ಕಲಶೇಶ್ವರ ದೇಗುಲದ ಶಾಸನ ಮಾಹಿತಿ ಕಾರ್ಯಾಗಾರ

seminar
ಕಳಸದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಇತಿಹಾಸ ವಿಭಾಗದ ಪರಂಪರೆ ಕೂಟ ಮತ್ತು ಐಕ್ಯುಎಸಿ ಸಹಭಾಗಿತ್ವದಲ್ಲಿ ಕಾರ್ಯಾಗಾರ ನಡೆಯಿತು. ಎಚ್.ಆರ್.ಪಾಂಡುರಂಗ, ವಿನಯ ಕುಮಾರ ಶೆಟ್ಟಿ, ಎಸ್.ಪ್ರೇಮಲತಾ, ಡಾ.ಆದಿತ್ಯ ಅಡಿಗ ಇತರರಿದ್ದರು.
Published on

ಕಳಸ: ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಇತಿಹಾಸ ವಿಭಾಗದ ಪರಂಪರೆ ಕೂಟ ಮತ್ತು ಐಕ್ಯುಎಸಿ ಸಹಭಾಗಿತ್ವದಲ್ಲಿ ಶ್ರೀ ಕಲಶೇಶ್ವರ ದೇವಾಲಯದ ಶಾಸನಗಳು: ಒಂದು ಕ್ಷೇತ್ರಾಧ್ಯಯನ ವಿಷಯದ ಕುರಿತು ಕಾರ್ಯಾಗಾರ ಬುಧವಾರ ನಡೆಯಿತು.
ಕರ್ನಾಟಕ ಇತಿಹಾಸ ಅಕಾಡೆಮಿ ಕಾರ್ಯಕಾರಿ ಸಮಿತಿ ಸದಸ್ಯ ಎಚ್.ಆರ್.ಪಾಂಡುರಂಗ ಕಲಶೇಶ್ವರ ದೇವಾಲಯದ ಆವರಣದಲ್ಲಿರುವ ಶಾಸನಗಳ ಕುರಿತು ಮಾತನಾಡಿ, ಕಲಶನಾಥನಿಗೆ ಅರಸು ಮನೆತನಗಳು ನೀಡಿದ ದಾನ ದತ್ತಿಗಳು, ದೇವಾಲಯದ ನಿರ್ಮಾಣ, ಕಳಸ ಪರಿಸರದ ಭೌಗೋಳಿಕ ಮತ್ತು ಚಾರಿತ್ರಿಕ ಹಿನ್ನೆಲೆ, ಈ ಪರಿಸರವನ್ನು ಆಳಿದ ಅರಸರ ಕುರಿತಂತೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ವಿಜಯನಗರ ಅರಸರ ಕಾಲದ ಕೆಲವು ಶಾಸನಗಳನ್ನು ಓದಿ ಅರ್ಥೈಸುವುದರ ಮೂಲಕ ವಿದ್ಯಾರ್ಥಿಗಳಿಗೆ ಕನ್ನಡ ಲಿಪಿಯ ವಿಕಾಸ ಮತ್ತು ಬೆಳವಣಿಗೆಯ ಹಂತಗಳ ಕುರಿತು ವಿವರಿಸಿದರು.
ಕಾಲೇಜಿನ ಪ್ರಾಚಾರ್ಯ ವಿನಯ ಕುಮಾರ ಶೆಟ್ಟಿ, ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಪ್ರೇಮಲತಾ, ಐಕ್ಯುಎಸಿ ಸಂಚಾಲಕ ಡಾ. ಆದಿತ್ಯ ಅಡಿಗ, ಇತಿಹಾಸ ಪ್ರಾಧ್ಯಾಪಕ ಡಾ. ಸುನೀಲ್, ಪೂರ್ಣೇಶ್, ವಿದ್ಯಾರ್ಥಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net