

ಬೆಂಗಳೂರು:
ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಕಳೆದ 2 ವರ್ಷಗಳಲ್ಲಿ ರಾಜ್ಯ ಮಟ್ಟದ ಏಕಗವಾಕ್ಷಿ ಅನುಮೋದನಾ ಸಮಿತಿಯಲ್ಲಿ ಹಾಗೂ ರಾಜ್ಯ ಉನ್ನತ ಮಟ್ಟದ ಒಪ್ಪಿಗೆ ನೀಡಿಕೆ ಸಮಿತಿಯಲ್ಲಿ ಒಟ್ಟು 129 ಬಂಡವಾಳ ಹೂಡಿಕೆ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ ಎಂದು ಸಚಿವ ಎಂ. ಬಿ. ಪಾಟೀಲ್ ಮೇಲ್ಮನೆಯಲ್ಲಿ ತಿಳಿಸಿದರು.
ಬಿಜೆಪಿಯ ಶಶೀಲ್ ಜಿ ನಮೋಶಿ ಪ್ರಶ್ನೆಗೆ ಉತ್ತರಿಸಿದ ಸಚಿವರು, 2022-23ನೇ ಸಾಲಿನಲ್ಲಿ
75 ಯೋಜನೆಗಳಿಗೆ ರೂ 85561 ಕೋಟಿ ಬಂಡವಾಳ ಹೂಡಿಕೆ ಹಾಗೂ 30974 ಜನರಿಗೆ ಉದ್ಯೋಗ ಸೃಷ್ಠಿಗೆ ಮತ್ತು 2023-24ನೇ ಸಾಲಿನಲ್ಲಿ 54 ಯೋಜನೆಗಳಿಗೆ ರೂ 12252 ಕೋಟಿ ಬಂಡವಾಳ ಹೂಡಿಕೆ ಮತ್ತು 9152 ಜನರಿಗೆ ಉದ್ಯೋಗ ಸೃಷ್ಠಿಗೆ ಅನುಮೋದನೆ
ನೀಡಲಾಗಿದೆ ಎಂದರು.
ಎರಡು ವರ್ಷಗಳಲ್ಲಿ ಒಂದು ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ಮಾಡಲಾಗಿದ್ದು, 57 ಕಂಪನಿಗಳೊಂದಿಗೆ ರೂ. 5,41,369 ಕೋಟಿ ಬಂಡವಾಳ ಹೂಡಿಕೆ ಒಡಂಬಡಿಕೆಗಳಿಗೆ ಸಹಿ
ಮಾಡಿವೆ ಎಂದರು.