"ಎಡಗೈಯೇ ಅಪಘಾತಕ್ಕೆ ಕಾರಣ' ಮತ್ತು "ರೂಥ್ಲೆಸ್' ಚಿತ್ರಗಳ ಖ್ಯಾತಿಯ ನಟಿ ಧನು ಹರ್ಷ ಇದೀಗ ತಮಿಳಿಗೆ ಹಾರಿದ್ದಾರೆ. ಅವರ ಚೊಚ್ಚಲ ಕಾಲಿವುಡ್ ಸಿನಿಮಾ ಮುಹೂರ್ತ ಗುರುವಾರ ನೆರವೇರಿದ್ದು, ತಮಿಳು ನಟ ಸೂರ್ಯ ಮತ್ತು ನಟಿ ಮೀನಾ "ರಿ-ಮ್ಯಾಚ್' ಟೈಟಲ್ ಅನಾವರಣ ಮಾಡಿದ್ದಾರೆ. ತಮಿಳಿನ ಮೊದಲ ಬ್ಯಾಡ್ಮಿಂಟನ್ ಆಧಾರಿತ ಸಿನಿಮಾ ಎಂಬ ಖ್ಯಾತಿಯ ಈ ಚಿತ್ರಕ್ಕೆ ಯುವನಿರ್ದೇಶಕ ವಿಮಲ್ ಆ್ಯಕ್ಷನ್&ಕಟ್ ಹೇಳುತ್ತಿದ್ದು, ಬಾಲಾ ನಾಯಕನಾಗಿದ್ದಾರೆ. ಅವರಿಗೆ ನಾಯಕಿಯಾಗಿ ಧನು ಹರ್ಷ ಆಯ್ಕೆಯಾಗಿದ್ದು, "ನಾನು ಸಿನಿಮಾದಲ್ಲಿ ಮುಂದುವರಿಯಬೇಕು ಅಂತ ಅಂದುಕೊಳ್ಳುವ ಮೊದಲು ಬ್ಯಾಡ್ಮಿಂಟನ್ ಬಗ್ಗೆ ಸೀರಿಯಸ್ ಆಗಿದ್ದೆ. ಬಾಲ್ಯದಿಂದಲೂ ವೃತ್ತಿಪರ ತರಬೇತಿ ಪಡೆಯುತ್ತಿದ್ದೆ. ಶಾಲಾ ದಿನಗಳಲ್ಲಿ ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ, ಕಾಲೇಜು ಸಮಯದಲ್ಲಿ ಹಾಗೂ ಈಗಲೂ ಸಹ ಆಗಾಗ ಬ್ಯಾಡ್ಮಿಂಟನ್ ಟೂರ್ನಮೆಂಟ್ಗಳಲ್ಲಿ ಆಡುತ್ತಿರುತ್ತೇನೆ. ಕೆಲ ತಿಂಗಳ ಹಿಂದೆ ಸೆಲೆಬ್ರಿಟಿ ಸ್ಪೋರ್ಟ್ಸ್ ಲೀಗ್ನ ಸಿಂಗಲ್ಸ್ ಆಟದಲ್ಲಿ ಗೆದ್ದಿದ್ದೆ. ಅದರ ೋಟೋಗಳನ್ನು ಜಾಲತಾಣದಲ್ಲಿ ಹಂಚಿಕೊಂಡಿದ್ದೆ. ಅದನ್ನು ನೋಡಿ "ರಿ&ಮ್ಯಾಚ್' ತಂಡ ಸಂಪರ್ಕಿಸಿತು. ಅವರು ಪಾತ್ರ ನೈಜವಾಗಿರಬೇಕು ಅಂತ ನಟನೆ ಮತ್ತು ಬ್ಯಾಡ್ಮಿಂಟನ್ ಎರಡೂ ಗೊತ್ತಿರುವ ನಟಿಯ ಹುಡುಕಾಟದಲ್ಲಿದ್ದರು. ನನಗೂ ಕಥೆ, ಪಾತ್ರ ಇಷ್ಟವಾಯಿತು. ಒಪ್ಪಿ ಆಡಿಷನ್ ಕೊಟ್ಟೆ, ಆಯ್ಕೆಯಾದೆ. ಬ್ಯಾಡ್ಮಿಂಟನ್ ಕುರಿತ ಸ್ಪೋರ್ಟ್ಸ್ ಡ್ರಾಮಾ ಆದರೂ ರೊಮ್ಯಾಂಟಿಕ್ ಕಾಮಿಡಿ ಸೇರಿ ಸಿನಿಮಾಗೆ ಬೇಕಾದ ಎಲ್ಲ ಅಂಶಗಳಿರುವ ಥಿಯೇಟ್ರಿಕಲ್ ್ಯಾಮಿಲಿ ಎಂಟರ್ಟೇನರ್ ಈ ಸಿನಿಮಾ' ಎಂದು ಮಾಹಿತಿ ನೀಡುತ್ತಾರೆ. ಈಗಾಗಲೇ ಕೆಲ ತಮಿಳು ಕಿರುಚಿತ್ರಗಳಲ್ಲಿ ನಟಿಸಿರುವ ಕಾರಣ, ಧನು ತಮಿಳು ಕಲಿತಿದ್ದು, ಸದ್ಯ ಪಾತ್ರಕ್ಕಾಗಿ ರಿಹರ್ಸಲ್, ಫಿಟ್ನೆಸ್, ಬ್ಯಾಡ್ಮಿಂಟನ್ ಪ್ರ್ಯಾಕ್ಟೀಸ್ ಮಾಡುತ್ತಿದ್ದಾರಂತೆ. ಮುಂದಿನ ಮೂರು ತಿಂಗಳ ಕಾಲ ಚೆನ್ನೆ$ ಸುತ್ತಮುತ್ತ "ರಿ&ಮ್ಯಾಚ್' ಶೂಟಿಂಗ್ ನಡೆಯಲಿದ್ದು, ಇದೇ ವರ್ಷಾಂತ್ಯಕ್ಕೆ ಸಿನಿಮಾ ತೆರೆಗೆ ತರುವ ಪ್ಲಾ$್ಯನ್ ಚಿತ್ರತಂಡದ್ದು.