ಕಲಬುರಗಿ ವಿ.ವಿ. ಪೊಲೀಸರ ಭರ್ಜರಿ ಕಾರ್ಯಾಚರಣೆ; 8 ಕುಖ್ಯಾತ ದರೋಡೆಕೋರರ ಬಂಧನ....

klb dfg
Published on

ಕಲಬುರಗಿ: ಕಲಬುರಗಿ ವಿಶ್ವವಿದ್ಯಾಲಯ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಎಂಟು ಜನ ಕುಖ್ಯಾತ ದರೋಡೆಕೋರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತರಿಂದ ಬರೋಬ್ಬರಿ 84,64,000 ಲಕ್ಷ ರೂಪಾಯಿ ಮೌಲ್ಯದ 1 ಕೆಜಿ 800 ಗ್ರಾಂ ಬಂಗಾರವನ್ನು ವಶಪಡಿಸಿಕೊಂಡಿದ್ದಾರೆ. ಸಚೀನ್, ವಿಕ್ಕಿ, ಮಹಿಬೂಬ್, ರವೀಂದ್ರ, ರಾಮ್, ದತ್ತು, ಲೋಕೇಶ್ ಮತ್ತು ತಿಮ್ಮಣ್ಣ ಸೇರಿದಂತೆ ಎಂಟು ಜನ ಆರೋಪಿಗಳನ್ನು ಬಂಧಿಸಲಾಗಿದೆ.

ನವೆಂಬರ್ 23 ರಂದು ಶಹಬಾದ್ ರಸ್ತೆಯ ಧರ್ಮಾಪುರ ಬಸ್ ನಿಲ್ದಾಣದ ಬಳಿ ವ್ಯಕ್ತಿಯಬ್ಬರನ್ನು ಅಪಹರಣ ಮಾಡಿದ್ದರು. ನಂತರ ಬೈಕ್ ಮೇಲೆ‌ ಕೂರಿಸಿಕೊಂಡು ಜಮೀನೊಂದಕ್ಕೆ ಕರೆದುಕೊಂಡು ಹೋಗಿದ್ದರು. ಈ ವೇಳೆ ವ್ಯಕ್ತಿಗೆ ಬ್ಲೇಡ್ ತೋರಿಸಿ 1 ಕೆಜಿ 800 ಗ್ರಾಂ ಬಂಗಾರವನ್ನು ದೋಚಿ ಪರಾರಿಯಾಗಿದ್ದರು. ಡಿಸೆಂಬರ್ 09 ರಂದು ಖಣದಾಳ್ ಬಳಿ ಆರೋಪಿಗಳು ನಿಂತಿದ್ದಾಗ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಕಾರ್ಯಾಚರಣೆ ಕಲಬುರಗಿ ಜಿಲ್ಲೆ ಪೊಲೀಸ್ ಇತಿಹಾಸದಲ್ಲಿ ಅತೀ ದೊಡ್ಡ ಭೇಟೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net