ಮದುವೆ ವಿಚಾರ ಪ್ರಸ್ತಾಪದ ಬೆನ್ನಲ್ಲೇ ಬಾಯ್​ಫ್ರೆಂಡ್ ಜತೆಗೆ ಸಿಕ್ಕಿಬಿದ್ದ ನಟಿ ಕಂಗನಾ? ಇಲ್ಲಿವೆ ಫೋಟೋಸ್​

ವಿಜಯವಾಣಿ - 2024-01-13T141243.422
Published on

ಮುಂಬೈ: ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಾಗಿ ಸಕ್ರಿಯರಾಗಿರುವ ಸ್ಟಾರ್​ ಕಲಾವಿದರ ಪೈಕಿ ಬಾಲಿವುಡ್​ನ ಹಾಟ್​ ನಟಿ ಕಂಗನಾ ರಣಾವತ್ ಕೂಡ ಒಬ್ಬರು. ಸದಾ ಒಂದಲ್ಲ ಒಂದು ವಿಚಾರಗಳಿಂದ ಸಿಕ್ಕಾಪಟ್ಟೆ ಟ್ರೋಲ್​ ಮತ್ತು ವ್ಯಾಪಕ ಟೀಕೆಗಳಿಗೆ ಗುರಿಯಾಗುವ ನಟಿ ಇದೀಗ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೇ ಶೀಘ್ರವೇ ದಾಂಪತ್ಯ ಜೀವನಕ್ಕೆ ಕಾಲಿಡುವ ಎಂದು ಹೇಳಿದ್ದ ಕಂಗನಾ, ತಮ್ಮ ಹೇಳಿಕೆಗೆ ಪುಷ್ಟಿ ನೀಡುವಂತೆ ಅನಾಮಧೇಯ ವ್ಯಕ್ತಿಯ ಕೈಹಿಡಿದು, ಜತೆಗಿರುವ ಫೋಟೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸದ್ಯ ಈ ಫೋಟೋಗಳು ನೆಟ್ಟಿಗರನ್ನು ಭಾರೀ ಅನುಮಾನಕ್ಕೆ ದೂಡಿದೆ.

ನಟಿ ಕಂಗನಾ ತಮ್ಮ ವಿದೇಶಿ ಗೆಳಯನ ಜತೆ ಡೇಟಿಂಗ್ ಮಾಡುತ್ತಿರಬಹುದು ಎಂದು ಅಭಿಮಾನಿಗಳು ತೀವ್ರ ಕುತೂಹಲ ವ್ಯಕ್ತಪಡಿಸಿದ್ದರು. ಈ ಎಲ್ಲಾ ಗೊಂದಲ ಹಾಗೂ ಅನುಮಾನಗಳು ನಿಜ ಎಂಬುದನ್ನು ಇದೀಗ ನಟಿಯ ವೈರಲ್ ಫೋಟೋ ಸಾಬೀತುಪಡಿಸುವಂತಿದೆ. ಇತ್ತೀಚೆಗೆ ನಟಿ ಮುಂಬೈನಲ್ಲಿ ಅಪರಿಚಿತ ವ್ಯಕ್ತಿಯ ಕೈ ಹಿಡಿದುಕೊಂಡು ಹೋಟೆಲ್​ ಬಳಿ ಪಾಪರಾಜಿಗಳ ಕಣ್ಣಿಗೆ ಸಿಕ್ಕಿಬಿದ್ದಿದ್ದಾರೆ.

ಫೋಟೋದಲ್ಲಿ ವಿದೇಶಿ ವ್ಯಕ್ತಿಯ ಜತೆಗಿರುವ ಕಂಗನಾ, ನೀಲಿ ಬಣ್ಣದ ಉಡುಗೆಯ ಧರಿಸಿದ್ದು, ಸ್ಟೈಲಿಶ್​ ಸನ್​ಗ್ಲಾಸ್​ನಲ್ಲಿ ಕಂಗೊಳಿಸಿದ್ದಾರೆ. ನಟಿಯ ಈ ಫೋಟೋವನ್ನು ಕಂಡ ಅಭಿಮಾನಿಗಳು ಹಾಗೂ ನೆಟ್ಟಿಗರು ತೀವ್ರ ಕುತೂಹಲ ವ್ಯಕ್ತಪಡಿಸುತ್ತಿದ್ದು, ಇವರೇ ಕಂಗನಾ ಅವರ ಬಾಯ್​ಫ್ರೆಂಡ್ ಇರಬಹುದು? ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ನಟಿ ಶೀಘ್ರವೇ ಮದುವೆಯಾಗುವುದು ಖಚಿತ ಎಂದು ಅಭಿಪ್ರಾಯಿಸಿದ್ದಾರೆ.

ಸದ್ಯ ನಟಿಯ ಫೋಟೋ ಹಲವೆಡೆ ಸಿಕ್ಕಾಪಟ್ಟೆ ಶೇರ್​ ಆಗುವ ಮೂಲಕ ವ್ಯಾಪಕ ಚರ್ಚೆಗೆ ಕಾರಣವಾಗಿದ್ದು, ಈ ಬಗ್ಗೆ ಖುದ್ದಾಗಿ ಕಂಗನಾ ಸ್ಪಷ್ಟನೆ ಕೊಡಲಿದ್ದಾರಾ ಎಂಬುದನ್ನು ಕಾದು ನೋಡಬೇಕಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net