ದಾಖಲೆ ಇಲ್ಲದ 3.2 ಲಕ್ಷ ರೂ. ಜಪ್ತಿ

PH 01
Published on

ಅಫಜಲಪುರ: ದಾಖಲೆಯಿಲ್ಲದ ಸುಮಾರು 3.2 ಲಕ್ಷ ರೂ,ಗಳನ್ನು ವಶಪಡಿಸಿಕೊಂಡ ಘಟನೆ ಸೊನ್ನ ಚೆಕ್‌ಪೋಸ್ಟ್ ಬಳಿ ಶುಕ್ರವಾರ ಜರುಗಿದೆ.

ಪಟ್ಟಣದ ನಿವಾಸಿ ಕಾಂತಪ್ಪ ಮ್ಯಾಳೇಸಿ ಎಂಬುವವರು ಯಾವುದೇ ದಾಖಲೆ ಇಲ್ಲದೆ ಬೈಕ್ ಮೇಲೆ ಹಣ ಕೊಂಡ್ಯೊಯುತ್ತಿದ್ದರು. ಸಿಪಿಐ ರಾಜಶೇಖರ್ ಬಡದೇಸಾರ ಹಾಗೂ ಅಧೀಕ್ಷಕ ಸಂತೋಷ ಹೊಸಮನಿ ನೇತೃತ್ವದಲ್ಲಿನ ತಂಡ ಪರಿಶೀಲನೆ ನಡೆಸಿದಾಗ, ನಗದು ದೊರಕಿದೆ. ಮುಂದಿನ ತನಿಖೆಗಾಗಿ ಚುನಾವಣಾಧಿಕಾರಿಗಳಿಗೆ ಮಾಹಿತಿ ಸಲ್ಲಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net