ಕ್ಯಾಂಟರ್​ ಚಾಲಕನ ಕಿಡ್ನ್ಯಾಪ್​ ಪ್ರಕರಣ; ಗ್ಯಾಂಗ್​ ಲೀಡರ್​ಗೆ ಒಂದೇ ಕಾಲು..!

crime
Published on

ಬೆಂಗಳೂರು: ಇತ್ತೀಚೆಗೆ ನಡೆದ ಕ್ಯಾಂಟರ್ ಚಾಲಕನ ಕಿಡ್ನಾಪ್ ಪ್ರಕರಣಕ್ಕೆ ಮತ್ತೊಂದು ವಿಷಯ ಬೆಳಕಿಗೆ ಬಂದಿದೆ. ಈ ಕೃತ್ಯ ನಡೆದದ್ದು ಓರ್ವ ನಟೋರಿಯಸ್ ದರೋಡೆಕೋರನಿಂದ.

ಈತ ಗುಂಡೇಟು ಮೋಸ್ಟ್ ವಾಟೆಂಡ್ ಕ್ರಿಮಿನಲ್ ಆಗಿದ್ದು ಈ ಹಿಂದೆ ಕಾಲಿಗೆ ಗುಂಡು ಕೂಡ ತಿಂದಿದ್ದ. ಗುಮಡು ತಿಂದ್ರೂ ಬುದ್ದಿ ಕಲಿಯದ ಈತ ಪದೇ ಪದೇ ಪೋಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದಾನಂತೆ!

ಈ ಕೃಷ್ಣ ಅಲಿಯಾಸ್ ಕಳ್ಳಕೃಷ್ಣ ಕ್ಯಾಂಟರ್ ಚಾಲಕನ ಕಿಡ್ನಾಪ್ ಮಾಡಿದ್ದು ದರೋಡೆಕೋರನಾಗಿ ಕುಖ್ಯಾತಿ ಪಡೆದಿದ್ದ. ಈತ ಇಪ್ಪತ್ತಕ್ಕೂ ಹೆಚ್ಚು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದಾನೆ. 2020ರಲ್ಲಿ ಎಲೆಕ್ಟ್ರಾನಿಕ್ ಸಿಟಿ ಪೋಲೀಸರು ಈತ ಕಾಲಿಗೆ ಗುಂಡು ಹಾರಿಸಿದ್ರು. ಆಗ ಒಂದು ಕಾಲು ಕಳೆದುಕೊಂಡು ನಮ್ಮ ಕಳ್ಳಕೃಷ್ಣ ಜೈಲಿಗೆ ಹೋಗಿದ್ದ. ಅದಲ್ಲದೇ ಮೊಣಕಾಲಿನ ತನಕ ತನ್ನ ಕಾಲನ್ನೂ ಕಳ್ಳಕೃಷ್ಣ ಕಳೆದುಕೊಂಡಿದ್ದ.

ಗುಂಡೇಟು ತಿಂದು ಜೈಲಿಗೆ ಹೋಗಿ ಬಂದ್ರು ಮತ್ತೆ ಅದೇ ಚಾಳಿ ಮುಂದುವರಿಸಿದ್ದ ಈತ, ಪ್ಲಾಸ್ಟಿಕ್ ಕಾಲನ್ನು ಹಾಕಿಕೊಂಡು ಮತ್ತೆ ಕಳ್ಳತನ ಮಾಡುತ್ತಿದ್ದ. ಬನ್ನೇರುಘಟ್ಟ ವ್ಯಾಪ್ತಿಯಲ್ಲಿ ಸಿಕ್ಕ ಸಿಕ್ಕ ಕಡೆಗಳಲ್ಲಿ ರಾಬರಿ ಮಾಡಿಕೊಂಡು ಇದ್ದ ಈತ, ವಾಹನ ಚಾಲಕರನ್ನ ಅಡ್ಡಗಟ್ಟಿ ರಾಬರಿ ಮಾಡುವುದ್ನು ಹವ್ಯಾಸವಾಗಿ ಬೆಳೆಸಿಕೊಂಡಿದ್ದ. ತನ್ನದೇ ಗ್ಯಾಂಗ್​ ಕೂಡ ಬೆಳೆಸಿಕೊಂಡಿದ್ದ ಈತ ಗಾಂಜಾ ಹೊಡೆಯುವ ನಾಲ್ಕೈದು ಹುಡುಗರ ಜೊತೆಗೆ ಕಳ್ಳತನ ಮಾಡುತ್ತಿದ್ದ.

ಈ ಕಳ್ಳಕೃಷ್ಣ, ಆಟೋದಲ್ಲಿ ಓಡಾಡಿಕೊಂಡು ರಸ್ತೆಯಲ್ಲಿ ಸಿಕ್ಕಸಿಕ್ಕವರನ್ನ ಅಡ್ಡಗಟ್ಟಿ ದರೋಡೆ ಮಾಡಿ ಅವರನ್ನು ಅಲ್ಲಿಯೇ ಬಿಡದೆ ಕಿಡ್ನಾಪ್ ಮಾಡ್ತಾನೆ. ಇದೇ ಇವನ ಸ್ಪೆಷಾಲಿಟಿ ಕೂಡ. ಈತ ತಾನು ಕಿಡ್ನಾಪ್ ಮಾಡಿದವರನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಹಲ್ಲೆ ಮಾಡ್ತಾನೆ. ನಂತರ ಪೋನ್ ಮೂಲಕವೂ ಈತ ಹಣ ಹಾಕಿಸಿಕೊಳ್ಳುತ್ತಿದ್ದ,

ಅದೇ ರೀತಿ, ಕಳೆದ 14 ನೇ ತಾರೀಕಿನ ರಾತ್ರಿ ಕ್ಯಾಂಟರ್ ಚಾಲಕ ಚೇತನ್​ನನ್ನು ಬನ್ನೇರುಘಟ್ಟ ಸಮೀಪದ ಸಕಲವಾರ ಬಳಿ ಕಿಡ್ನಾಪ್ ಮಾಡಿಕೊಂಡು ಬನ್ನೇರುಘಟ್ಟ ಅರಣ್ಯ ಪ್ರದೇಶದ ಟಿಕೆ ಫಾಲ್ಸ್ ಬಳಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಹಲ್ಲೆ ನಡೆಸಿದ್ದ.

ಈತನ ಗ್ಯಾಂಗ್​, ಚೇತನ್ ಬಳಿ ಇದ್ದ ಹಣ ಮತ್ತು ಪೋನ್ ಕಸಿದು ಮಾರಣಾಂತಿಕ ಹಲ್ಲೆ ನಡೆಸಿದ್ದರು. ಇದಾದ ಮೇಲೆ 16ನೇ ತಾರೀಕಿನಂದು ಮತ್ತೆ ಬನ್ನೇರುಘಟ್ಟ ಹಕ್ಕಿಪಿಕ್ಕಿ ಕಾಲೋನಿ ಬಳಿ ಲಗೇಜ್ ಟೆಂಪೋ ಚಾಲಕ ಅಲ್ ಬಕಾಶ್​ನನ್ನು ಅಡ್ಡಗಟ್ಟಿ ಕಳ್ಳಕೃಷ್ಣ ಅಂಡ್ ಟೀಮ್ ರಾಬರಿ ಮಾಡಿದ್ದರು. ಈ ಸಂದರ್ಭ ಮೊಬೈಲ್ ಪೋನ್ ನಲ್ಲಿದ್ದ 35 ಸಾವಿರ ಹಣ ಹಾಕಿಸಿಕೊಂಡಿದ್ದರು. ಅದಲ್ಲದೇ ಈ ವಿಷಯ ಪೋಲೀಸರಿಗೆ ತಿಳಿಸಿದ್ರೆ ಕೊಲೆ ಕೂಡ ಮಾಡೋದಾಗಿ ಹೇಳಿ ಕಳ್ಳ ಕೃಷ್ಣ ಹಾಗೂ ಆತನ ಗ್ಯಾಂಗ್​ ಎಸ್ಕೇಪ್ ಆಗಿದ್ದರು.

ಬನ್ನೇರುಘಟ್ಟ ಸುತ್ತಮುತ್ತಲಿನ ಕಡೆಗಳಲ್ಲಿ ಕೃತ್ಯ ಮಾಡುತ್ತಿದ್ದರೂ ಈ ನಟೋರಿಯಸ್​ ಕ್ರಿಮಿನಲ್​ ಪೋಲೀಸರ ಕೈಗೆ ಸಿಗುತ್ತಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net