ಪುಷ್ಯಾ ಮಳೆ ಅಬ್ಬರಕ್ಕೆ ಕಲ್ಲತ್ತಿಗಿರಿ ಜಲಪಾತಕ್ಕೆ ಜೀವಕಳೆ

23 TKE 5A (2)
ಕೆಮ್ಮಣ್ಣುಗುಂಡಿ ಭಾಗದಲ್ಲಿ ಭರ್ಜರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಲ್ಲತ್ತಿಗಿರಿ ಫಾಲ್ಸ್‌ಗೆ ಜೀವಕಳೆ
Published on

ತರೀಕೆರೆ: ಪಟ್ಟಣ ಸೇರಿ ತಾಲೂಕಿನೆಲ್ಲೆಡೆ ಪುಷ್ಯಾ ಮಳೆ ಅಬ್ಬರಿಸುತ್ತಿದ್ದು, ಪ್ರಸಿದ್ಧ ಪ್ರವಾಸಿ ತಾಣಗಳಾದ ಹೆಬ್ಬೆ ಜಲಪಾತ ಮತ್ತು ಕಲ್ಲತ್ತಿಗಿರಿ ಜಲಪಾತಗಳಿಗೆ ಜೀವಕಳೆ ಬಂದಿದೆ. ಕೆಮ್ಮಣ್ಣುಗುಂಡಿ ಗಿರಿಶ್ರೇಣಿಗಳಲ್ಲಿ ಭರ್ಜರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಹೆಬ್ಬೆ ಜಲಪಾತ, ಕಲ್ಲತ್ತಿ ಜಲಪಾತ ಭೋರ್ಗರೆದು ಧುಮ್ಮಿಕ್ಕುತ್ತಿವೆ. ಭಾನುವಾರ ಎರಡು ಜಲಪಾತಗಳ ಸೊಬಗನ್ನು ಕಣ್ತುಂಬಿಕೊಳ್ಳಲು ಜಿಲ್ಲೆಯ ವಿವಿಧ ಭಾಗಗಳಿಂದ ಮಾತ್ರವಲ್ಲ, ಹೊರ ಜಿಲ್ಲೆ, ರಾಜ್ಯಗಳ ನೂರಾರು ಪ್ರವಾಸಿಗರು ಆಗಮಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net