ಮಹಾನಗರಗಳಿಗೆ ಅನ್ಯಭಾಷಿಗರ ಲಗ್ಗೆ : ಕನ್ನಡ ಭಾಷೆ ಮಾಯವಾಗುತ್ತಿದೆ ಎಂದು ಗ್ರಾಪಂ ಉಪಾಧ್ಯಕ್ಷ ಪುಟ್ಟಸ್ವಾಮಿ ಬೇಸರ

Kailancha-Ph-001-Achaludoddi Kannada Rajyotsava -15-11-2021
Published on

ಕೈಲಾಂಚ : ಇತ್ತೀಚಿನ ದಿನಗಳಲ್ಲಿ ರಾಜ್ಯದ ಮಹಾನಗರಗಳಿಗೆ ಅನ್ಯಭಾಷಿಗರು ಲಗ್ಗೆ ಇಡುತ್ತಿದ್ದು, ಕನ್ನಡ ಭಾಷೆ ಮಾಯವಾಗುತ್ತಿದೆ ಎಂದು ಹುಣಸನಹಳ್ಳಿ ಗ್ರಾಪಂ ಉಪಾಧ್ಯಕ್ಷ ಪುಟ್ಟಸ್ವಾಮಿ ಬೇಸರ ವ್ಯಕ್ತಪಡಿಸಿದರು.

ಹೋಬಳಿಯ ಅಚ್ಚಲುದೊಡ್ಡಿ ಗ್ರಾಮದಲ್ಲಿ ಯುವಕರ ಬಳಗ ಭಾನುವಾರ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಸವಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ಅನ್ಯರಾಜ್ಯದ ಜನರು ನಮ್ಮ ರಾಜ್ಯದ ಮಹಾನಗರಗಳಿಗೆ ವ್ಯಾಪಾರಕ್ಕೆ ಬರುತ್ತಿದ್ದು ಹೆಚ್ಚಿನ ಜನರು ಇಲ್ಲಿಯೇ ತಳವೂರುತ್ತಿದ್ದಾರೆ. ಅಲ್ಲದೆ, ಸ್ಥಳೀಯ ಭಾಷೆ ಬಳಸದೆ ತಮ್ಮ ಭಾಷೆಗಯನ್ನೇ ಬಳಸುತ್ತಿದ್ದಾರೆ. ಇದರಿಂದ ಕನ್ನಡ ಭಾಷೆಗೆ ಕುಂದುಂಟಾಗುತ್ತಿದೆ. ಮಹಾನಗರಗಳ ಜನರು ಹೊರ ರಾಜ್ಯದವರ ಜತೆ ಕನ್ನಡದಲ್ಲಿಯೇ ವ್ಯವಹರಿಸಿ ಕನ್ನಡ ಭಾಷೆಗೆ ಅಗ್ರಸ್ಥಾನ ನೀಡಬೇಕು ಎಂದರು.

ಗ್ರಾಪಂ ಸದಸ್ಯ ಮಲ್ಲೇಶ್ ಮಾತನಾಡಿ, ಗ್ರಾಮೀಣ ಜನರು ಕನ್ನಡ ಭಾಷೆ ಪ್ರೀತಿಸಿ ಬೆಳೆಸುತ್ತಿದ್ದಾರೆ. ಆದರೆ, ಮಹಾನಗರಗಳ ಜನರು ಪರಭಾಷೆ ವ್ಯಾಮೋಹಕ್ಕೆ ಸಿಲುಕಿ ಕನ್ನಡವನ್ನು ನಿರ್ಲಕ್ಷಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.ಕಾರ್ಯಕ್ರಮದ ನಂತರ ನಟ ಪುನೀತ್ ರಾಜ್‌ಕುಮಾರ್ ಹಾಗೂ ಮುಖಂಡ ಮರಿದೇವರು ಅವರು ಪುಣ್ಯಸ್ಮರಣೆ ಮಾಡಿ ಅನ್ನ ಸಂತರ್ಪಣೆ ನಡೆಯಿತು. ಯುವಕರು ರಕ್ತದಾನ ಮಾಡಿದರು. ಶಾಲಾ ಮಕ್ಕಳಿಗೆ ಲೇಖನ ಸಾಮಗ್ರಿ ವಿತರಿಸಲಾಯಿತು.

ಗ್ರಾಪಂ ಸದಸ್ಯರಾದ ಸಾವಿತ್ರಮ್ಮಸೋಮಯ್ಯ, ಯುವ ಬಳಗದ ಕೆ. ರಾಜು, ವಿ. ಮಂಜುನಾಥ, ಟಿ. ವೆಂಕಟೇಶ್, ಸುನಿಲ್, ಉವಾಪತಿ, ಕುವಾರ, ಗಿರಿಪ್ರಸಾದ್‌ನಾಯಕ್, ಸುರೇಶ್, ಆದಿತ್ಯ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net