ಇಂಡಿಯನ್​​2 ಸಿನಿಮಾಗೆ ಬಿತ್ತು ಕತ್ತರಿ; ಚಿತ್ರತಂಡ ಹೇಳಿದ್ದೇನು?

Untitled-design-16-1
Published on

ಚೆನ್ನೈ: ಉಳಗನಾಯಕನ್​​ ಕಮಲ್​ ಹಾಸನ್​ ಅಭಿನಯದ ಇಂಡಿಯನ್​ 2 ಸಿನಿಮಾ ಜುಲೈ 12ರಂದು ಬಿಡುಗಡೆಯಾಗಿದೆ. ಈ ಚಿತ್ರವು 1996ರಲ್ಲಿ ತೆರೆಕಂಡಿದ್ದ ಇಂಡಿಯನ್​ ಸಿನಿಮಾದ ಮುಂದುವರಿದ ಭಾಗವಾಗಿದೆ. 18 ವರ್ಷಗಳ ನಂತರ ಬಿಡುಗಡೆಯಾದ ಇಂಡಿಯನ್​ 2 ಸಿನಿಮಾ ಪ್ರೇಕ್ಷಕರನ್ನು ಆಕರ್ಷಿಸುವಲ್ಲಿ ಎಡವಿದೆ. ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆಯಾದ ಮೊದಲ ದಿನ 25.6 ಕೋಟಿ ಗಳಿಸಿದೆ. ಮೊದಲ ದಿನ ಭರ್ಜರಿ ಕಲೆಕ್ಷನ್​​​ ಪಡೆದು ಎರಡನೇ ದಿನಕ್ಕೆ ಇಳಿಕೆ ಕಂಡಿದೆ.

ಇದನ್ನು ಓದಿ: ಮುಸ್ಲಿಮರ ಜನಸಂಖ್ಯೆ ಏರಿಕೆ; ಇದು ನನಗೆ ರಾಜಕೀಯವಲ್ಲ.. ಜೀವನ ಮತ್ತು ಸಾವಿನ ವಿಚಾರ ಎಂದಿದ್ದೇಕೆ ಸಿಎಂ

ಸಿನಿಮಾ ಬಿಡುಗಡೆಯಾಗ ಬಳಿಕ ಮಿಶ್ರ ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ. ಚಿತ್ರದ ನಿರ್ದೇಶಕ ಎಸ್​​​.ಶಂಕರ್ ಅವರ ಹಿಂದಿನ ಕೆಲಸಕ್ಕಾಗಿ ಸಾಕಷ್ಟು ಟ್ರೋಲ್ ಆಗುತ್ತಿದೆ. ಚಿತ್ರದ ದೊಡ್ಡ ಸಮಸ್ಯೆ ಎಂದರೆ ಅದರ ನೀರಸ ದ್ವಿತೀಯಾರ್ಧ ಮತ್ತು ರನ್ಟೈಮ್. ಚಿತ್ರದಲ್ಲಿ ಅನೇಕ ವಿಷಯಗಳು ಪುನರಾವರ್ತನೆಯಾದ ಆಧಾರದ ಮೇಲೆ ಈ ಚಿತ್ರವು ಹೆಚ್ಚು ನಕಾರಾತ್ಮಕ ಪ್ರತಿಕ್ರಿಯೆಯನ್ನು ಪಡೆಯುತ್ತಿದೆ. ಸಿನಿಮಾ ವೀಕ್ಷಿಸಿದವರು ಚಿತ್ರದ ರನ್​ಟೈಂ ಕೂಡ ಜಾಸ್ತಿಯಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪ್ರೇಕ್ಷಕರ ಪ್ರತಿಕ್ರಿಯೆಯನ್ನು ಗಮನದಲ್ಲಿಟ್ಟುಕೊಂಡು ಇಂಡಿಯನ್​ 2 ಸಿನಿಮಾ ತಯಾರಕರು 12 ನಿಮಿಷ ದೃಶ್ಯಗಳನ್ನು ಕಟ್​ ಮಾಡಿದ್ದಾರೆ(ತೆಗೆದುಹಾಕಿದ್ದಾರೆ). ಇಂಡಿಯನ್ 2 ಯು/ಎ ಪ್ರಮಾಣಪತ್ರದೊಂದಿಗೆ ಸೆನ್ಸಾರ್ ಆಗಿತ್ತು . ಟೀಮ್​​ ಮಾಡುವ ಮೊದಲು ಮೂರು ಗಂಟೆ ನಾಲ್ಕು ನಿಮಿಷಗಳ ರನ್​ಟೈಂ ಹೊಂದಿತ್ತು. ಪ್ರಸ್ತುತ ಈಗ ಎರಡು ಗಂಟೆ 52 ನಿಮಿಷ್​​ ರನ್​ಟೈಮ ಹೊಂದಿದೆ. ಸ್ವತಃ ಇಂಡಿಯನ್​ 2 ಸಿನಿಮಾದ ನಿರ್ಮಾಣ ಸಂಸ್ಥೆ ಲೈಕಾ ಪ್ರೊಡಕ್ಷನ್ಸ್ ಈ ಸುದ್ದಿಯನ್ನು ಖಚಿತಪಡಿಸಿದೆ.

ರನ್​ಟೈಂ ಕಡಿಮೆಯಾಗಿರುವ ಇಂಡಿಯನ್​​ 2 ಸಿನಿಮಾ ‘ಬುಧವಾರ (ಜುಲೈ 17) ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ. ತಯಾರಕರ ಈ ದೊಡ್ಡ ನಿರ್ಧಾರವು ಯಾವ ರೀತಿ ಪ್ರಯೋಜನವನ್ನು ನೀಡುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ಕಾದುನೋಡಬೇಕಿದೆ. ಕಮಲ್​ ಹಾಸನ್​ ಸೇರಿ ಸಿದ್ಧಾರ್ಥ್, ಪ್ರಿಯಾ ಭವಾನಿ ಶಂಕರ್, ರಾಕುಲ್ ಪ್ರೀತ್ ಸಿಂಗ್, ನೆಡುಮುಡಿ ವೇಣು, ವಿವೇಕ್, ಬಾಬಿ ಸಿಂಹ ಪ್ರಮುಖ ತಾರಾಗಣದಲ್ಲಿದ್ದಾರೆ. ಇಂಡಿಯನ್ 3 ಚಿತ್ರೀಕರಣವನ್ನು ಚಿತ್ರತಂಡ ಸಹ ಪೂರ್ಣಗೊಳಿಸಿದೆ. ಈ ಚಿತ್ರವು ಮುಂದಿನ ವರ್ಷ ಬಿಡುಗಡೆಯಾಗುವ ನಿರೀಕ್ಷೆಯಿದೆ. (ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net