ಶಾರೂಖ್​ಗಿಂತ ನನ್ನ ಸಿನಿಪಯಣ ಕಷ್ಟಕರವಾಗಿದೆ; ಕಂಗನಾ ರಣಾವತ್​​

Untitled-design-2024-08-18T203808.973
Published on

ಮುಂಬೈ: ಬಾಲಿವುಡ್​ ಕ್ವೀನ್​ ಕಂಗನಾ ರಣಾವತ್​​ ವೃತ್ತಿಜೀವನದಲ್ಲಿ್ 15 ವರ್ಷಗಳನ್ನು ಪೂರ್ಣಗೊಳಿಸಿದ್ದಾರೆ. ಫಿಲ್ಟರ್​ ಇಲ್ಲದೆ ಮಾತನಾಡುವ ಈ ನಟಿ ಇಷ್ಟೆಲ್ಲಾ ಯಶಸ್ಸನ್ನು ಸಾಧಿಸಿದ್ದರೂ ತಮ್ಮ ಉಳಿವಿಗಾಗಿ ಪ್ರತಿದಿನವೂ ಹೋರಾಟ ಮಾಡಬೇಕಿದೆ ಎಂದು ಹೇಳುತ್ತಾರೆ. ಕಂಗನಾ ಬಿಟೌನ್​ನ ಇತರ ನಟಿಯರಂತೆ ಅಲ್ಲ ಎಂದು ಹೇಳಬಹುದು. ಏಕೆಂದರೆ ದೊಡ್ಡಬಜೆಟ್​ ಸಿನಿಮಾಗಳ ಭಾಗವಾಗದೆ, ಐಟಂ ಹಾಡುಗಳಲ್ಲಿ ಕಾಣಿಸಿಕೊಳ್ಳದೆ, ಬಾಲಿವುಡ್​ನ ಖಾನ್​ಗಳೊಂದಿಗೆ ಸ್ಕ್ರೀನ್​ಶೇರ್​ ಮಾಡದೆ ಸ್ಟಾರ್​ ಪಟ್ಟ ಗಿಟ್ಟಿಸಿಕೊಂಡಿರುವುದು ಸುಲಭದ ಮಾತಲ್ಲ.

ನಟಿ ಕಂಗನಾ ಇತ್ತೀಚಿನ ಸಂದರ್ಶನವೊಂದರಲ್ಲಿ ತಮ್ಮ ವೃತ್ತಿಜೀವನದ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ನಾನು ಅನೇಕ ಆಡಿಷನ್‌ಗಳನ್ನು ನೀಡಿದ್ದೇನೆ. ನಂತರ ನಾನು ಗ್ಯಾಂಗ್‌ಸ್ಟರ್‌ಗೆ ಆಯ್ಕೆಯಾದೆ. ತನ್ನ ಬಾಲಿವುಡ್ ಹೋರಾಟಗಳು ಸೂಪರ್‌ಸ್ಟಾರ್‌ಗಿಂತ ಹೆಚ್ಚು ಕಷ್ಟಕರವಾಗಿತ್ತು ಎಂದು ನಟಿ ತನ್ನ ಸಿನಿಜರ್ನಿಯನ್ನು ಶಾರೂಖ್​​ ಖಾನ್​ ಜತೆಗೆ ಹೋಲಿಸಿಕೊಂಡಿದ್ದಾರೆ.

ಸಿನಿಮಾ ಪ್ರಯಾಣವನ್ನು ಶಾರೂಖ್​ ಅವರೊಂದಿಗೆ ಹೋಲಿಸಿಕೊಂಡಿರುವುದಕ್ಕೂ ಸ್ಪಷ್ಟನೆ ನೀಡಿದರು.ನಾನು ಮತ್ತು ಶಾರೂಖ್​ ಇಬ್ಬರು ಹೊರಗಿನವರು (ನಿಜವಾಗಿಯೂ ಇದನ್ನು ಮಾಡಿದ್ದಾರೆ) ಎಂದು ನಾನು ಹೇಳಿದೆ. ಅವರ ತಾಯಿ ಮ್ಯಾಜಿಸ್ಟ್ರೇಟ್ ಆಗಿದ್ದರು. ಅವರು ಉತ್ತಮ ಇಂಗ್ಲಿಷ್ ಮಾತನಾಡುವ ಕುಟುಂಬದಿಂದ ಬಂದವರು. ಶಾರೂಖ್​ ದೆಹಲಿಯಿಂದ ಬಂದವರು, ದೆಹಲಿಯಿಂದ ಮುಂಬೈಗೆ ಬರಲು ಹೆಚ್ಚಿನ ವ್ಯತ್ಯಾಸವಿಲ್ಲ ಅಲ್ಲವೇ? ಎಂದು ಕೇಳಿದರು.

ಆದರೆ ಅವರಿಗೆ ಪಾಲಕರು ಇರಲಿಲ್ಲ ಜತೆಗೆ ಅವರಿಗೆ ಚಿತ್ರರಂಗದಲ್ಲಿ ಯಾರು ಗೊತ್ತಿರಲಿಲ್ಲ. ಟಾಪ್​ ಮೋಸ್ಟ್​​ ಸ್ಟಾರ್​ ಆದರು. ಈ ಸ್ಥಾನಕ್ಕೆ ಬರಲುಅವರ ಹೋರಾಟ ಸಾಮಾನ್ಯವಾಗಿರಲಿಲ್ಲ. ಹಾಗೆಯೇ ನಾನು ಹಳ್ಳಿಯಿಂದ ಬಂದಿದ್ದೇನೆ. ಅದು ಅಲ್ಲದೆ ನಾನು ಹುಡುಗಿ, ಹದಿಹರೆಯದಲ್ಲಿ ಸಿನಿಮಾ ಜಗತ್ತಿಗೆ ಬಂದಿದ್ದೇನೆ. ನನ್ನ ಪ್ರಯಾಣವು ಹೆಚ್ಚು ಕಷ್ಟಕರವಾಗಿದೆ ಎಂದು ಹೇಳಿದರು. ಅಲ್ಲದೆ ತಾವು ಪಾರ್ಟಿಗಳಿಂದ ದೂರವಿರಲು ಕಾರಣವನ್ನು ತಿಳಿಸಿದ ನಟಿ, ನಾನು ಬಾಲಿವುಡ್ ರೀತಿಯ ವ್ಯಕ್ತಿಯಲ್ಲ, ಸರಿ. ನಾನು ಬಾಲಿವುಡ್ ಜನರೊಂದಿಗೆ ಸ್ನೇಹಿತರಾಗಲು ಸಾಧ್ಯವಿಲ್ಲ. ನನಗೆ ಬಾಲಿವುಡ್ ಪಾರ್ಟಿ ಎಂದರೆ ಆಘಾತ ಇದ್ದಂತೆ ಎಂದಿದ್ದಾರೆ.

ಕಂಗನಾ ಅವರ ಮುಂದಿನ ಸಿನಿಮಾ ಎಮರ್ಜೆನ್ಸಿ, ದೇಶದಲ್ಲಿನ ತುರ್ತು ಪರಿಸ್ಥಿತಿ ಹೇರಿದ ಅವಧಿಯನ್ನು ಆಧರಿಸಿದೆ. ಕಂಗನಾ ರಣಾವತ್​ ಭಾರತದ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾ 2024 ಸೆಪ್ಟೆಂಬರ್​​ 6ರಂದು ಬಿಡುಗಡೆಯಾಗಲಿದೆ. ಸಿನಿಮಾದಲ್ಲಿ ಅನುಪಮ್ ಖೇರ್, ಮಹಿಮಾ ಚೌಧರಿ, ಮಿಲಿಂದ್ ಸೋಮನ್, ಶ್ರೇಯಸ್ ತಲ್ಪಾಡೆ, ವಿಶಾಕ್ ನಾಯರ್ ಮತ್ತು ದಿವಂಗತ ಸತೀಶ್ ಕೌಶಿಕ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. (ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net