ಕ್ರೀಡಾಪಟುಗಳಿಗೆ ಜನಪ್ರತಿನಿಧಿಗಳಿಂದ ಪ್ರೋತ್ಸಾಹ ದೊರೆಯಲಿ

cricket legue
ಬಾಳೆಹೊನ್ನೂರಿನಲ್ಲಿ ಆಯೋಜಿಸಿದ್ದ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾವಳಿಯಲ್ಲಿ ವಿಜೇತರಾದ ಕುಂದಾಪುರದ ಬಿ.ಕೆ.ಬ್ರದರ್ಸ್‌ ತಂಡಕ್ಕೆ ಅತಿಥಿಗಳು ಟ್ರೋಫಿ ವಿತರಿಸಿದರು. ಇಬ್ರಾಹಿಂ ಶಾಫಿ, ಭಾಸ್ಕರ್ ವೆನಿಲ್ಲಾ, ಟಿ.ಎಂ.ಬಶೀರ್, ಸ್ಟೀನ್, ರಫೀಕ್ ಇದ್ದರು.
Published on

ಬಾಳೆಹೊನ್ನೂರು: ಗ್ರಾಮೀಣ ಪ್ರದೇಶದಲ್ಲಿ ಉತ್ತಮ ಕ್ರೀಡಾಪಟುಗಳಿದ್ದು ಅವರಿಗೆ ಆಟವಾಡಲು ಸೂಕ್ತ ವ್ಯವಸ್ಥೆ ಮಾಡಿ ಪ್ರೋತ್ಸಾಹಿಸುವುದು ಸಂಘ ಸಂಸ್ಥೆಗಳು ಹಾಗೂ ಜನಪ್ರತಿನಿಧಿಗಳ ಜವಾಬ್ದಾರಿ ಎಂದು ಬಿ.ಕಣಬೂರು ಗ್ರಾಪಂ ಮಾಜಿ ಅಧ್ಯಕ್ಷ ಎಂ.ಎಸ್.ಅರುಣೇಶ್ ಹೇಳಿದರು.
ಪಟ್ಟಣದ ಕಲಾರಂಗ ಕ್ರೀಡಾಂಗಣದಲ್ಲಿ ಕಡ್ಲೆಮಕ್ಕಿ ್ರೆಂಡ್ಸ್ ಆಯೋಜಿಸಿದ್ದ ಕಲಾರಂಗ ಪ್ರೀಮಿಯರ್ ಲೀಗ್ ಸೀಸನ್-2ರ ಕ್ಷೇತ್ರಮಟ್ಟ ಹಾಗೂ ರಾಜ್ಯಮಟ್ಟದ 30 ಯಾರ್ಡ್ ಹೊನಲು ಬೆಳಕಿನ ಟೆನಿಸ್‌ಬಾಲ್ ಕ್ರಿಕೆಟ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು.
ಪಟ್ಟಣದಲ್ಲಿ ವಿವಿಧ ಕ್ರೀಡೆಗಳಲ್ಲಿ ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಆಡುವ ಕ್ರೀಡಾಪಟುಗಳಿದ್ದು ಕಡ್ಲೆಮಕ್ಕಿ ್ರೆಂಡ್ಸ್ ತಂಡದವರು ಇದೇ ಮೊದಲ ಬಾರಿಗೆ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಿರುವುದು ಶ್ಲಾಘನೀಯ ಎಂದರು.
ಪತ್ರಕರ್ತ ಯಜ್ಞಪುರುಷಭಟ್ ಮಾತನಾಡಿ, ಪಟ್ಟಣದಲ್ಲಿ ಸುಮಾರು 15 ಸಾವಿರಕ್ಕೂ ಹೆಚ್ಚು ನಾಗರಿಕರು ಇದ್ದು ಆಟವಾಡಲು ಸುಸಜ್ಜಿತ ಕ್ರೀಡಾಂಗಣ ಇಲ್ಲದಿರುವುದು ಬೇಸರದ ಸಂಗತಿ. ಪಂದ್ಯಾವಳಿಗಳ ಬಹುಮಾನ ವಿತರಣಾ ಸಮಾರಂಭದಲ್ಲಿ ರಾಜಕಾರಣಿಗಳು ಕ್ರೀಡಾಂಗಣ ಮಾಡಿಕೊಡಿಸುವುದಾಗಿ ಹಲವು ಬಾರಿ ಭರವಸೆ ನೀಡಿದ್ದು ಇದುವರೆಗೂ ಈಡೇರಿಲ್ಲ ಎಂದು ಹೇಳಿದರು.
ಕಾಫಿ ಬೆಳೆಗಾರ ಎಂ.ವಿ.ಶ್ರೀನಿವಾಸ ಗೌಡ, ರಾಕಿನ್ ಕ್ರಿಕೆಟ್ ಅಕಾಡೆಮಿ ವ್ಯವಸ್ಥಾಪಕ ರಾಕಿನ್ ಆದಿಲ್, ಗ್ರಾಪಂ ಸದಸ್ಯ ಮಹಮ್ಮದ್ ಜುಹೇಬ್, ಗುತ್ತಿಗೆದಾರ ಟಿ.ಎಂ.ಬಶೀರ್, ಹಿರಿಯ ಕ್ರೀಡಾಪಟು ಒ.ಡಿ.ಸ್ಟೀನ್, ಮಹಮದ್ ಶಹಾಬ್, ಮುಸ್ತಾ, ಇಬ್ರಾಹಿಂ ಶಾಫಿ, ಎಸ್.ಕೆ.ರಫೀಕ್, ಶಾಹಿದ್, ಇರ್ಫಾನ್ ಇತರರಿದ್ದರು.
ಕುಂದಾಪುರದ ಬಿ.ಕೆ.ಬ್ರದರ್ಸ್‌ ತಂಡ ಪ್ರಥಮ ಸ್ಥಾನ, ಅಜಿತ್ ಬಾಯ್ಸ ತಂಡ ದ್ವಿತೀಯ, ಯುನೈಟೆಡ್ ಬಾಯ್ಸ ತಂಡ ತೃತೀಯ, ಜೆಡ್ ಇಲೆವೆನ್ ತಂಡ ಚತುರ್ಥ ಸ್ಥಾನ ಪಡೆದವು.
ರಿಜ್ವಾನ್ (ಬೆಸ್ಟ್ ಬ್ಯಾಟರ್), ಚವನ್ ಭಂಡಾರಿ (ಬೆಸ್ಟ್ ಬೌಲರ್), ಸೇತನ್ ನಿತೇಶ್ (ಬೆಸ್ಟ್ ಫೀಲ್ಡರ್), ಚಿದಾನಂದ್ (ಬೆಸ್ಟ್ ಕೀಪರ್), ಕುಂದಾಪುರದ ನಾಗರಾಜ್ (ಪಂದ್ಯ ಪುರುಷ), ಪ್ರದೀಪ್ ಶೆಟ್ಟಿ (ಸರಣಿ ಶ್ರೇಷ್ಠ) ಪ್ರಶಸ್ತಿ ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net