

ಶಿವಮೊಗ್ಗ: ನಗರದ ಮಿಷನ್ ಕಾಂಪೌಂಡ್‌ನಲ್ಲಿ ಜಿಲ್ಲಾ ಸಾಧುಶೆಟ್ಟಿ 24 ಮನೆ ಮಹಿಳಾ ಸಂಘದಿಂದ 80 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ಕಾಮಾಕ್ಷಿ ಸಮುದಾಯ ಭವನದ ಉದ್ಘಾಟನೆ ಕಾರ್ಯಕ್ರಮ ಆ.4ರ ಬೆಳಗ್ಗೆ 10ಕ್ಕೆ ಜರುಗಲಿದೆ ಎಂದು ಸಂಘದ ಅಧ್ಯಕ್ಷೆ ನಾಗರತ್ನಾ ಸೋಮಶೇಖರ್ ಹೇಳಿದರು.
ಸಮುದಾಯ ಭವನವು ವಿವಿಧ ಶಾಸಕರ ಅನುದಾನ ಮತ್ತು ಸಮಾಜದವರ ಕೊಡುಗೆಯಿಂದ ನಿರ್ಮಿಸಲಾಗಿದೆ. ಆ.3ರಂದು ಹೋಮ, ಹವನ, ಪೂಜಾ ಕೈಂಕರ್ಯ ನಡೆಯಲಿದೆ. ಸಮಾಜದ ಮುಖಂಡರು ಭಾಗವಹಿಸುವರು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಆ. 4ರಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಸಮುದಾಯ ಭವನ ಉದ್ಘಾಟಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಭೋಜನಾಲಯ ಉದ್ಘಾಟಿಸುವರು. ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ಶಾಸಕ ಎಸ್.ಎನ್.ಚನ್ನಬಸಪ್ಪ, ವಿಧಾನ ಪರಿಷತ್ ಸದಸ್ಯರಾದ ಬಲ್ಕಿಶ್‌ಬಾನು, ಡಿ.ಎಸ್.ಅರುಣ್, ಡಾ. ಧನಂಜಯ ಸರ್ಜಿ, ಸೂಡಾ ಮಾಜಿ ಅಧ್ಯಕ್ಷರಾದ ವಿ.ರಾಜು, ಎನ್.ರಮೇಶ್, ಶಿವಮೊಗ್ಗ ಸಾಧುಶೆಟ್ಟಿ ಸಮಾಜದ ಅಧ್ಯಕ್ಷ ಎನ್.ಉಮಾಪತಿ ಭಾಗವಹಿಸುವರು ಎಂದರು.
ಸೂಡಾ ಮಾಜಿ ಅಧ್ಯಕ್ಷ ವಿ.ರಾಜು, ಸಂಘದ ಪದಾಧಿಕಾರಿಗಳಾದ ಗುಣಮ್ಮ ಕೃಷ್ಣಮೂರ್ತಿ, ವನಜಾಕ್ಷಿ, ಆದಿಶೇಷ, ಆರ್.ಸರಸ್ವತಮ್ಮ ವೆಂಕಟೇಶ್, ಲಕ್ಷಮ್ಮ ನರಸಿಂಹಮೂರ್ತಿ, ಭಾಗ್ಯಾ ವೆಂಕಟೇಶ್, ಸಲಹೆಗಾರ ಸೋಮಶೇಖರ್ ಸುದ್ದಿಗೋಷ್ಠಿಯಲ್ಲಿದ್ದರು.