ಕಾಮಧೇನುಗೆ ಸಹಕಾರಿಗೆ ನೇತ್ರಾವತಿ ಅಧ್ಯಕ್ಷೆ

2
ಮುನವಳ್ಳಿ ಪಟ್ಟಣದ ಕಾಮಧೇನು ಮಹಿಳಾ ಸಹಕಾರಿಗೆ ಅಧ್ಯಕ್ಷರಾಗಿ ನೇತ್ರಾವತಿ ಬಾರಕೇರ ಹಾಗೂ ಉಪಾಧ್ಯಕ್ಷೆಯಾಗಿ ಪುಷ್ಪಾ ಸರ್ವಿ ಆಯ್ಕೆಯಾದ ಹಿನ್ನೆಲೆಯಲ್ಲಿ ಸನ್ಮಾನಿಸಲಾಯಿತು. ಅನಸೂಯಾ ಗುಂಡ್ಲೂರ, ರೇಣುಕಾ ಕಟಿಗೆನ್ನವರ ಇತರರಿದ್ದರು.
Published on

ಮುನವಳ್ಳಿ: ಪಟ್ಟಣದ ಕಾಮಧೇನು ಮಹಿಳಾ ವಿವಿಧೋದ್ದೇಶಗಳ ಸೌಹಾರ್ದ ಸಹಕಾರಿ ಸಂಘದ ಮುಂಬರುವ 5 ವರ್ಷದ ಅವಧಿಗೆ ಇತ್ತೀಚಿಗೆ ಜರುಗಿದ ಚುನಾವಣೆ ಪ್ರಕ್ರಿಯೆಯಲ್ಲಿ ಅಧ್ಯಕ್ಷೆಯಾಗಿ ನೇತ್ರಾವತಿ ಬಾರಕೇರ ಹಾಗೂ ಉಪಾಧ್ಯಕ್ಷೆಯಾಗಿ ಪುಷ್ಪಾ ಸರ್ವಿ ಎರಡನೇ ಸಲ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಚುನಾವಣಾಧಿಕಾರಿಯಾಗಿ ಬಸವರಾಜ ಹಡಪದ ಕಾರ್ಯನಿರ್ವಹಿಸಿದರು. ನಿರ್ದೇಶಕಿಯರಾದ ಅನುಸೂಯಾ ಗುಂಡ್ಲೂರ, ರೇಣುಕಾ ಕಟಿಗೆನ್ನವರ, ಶಾಂತವ್ವ ಜಡೆನ್ನವರ, ಸರಸ್ವತಿ ಬಾರಕೇರ, ಶಾಂತವ್ವ ಹನಸಿ, ಸಾಂವಕ್ಕ ನಲಗೆ, ಸುಮಿತ್ರಾ ಕರದೀನ, ಪ್ರೇಮಾ ಮೇದಾರ, ಸುಮನ ಪೋಳ, ಮುಖ್ಯಕಾರ್ಯನಿರ್ವಾಹಕಿ ರೂಪಾ ಪೂಜೇರ, ಕಾಮಧೇನು ಸಮೂಹ ಸಂಸ್ಥೆ ಅಧ್ಯಕ್ಷ ಮಾರುತಿ ಬಾರಕೇರ, ಮೋಹನ ಸರ್ವಿ, ಪ್ರಕಾಶ ಮಾನೆ, ಮಡಿವಾಳ ಗುಂಡ್ಲೂರ, ಅಶೋಕ ಕರದೀನ, ಅಪ್ಪು ಅಮಠೆ, ವಿಜಯ ಪೋಳ, ಪ್ರಕಾಶ ಕದಂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net