

ಬೆಂಗಳೂರು:
ವಿಧಾನಸಭೆ ಕಲಾಪ ನಿಯಮಾವಳಿ ಪರಿಶೀಲನೆಗಾಗಿ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಅವರು ಸಮಿತಿಯನ್ನು ರಚಿಸಿದ್ದಾರೆ.
ನಿಯಮ 368 ಮೇರೆಗೆ ಸಮಿತಿ ರಚಿಸಲಾಗಿದ್ದು, ವಿಧಾನಸಭೆ ಉಪಾಧ್ಯಕ್ಷ ರುದ್ರಪ್ಪ ಮಾನಪ್ಪ ಲಮಾಣಿ, ಕಾನೂನು ಸಚಿವ ಎಚ್.ಕೆ.ಪಾಟೀಲ್, ಗೃಹ ಸಚಿವ ಜಿ.ಪರಮೇಶ್ವರ್, ಕಂದಾಯ ಸಚಿವ ಕೃಷ್ಣಭೈರೇಗೌಡ, ದೆಹಲಿ ಪ್ರತಿನಿಧಿ ಟಿ.ಬಿ.ಜಯಚಂದ್ರ, ಶಾಸಕರಾದ ಎಸ್.ಸುರೇಶ್ ಕುಮಾರ್, ಆರಗ ಜ್ಞಾನೇಂದ್ರ, ಎಚ್.ಡಿ.ರೇವಣ್ಣ ಸಮಿತಿ ಸದಸ್ಯರಾಗಿದ್ದಾರೆ.