷನ್​-ಕಟ್​ ಆಸಕ್ತಿ:

ನಟನೆಯ ಜತೆಗೆ ನಿರ್ದೇಶನದ ಆಸಕ್ತಿಯಿದೆ ಎನ್ನುವ ಲೇಖಾ, "ಸ್ವಲ್ಪ ದಿನ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿ, ಕಲಿತು, ಅನುಭವ ಪಡೆದು ಆ ಬಳಿಕ ನಿರ್ದೇಶಿಸಲಿದ್ದೇನೆ. ಈಗ ಪತಿ ಸಿನಿಮಾ ನಿರ್ಮಿಸುತ್ತಿರುವ ಕಾರಣ, ನಿರ್ಮಾಪಕರ ಕಷ್ಟ ಅರ್ಥವಾಗುತ್ತಿದೆ. ಹಾಗೇ ನಿರ್ದೇಶನದಲ್ಲೂ ಕೆಲಸ ಮಾಡಿ ಅನುಭವ ಪಡೆದು, ಹೌದು ನಾನು ಮಾಡಬಲ್ಲೆ ಅಂತ ಅನ್ನಿಸಿದ ತಕ್ಷಣ ನಿರ್ದೇಶನಕ್ಕೆ ಇಳಿಯುತ್ತೇನೆ' ಎನ್ನುತ್ತಾರೆ.

ಫೇಮ್​ಗಿಂತ ಫ್ಯಾಮಿಲಿ ಮುಖ್ಯ

"ಇವತ್ತಿನ ಹೆಣ್ಣುಮಕ್ಕಳಿಗೆ ಆರ್ಥಿಕ ಸ್ವಾತಂತ್ರ್ಯ, ವೃತ್ತಿ ಜೀವನ ಇರಬೇಕು. ಆದರೆ, ನಾನು ಆ ವಿಷಯದಲ್ಲಿ ಸ್ವಲ್ಪ ಭಿನ್ನ' ಎನ್ನುವ ಲೇಖಾ, "ನಾನು ವೈಯಕ್ತಿಕವಾಗಿ ಕುಟುಂಬದ ಬಗ್ಗೆ ಹೆಚ್ಚು ಗಮನ ಹರಿಸಲು ಇಷ್ಟಪಡುತ್ತೇನೆ. ಏಕೆಂದರೆ, ನನಗೆ ಎಲ್ಲಕ್ಕಿಂತ ವೈಯಕ್ತಿಕ ಜೀವನ ಮುಖ್ಯ. ಕುಟುಂಬ ಅಂತ ಬಂದಾಗ ಹಣ, ಹೆಸರು ಎಲ್ಲವೂ ಚಿಕ್ಕದು ಅಂತನ್ನಿಸುತ್ತದೆ. ಹೀಗಾಗಿ ನನ್ನ ಮೊದಲ ಪ್ರಾಮುಖ್ಯ ಮೊದಲಿನಿಂದಲೂ ಕುಟುಂಬವೇ ಆಗಿದೆ' ಎಂದು ಹೇಳಿಕೊಳ್ಳುತ್ತಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net