ಮಮತಾ ಬ್ಯಾನರ್ಜಿ ವಿರುದ್ಧ ಸರಣಿ ಟ್ವೀಟ್​: ಕಂಗನಾ ಖಾತೆಯನ್ನು ಸಸ್ಪೆಂಡ್​ ಮಾಡಿದ ಟ್ವಿಟರ್​!

Kangana Ranaut - Final
Published on

ನವದೆಹಲಿ: ಮಾರ್ಗಸೂಚಿಗಳನ್ನು ಉಲ್ಲಂಘಿಸಲಾಗಿದೆ ಎಂಬ ಕಾರಣ ನೀಡಿ ಬಾಲಿವುಡ್​ ನಟಿ ಕಂಗನಾ ರಣಾವತ್‌ ಅವರ ಖಾತೆಯನ್ನು ಟ್ವಿಟರ್​ ಕೆಲ ಕಾಲ ಅಮಾನತ್ತಿನಲ್ಲಿ ಇಟ್ಟಿದೆ.

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕುರಿತು ಸರಣಿ ಟ್ವೀಟ್​ ಮಾಡಿದ್ದ ಕಂಗನಾ, ಮಮತಾ ಕುರಿತು ಆಕ್ಷೇಪಾರ್ಹ ಕಾಮೆಂಟ್​ ಮಾಡಿದ್ದಾರೆ. ಮೇ 2ರಂದು ಹೊರಬಿದ್ದ ಪಶ್ಚಿಮ ಬಂಗಾಳ ಚುನಾವಣಾ ಫಲಿತಾಂಶ ಬಳಿಕ ಬಂಗಾಳದಲ್ಲಿ ಉಂಟಾಗಿರುವ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಮಮತಾರನ್ನು ಟೀಕಿಸಿ ಕಂಗನಾ ಟ್ವೀಟ್​ ಮಾಡಿದ್ದರು.

ಫಲಿತಾಂಶದಲ್ಲಿ ಮಮತಾ ನೇತೃತ್ವದ ಟಿಎಂಸಿ ಗೆದ್ದ ಬೆನ್ನಲ್ಲೇ ಬಂಗಾಲದಲ್ಲಿ ರಾಷ್ಟ್ರಪತಿ ಆಡಳಿತಕ್ಕೆ ಕಂಗನಾ ಒತ್ತಾಯಿಸಿದ್ದರು. ಅಲ್ಲದೆ, ಮಮತಾರನ್ನು ರಾಕ್ಷಸಿಗೆ ಹೋಲಿಸಿ ಕಂಗನಾ ಟ್ವೀಟ್​ ಮಾಡಿದ್ದರು. ಬಿಜೆಪಿ ಗೆಲುವು ಸಾಧಿಸಿದ ಅಸ್ಸಾಂ ಮತ್ತು ಪುದುಚೇರಿಯಲ್ಲಿ ಯಾವುದೇ ಹಿಂಸಾಚಾರ ನಡೆಯುತ್ತಿಲ್ಲ. ಆದರೆ, ನೂರಾರ ಕೊಲೆಗಳು ಟಿಎಂಸಿ ಗೆದ್ದ ಬಳಿಕ ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿದೆ ಎಂದು ದೂಷಿಸಿ ಬಂಗಾಳ ಸುಡುತ್ತಿದೆ (#Bengalisburning) ಎಂದು ಟ್ವೀಟ್​ ಮಾಡಿದ್ದರು.

ವಿರಾಟ ರೂಪವನ್ನು ಉಪಯೋಗಿಸಿ ಮಮತಾ ಬ್ಯಾನರ್ಜಿ ಅವರನ್ನು ಪಳಗಿಸಿ ಎಂದು ಪ್ರಧಾನಿ ಮೋದಿಯನ್ನು ಕಂಗನಾ ಕೇಳಿಕೊಂಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net