ಸಿ.ಟಿ.ರವಿ ಅವಹೇಳನಕ್ಕೆ ಖಂಡನೆ

06122022 Kampli news
Published on

*ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಸಿದ್ರಾಮುಲ್ಲಾಖಾನ್ ಎಂದಿರುವ ಬಿಜೆಪಿ ನಾಯಕ

ಕಂಪ್ಲಿ: ಮಾಜಿ ಸಿಎಂ ಸಿದ್ದಮಯ್ಯ ಅವರನ್ನು ಸಿದ್ರಾಮುಲ್ಲಾಖಾನ್ ಎನ್ನುವ ಸಿ.ಟಿ.ರವಿ ಅವರ ಅವಹೇಳನಕಾರಿ ಹೇಳಿಕೆ ಖಂಡನೀಯ ಎಂದು ಶಾಸಕ ಜೆ.ಎನ್.ಗಣೇಶ್ ಹೇಳಿದರು.

ತಾಲೂಕಿನ ಸೋಮಲಾಪುರ ಗ್ರಾಮದಲ್ಲಿ ಜೆಜೆಎಂ ಯೋಜನೆಯ 58.20ಲಕ್ಷ ರೂ. ವೆಚ್ಚದ ಕುಡಿವ ನೀರಿನ ಕಾಮಗಾರಿಗೆ ಮಂಗಳವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಸಿದ್ರಾಮುಲ್ಲಾಖಾನ್ ಎನ್ನುವ ನಿಂದನಾರ್ಹ ಪದದಿಂದ ಸಮಸ್ತ ಹಾಲುಮತ ಸಮಾಜವನ್ನು, ಮುಸ್ಲಿಮರನ್ನು ಅವಹೇಳನ ಮಾಡಿದಂತಾಗಿದೆ. ಬಿಜೆಪಿ ನಾಯಕರ ವಿರುದ್ಧ ಶಕ್ತಿ ಪ್ರದರ್ಶನ ಮಾಡುವ ಕಾಲ ಬರಲಿದೆ ಎಂದರು.

ನಾರಾ ಸೂರ್ಯನಾರಾಯಣರೆಡ್ಡಿ ಕಾಂಗ್ರೆಸ್ ಮುಖಂಡರಾಗಿದ್ದು, ಅವರೊಂದಿಗೆ ಯಾವುದೇ ಭಿನ್ನಮತ ಹೊಂದಿಲ್ಲ.ಅವರ ಹುಟ್ಟು ಹಬ್ಬದಲ್ಲಿ ಪಾಲ್ಗೊಂಡಿದ್ದು ಉತ್ತಮ ಪ್ರತಿಕ್ರಿಯೆ ದೊರೆತಿದೆ. ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ಕೊಟ್ಟವರಿಗೆ ಎಲ್ಲರೂ ಸೇರಿ ಪಕ್ಷದ ಪರವಾಗಿ ಕಾರ್ಯನಿರ್ವಹಿಸಬೇಕಿದೆ ಎಂದರು.

ಪಿಡಿಒ ಹನುಮಂತಪ್ಪ, ಗ್ರಾಪಂ ಸದಸ್ಯ ಮಾರೇಶ್, ಪ್ರಮುಖರಾದ ಜಿ.ಮರೇಗೌಡ, ಚಂದಾಸಾಬ್, ಎಸ್.ಕೆ.ಚಂದ್ರಗೌಡ, ಆರ್.ಮಲ್ಲಿಕಾರ್ಜುನ, ಎಸ್.ಕೆ.ಶರಭನಗೌಡ, ನಾಯಕರ ಪಂಪಣ್ಣ, ವಡ್ಡಿನ ಮರಿಸ್ವಾಮಿ, ಜಿ.ನಾರಾಯಣಪ್ಪ, ಎನ್.ರಾಜಾ, ಎನ್.ಮಂಜುನಾಥ, ಸಿದ್ಧಿ ಪೀರಾಸಾಬ್, ಜಿ.ಬಸವರಾಜ್, ಸಣ್ಣ ಮಾರೆಪ್ಪ, ನಾಯಕರ ಅಂಜಿನಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net